Telegram Join My Telegram WhatsApp Join My WhatsApp

ಮೆರುಗು ಮತ್ತು ಆರ್ಥಿಕ ಆಧಾರಿತ ಸಹಾಯಧನ : ಈ ಯೋಜನೆಯ ಲಾಭ ಏನು? ಯಾರು ಅರ್ಹರು ? ಸಂಪೂರ್ಣ

ಶಿಕ್ಷಣದಲ್ಲಿ ಮೆರುಗು ಹೊಂದಿರುವ ಆದರೆ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ” ಮೆರುಗು ಮತ್ತು ಆರ್ಥಿಕ ಆಧಾರಿತ scholarship ” ಯೋಜನೆಯನ್ನು ಜಾರಿಗೆ ತಂದಿವೆ . ಈ ಯೋಜನೆಯಿಂದ ಪ್ರತಿಭಾವಂತ ವಿಧ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸಲು ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ

ಮೆರುಗು ಮತ್ತು ಆರ್ಥಿಕ ಆಧಾರಿತ scholarship ಅಂದರೆ ಏನು ?

Merit – cum – means scholarship ಎಂದರೆ ವಿದ್ಯಾರ್ಥಿಯ ವಿದ್ಯಾಭ್ಯಾಸದಲ್ಲಿ ಪಡೆದ ಅಂಕಗಳು  ( merit ) ಮತ್ತು ಕುಟುಂಬದ ಆರ್ಥಿಕ ಸ್ಥಿತಿ ( means) ಎರಡನ್ನು  ಪರಿಗಣಿಸಿ ನೀಡುವ ವಿದ್ಯಾರ್ಥಿ ವೇತನ ಆಗಿದೆ . ಅಂದರೆ ಉತ್ತಮ ಅಂಕ ಪಡೆದಿರಬೇಕು , ಕುಟುಂಬದ ಆದಾಯ ಕಡಿಮೆ ಇರಬೇಕು  ಈ ಎರಡು ಅಂಶಗಳನ್ನು ಆಧರಿಸಿ ವಿದ್ಯಾರ್ಥಿಗೆ  scholarship  ನೀಡಲಾಗುತ್ತದೆ

ಯೋಜನೆಯ ಮುಖ್ಯ ಉದ್ದೇಶ :

ಆರ್ಥಿಕ ಸಮಸ್ಯೆಯಿಂದ ವಿದ್ಯಾಬ್ಯಾಸ ನಿಲ್ಲಿಸಬಾರದು , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದು , ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸುವುದು , ಸಾಮಾಜಿಕ ಸಮಾನತೆ ಸಾಧಿಸುವುದು

ಯಾರು ಈ scholarship ನೀಡುತ್ತಾರೆ ?

ಈ ವಿಧದ scholarship ಅನ್ನು ಹಲವಾರು ಸಂಸ್ಥೆಗಳು ನೀಡುತ್ತವೆ

1. ಕೇಂದ್ರ ಸರ್ಕಾರ . ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ , ಶಿಕ್ಷಣ ಸಚಿವಾಲಯ

2.ರಾಜ್ಯ ಸರ್ಕಾರಗಳು . ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳು ತಮ್ಮದೇ ಯೋಜನೆಗಳನ್ನು ಹೊಂದಿದೆ

3. ಖಾಸಗಿ ಸಂಸ್ಥೆಗಳು . TATA ಟ್ರಸ್ಟ್ ಮತ್ತು ಇನ್ಪೋಸಿಸ್ ಪೌಂಡೇಶನ್

ಅರ್ಹತೆ : ( eligibility)

ಮೆರಗು ಮತ್ತು ಆರ್ಥಿಕ ಆಧಾರಿತ scholarship ಪಡೆಯಲು ಸಾಮಾನ್ಯವಾಗಿ ಈ ಅರ್ಹತೆಗಳು ಬೇಕಾಗುತ್ತವೆ

* ಶಿಕ್ಷಣ ಅರ್ಹತೆ : ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ 50% ರಿಂದ 70% ಅಂಕಗಳು . ಮಾನ್ಯ ಶಾಲಾ ಕಾಲೇಜುಗಳಲ್ಲಿ ಓದುತ್ತಿರಬೇಕು

* ಆರ್ಥಿಕ ಅರ್ಹತೆ : ಕುಟುಂಬದ ವಾರ್ಷಿಕ ಆದಾಯ ₹ 2.5 ಲಕ್ಷದಿಂದ ₹ 8 ಲಕ್ಷದ ಒಳಗೆ ಇರಬೇಕು( ಯೋಜನೆಗೆ ಅನುಗುಣವಾಗಿ ಬದಲಾಗುತ್ತದೆ )

* ಇತರೆ ನಿಯಮಗಳು – ಭಾರತೀಯ ನಾಗರಿಕರಾಗಿರಬೇಕು , ಒಂದೇ ಸಮಯದಲ್ಲಿ ಎರಡು  scholarship ಪಡೆಯಲು ಅವಕಾಶ ಇರದಿರಬಹುದು

Scholarship ಮೊತ್ತ ( benifits)

scholarship ಮೂಲಕ ವಿಧ್ಯಾರ್ಥಿಗಳಿಗೆ ನೀಡುವ ಆರ್ಥಿಕ ಸಹಾಯ ಯೋಜನೆಯ ಪ್ರಕಾರ ಬದಲಾಗುತ್ತದೆ

₹5,000 – ₹20,000 ವರ್ಷಕ್ಕೆ . ಟ್ಯೂಷನ್ ಫಿಜ್ ಸಂಪೂರ್ಣ ಅಥವಾ ಭಾಗಶಃ ಭರಣೆ , ಹಾಸ್ಟೆಲ್ ಮತ್ತು ಮೆಸ್ ಶುಲ್ಕ ಸಹಾಯ , ಪುಸ್ತಕ ಮತ್ತು ಇತರ ಶೈಕ್ಷಣಿಕ ವೆಚ್ಚಗಳಿಗೆ ನೆರವು . ಕೆಲವು ಯೋಜನೆಗಳಲ್ಲಿ ₹50,000 ಅಥವಾ ಅದಕ್ಕಿಂತ ಹೆಚ್ಚು ಸಹಾಯಧನವು ದೊರೆಯಬಹುದು

ಯಾವ ಕೋರ್ಸ್ ಗಳಿಗೆ ಅನ್ವಯಿಸುತ್ತದೆ ?

Merit – cum- means scholarship ವಿವಿಧ ಶಿಕ್ಷಣ ಹಂತಗಳಿಗೆ ಅನ್ವಯಿಸುತ್ತವೆ

PUC ( 11 ರಿಂದ 12 ನೇ ತರಗತಿ)

ಡಿಗ್ರಿ ( BA, BCOM,BSC )

ಇಂಜಿನಿಯರಿಂಗ್

ಮೆಡಿಕಲ್

ಪೋಸ್ಟ್ ಗ್ರಾಜುವೇಷನ್

ಪ್ರೊಫೆಷನಲ್ ಕೋರ್ಸ್ ಗಳು

ಅರ್ಜಿ ಸಲ್ಲಿಸುವ ವಿಧಾನ :

ಈ scholarship ಗೆ ಸಾಮಾನ್ಯವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಹಂತಗಳು : national scholarship portal ಅಥವಾ ರಾಜ್ಯ ಪೋರ್ಟಲ್ ಗೆ ಭೇಟಿ ನೀಡಿ , ನೋಂದಣಿ ಮಾಡಿ. ಲಾಗಿನ ಮಾಡಿ . Merit – cum- means scholarship ಆಯ್ಕೆ ಮಾಡಿ . ಅರ್ಜಿ ಫಾರ್ಮ್ ಭರ್ತಿ ಮಾಡಿ . ದಾಖಲೆಗಳನ್ನು ಅಪ್ಲೋಡ್ ಮಾಡಿ. submit ಮಾಡಿ

ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್

ಆದಾಯ ಪ್ರಮಾಣಪತ್ರ

ಅಂಕಪಟ್ಟಿ

ಬ್ಯಾಂಕ್ ಖಾತೆ ವಿವರ

ಕಾಲೇಜು ಪ್ರವೇಶ ದಾಖಲೆ

ಜಾತಿ ಪ್ರಮಾಣ ಪತ್ರ ( ಅಗತ್ಯ ವಿದ್ದರೆ)

ಆಯ್ಕೆ ಪ್ರಕ್ರಿಯೆ:

* ಅರ್ಜಿ ಪರಿಶೀಲನೆ

* ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್

* ಆದಾಯ ಪರಿಶೀಲನೆ

* ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು

* ಕೆಲವು ಯೋಜನೆಗಳಲ್ಲಿ ಸಂದರ್ಶನ ಅಥವಾ ಡಾಕ್ಯುಮೆಂಟ್ ವೆರಿಫೈ ಕೂಡ ಇರಬಹುದು

ಯೋಜನೆಯ ಪ್ರಮುಖ ಪ್ರಯೋಜನಗಳು:

ಆರ್ಥಿಕವಾಗಿ ದುರ್ಬಲ ವಿಧ್ಯಾರ್ಥಿಗಳಿಗೆ ದೊಡ್ಡ ಸಹಾಯ . ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅವಕಾಶ . ಶಿಕ್ಷಣ ತೊರೆಯುವ ಪ್ರಮಾಣವನ್ನು ಕಡಿಮೆ. ಸಮಾಜದಲ್ಲಿ ಸಮಾನತೆ ಹೆಚ್ಚಳ .

ಗಮನಿಸಬೇಕಾದ ವಿಷಯಗಳು:

ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು . ಸರಿಯಾದ ದಾಖಲೆಗಳನ್ನು ಮಾತ್ರ ಅಪ್ಲೋಡ್ ಮಾಡಬೇಕು  ಅಂಕ ಮತ್ತು ಆದಾಯ ಮಾಹಿತಿ ಸರಿಯಾಗಿರಬೇಕು . ಪ್ರತಿ ವರ್ಷ renewal ಮಾಡಬೇಕು

ಸಮಾರೋಪ :

ಮೆರಗು ಮತ್ತು ಆರ್ಥಿಕ ಆಧಾರಿತ scholarship  ಯೋಜನೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುವ ಪ್ರಮುಖ ಸಾಧನಗಳಾಗಿವೆ. ಉತ್ತಮ ಅಂಕಗಳೊಂದಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಈ ಯೋಜನೆಗಳು ದೊಡ್ಡ ರೀತಿಯಲ್ಲಿ ಸಹಾಯಕವಾಗುತ್ತವೆ . ಸರಿಯಾದ ಮಾಹಿತಿ . ಸರಿಯಾದ ಅರ್ಜಿ ಸಲ್ಲಿಕೆ ಮತ್ತು ಅಗತ್ಯ  ದಾಖಲೆಗಳೊಂದಿಗೆ ನೀವು ಈ scholarship  ಪಡೆಯಬಹುದು ಇದು ನಿಮ್ಮ ಶಿಕ್ಷಣ ಮತ್ತು ಜೀವನದಲ್ಲಿ ಮಹತ್ವದ ಬದಲಾವಣೆ ತರಬಲ್ಲದು

ನೆನಪಿರಲಿ :

ನಿಮ್ಮ vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

Leave a Comment