ಭಾರತದಲ್ಲಿ ಕ್ರಿಕೆಟ್ ಎಂದರೆ ಅದು ಜನರ ಭಾವನೆ. ವಿಷಯವಾಗಿ RCB ಪಂದ್ಯಗಳು ನಡೆದಾಗ ಅಭಿಮಾನಿಗಳ ಉತ್ಸಾಹ ಅತೀವವಾಗಿರುತ್ತದೆ. IPL ವೇಳೆ RCB ಪಂದ್ಯಗಳಿಗೆ ಟಿಕೆಟ್ ಗಳ ಬೇಡಿಕೆ ತುಂಬ ಹೆಚ್ಚಾಗುತ್ತದೆ. ಇದೇ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಕೆಲ ಮೋಸಗಾರರು ಟಿಕೆಟ್ ವಂಚನೆ ನಡೆಸುತ್ತಿದ್ದಾರೆ ಈ ಲೇಖನದಲ್ಲಿ RCB ಪಂದ್ಯ ಟಿಕೇಟ್ ವಂಚನೆ ಹೇಗೆ ನಡೆಯುತ್ತದೆ , ಅದನ್ನು ಹೇಗೆ ಗುರುತಿಸಬೇಕು ಮತ್ತು ಅದರಿಂದ ತಪ್ಪಿಸಿಕೊಳ್ಳುವ ಮಾರ್ಗಗಳು ಯಾವುವು ಎಂಬುದನ್ನು ಸಂಪೂರ್ಣವಾಗಿ ವಿವರಿಸಲಾಗಿದೆ.
ಟಿಕೆಟ್ ವಂಚನೆ ಎಂದರೇನು?
RCB ಪಂದ್ಯಗಳಿಗಾಗಿ ನಕಲಿ ಅಥವಾ ಅಸ್ತಿತ್ವದಲ್ಲೇ ಇಲ್ಲದ ಟೀಕೆಗಳನ್ನು ಮಾರಾಟ ಮಾಡುವುದನ್ನು ಟಿಕೆಟ್ ವಂಚನೆ ಎಂದು ಕರೆಯುತ್ತಾರೆ. ಮೋಸಗಾರರು ಜನರ ಉತ್ಸಾಹವನ್ನು ಬಳಸಿಕೊಂಡು ಹಣವನ್ನು ಕಸಿದುಕೊಳ್ಳುತ್ತಾರೆ. ಬಹುಪಾಲು ಜನರು ಕೊನೆಯ ಕ್ಷಣದಲ್ಲಿ ಟಿಕೆಟ್ ಹುಡುಕುವಾಗ ಈ ರೀತಿಯ ವಂಚನೆಗೆ ಒಳಗಾಗುತ್ತಾರೆ
ವಂಚನೆ ನೆಡೆಯುವ ಸಾಮಾನ್ಯ ವಿಧಾನಗಳು !
1. ಸೋಶಿಯಲ್ ಮೀಡಿಯಾ ಮೂಲಕ ಮೋಸ : ಫೇಸ್ ಬುಕ್, ವಾಟ್ಸಾಪ್ , ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ RCB ಟಿಕೆಟ್ ಲಭ್ಯ ಎಂಬ ಜಾಹೀರಾತುಗಳನ್ನು ಪೋಸ್ಟ್ ಮಾಡುತ್ತಾರೆ ಕಡಿಮೆ ಬೆಲೆಗೆ ಟಿಕೆಟ್ ನೀಡುತ್ತೇವೆ ಎಂದು ಹೇಳಿ ಮುಂಗಡ ಹಣ ಕೇಳುತ್ತಾರೆ
2. ನಕಲಿ ವೆಬ್ ಸೈಟ್ ಗಳು : ಕೆಲವರು ಅಧಿಕೃತ ವೆಬ್ ಸೈಟ್ ಗಳಂತೆ ಕಾಣುವ ನಕಲಿ ವೆಬ್ ಸೈಟ್ ಗಳನ್ನು ರಚಿಸುತ್ತಾರೆ . ಇವುಗಳಲ್ಲಿ ಪಾವತಿ ಮಾಡಿದ ಮೇಲೆ ಯಾವುದೇ ಟಿಕೆಟ್ ಸಿಗುವುದಿಲ್ಲ
3. QR ಕೋಡ್ ವಂಚನೆ : ಮೋಸಗಾರರು ನಕಲಿ QR ಕೋಡ್ ಹೊಂದಿರುವ ಟಿಕೆಟ್ ಗಳನ್ನು ನೀಡುತ್ತಾರೆ, ಸ್ಟೇಡಿಯಂನಲ್ಲಿ ಪ್ರವೇಶ ಮಾಡುವ ಸಮಯದಲ್ಲಿ ಅದು ಕೆಲಸ ಮಾಡುವುದಿಲ್ಲ
4. ಬ್ಲ್ಯಾಕ್ ಟಿಕೆಟ್ ಮಾರಾಟ : ಸ್ಟೇಡಿಯಂ ಹೊರಗೆ ಹೆಚ್ಚು ದರಕ್ಕೆ ಟಿಕೆಟ್ ಮಾರಾಟ ಮಾಡುವವರು ನಕಲಿ ಟಿಕೆಟ್ ಗಳನ್ನ ನೀಡುವ ಸಾದ್ಯತೆ ಇದೆ
ಏಕೆ RCB ಪಂದ್ಯಗಳಿಗೆ ಈ ರೀತಿಯ ಹೆಚ್ಚು ವಂಚನೆಗಳು ಕಂಡುಬರುತ್ತವೆ?
M.Chinnaswamy stadium ನಲ್ಲಿ ನಡೆಯುವ RCB ಪಂದ್ಯಗಳು ಬಹಳ ಜನಪ್ರಿಯವಾಗಿವೆ ಸ್ಟೇಡಿಯಂ ಸಾಮರ್ಥ್ಯ ಸೀಮಿತವಾಗಿರುವುದರಿಂದ ಟಿಕೆಟ್ ಗಳು ಬೇಗನೆ ಖರೀದಿ ಆಗುತ್ತವೆ ಆದ್ದರಿಂದ ಅಭಿಮಾನಿಗಳು ಎಸ್ಟು ಹಣ ನೀಡಿದರು ಪರವಾಗಿಲ್ಲ ಒಟ್ಟಿನಲ್ಲಿ ಟಿಕೆಟ್ ಖರೀದಿಗೆ ಮುಂದಾಗುತ್ತಾರೆ ಮತ್ತು ಟಿಕೆಟ್ ಖರೀದಿಗೆ ಸಿದ್ಧರಾಗುತ್ತಾರೆ . ಈ ಪರಿಸ್ಥಿತಿಯನ್ನು ಮೋಸಗಾರರು ದುರುಪಯೋಗ ಪಡಿಸಿಕೊಳ್ಳುತ್ತಾರೆ
ಟಿಕೆಟ್ ವಂಚನೆಯ ಪರಿಣಾಮಗಳು !
* ಹಣ ನಷ್ಟವಾಗುತ್ತದೆ
* ಪಂದ್ಯ ನೋಡಲು ಅವಕಾಶ ಕಳೆದುಕೊಳ್ಳುತ್ತಾರೆ
* ಮಾನಸಿಕ ಬೇಸರ ಮತ್ತು ನಿರಾಸೆ
* ಬ್ಯಾಂಕ್ ಅಥವಾ UPI ಮಾಹಿತಿಯ ದುರುಪಯೋಗ
ವಂಚನೆ ತಪ್ಪಿಸಲು ಪ್ರಮುಖ ಸಲಹೆಗಳು :
ಅಧಿಕೃತ ವೆಬ್ ಸೈಟ್ ಮೂಲಕ ಮಾತ್ರ ಖರೀದಿ ಮಾಡಿ , ಟಿಕೆಟ್ ಗಳನ್ನ ಅಧಿಕೃತ ಪ್ಲಾಟ್ ಫಾರ್ಮ್ ಗಳಿಂದ ಮಾತ್ರ ಖರೀದಿಸಿ. ಉದಾಹರಣೆಗೆ , BookMyShow ಮತ್ತು Paytm insider ಗಳಲ್ಲಿ ಖರೀದಿಸಬಹುದು . ಅನುಮಾನಾಸ್ಪದ ಆಫರ್ ಗಳಿಂದ ದೂರವಿರಿ , ಕಡಿಮೆ ಬೆಲೆಗೆ ಟಿಕೆಟ್ ,ಅಥವಾ VIP ಪಾಸ್ ಎಂಬ ಆಫರ್ ಗಳು ಕಂಡರೆ ಎಚ್ಚರಿಕೆ ವಹಿಸಿ . ಹಣ ವರ್ಗಾವಣೆ ಮಾಡುವ ಮೊದಲು ಪರಿಶೀಲನೆ ಮಾಡಿ . UPI ಅಥವಾ ಬ್ಯಾಂಕ್ ಮೂಲಕ ಹಣ ಕಳುಹಿಸುವ ಮೊದಲು ಆ ವ್ಯಕ್ತಿಯ ನಂಬಿಕೆಯನ್ನು ಪರಿಶೀಲಿಸಿ ,ಟಿಕೆಟ್ ನಲ್ಲಿ ಇರುವ QR ಕೋಡ್ ಪರಿಶೀಲಿಸಿ ಅಧಿಕೃತ ಆ್ಯಪ್ ಗಳ ಮೂಲಕವೇ ವೆರಿಪೈ ಮಾಡುವುದು ಉತ್ತಮ .ಅಪರಿಚಿತ ವ್ಯಕ್ತಿಗಳಿಂದ ಟಿಕೆಟ್ ಖರೀದಿಸುವುದು ಬೇಡ
ವಂಚನೆಗೆ ಒಳಗಾದರೆ ಏನು ಮಾಡಬೇಕು ?
1. ತಕ್ಷಣ ಬ್ಯಾಂಕ್ ಗೆ ಮಾಹಿತಿ ನೀಡಿ , ನಿಮ್ಮ ಹಣ ಸುರಕ್ಷಿತವಾಗಿ ಇಡಲು ಬ್ಯಾಂಕ್ ಗೆ ತಿಳಿಸಿ
2. ಸೈಬರ್ ಕ್ರೈಂ ಗೆ ದೂರು ನೀಡಿ , ಭಾರತ ಸರ್ಕಾರದ cyber crime portal India ನಲ್ಲಿ ದೂರು ಸಲ್ಲಿಸಬಹುದು
3. ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ , ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ
ಸರ್ಕಾರ ಮತ್ತು ಪೊಲೀಸ್ ಎಚ್ಚರಿಕೆ !
ಪ್ರತಿ ವರ್ಷ IPL ಸಮಯದಲ್ಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಾರೆ ಟಿಕೆಟ್ ಗಳನ್ನು ಅಧಿಕೃತ ಮಾರ್ಗಗಳಿಂದ ಮಾತ್ರ ಖರೀದಿಸಬೇಕು ಎಂದು ಸಲಹೆ ನೀಡುತ್ತಾರೆ ಹಲವರು ಭಾರಿ ಮೋಸಗಾರರನ್ನು ಬಂಧಿಸಿರುವ ಉದಾಹರಣೆಗಳಿವೆ
ಅಂತಿಮ ಮಾತು :-
RCB ಪಂದ್ಯಗಳನ್ನು ನೋಡುವುದು ಪ್ರತಿಯೊಬ್ಬ ಅಭಿಮಾನಿಯ ಕನಸು ಆಗಿದೆ ಆದರೆ ಈ ಉತ್ಸಾಹವನ್ನು ಮೋಸಗಾರರು ದುರುಪಯೋಗ ಪಡಿಸಿಕೊಳ್ಳಬಾರದು ಜಾಗೃತಿಯಿಂದ ನಡೆದುಕೊಂಡರೆ ಟಿಕೆಟ್ ವಂಚನೆಯಿಂದ ತಪ್ಪಿಸಿಕೊಳ್ಳಬಹುದು ಸದಾ ಅಧಿಕೃತ ಮೂಲಗಳನ್ನು ನಂಬಿ ಅನುಮಾನಾಸ್ಪದ ಆಫರ್ ಗಳಿಂದ ದೂರವಿರಿ
ಸಾರಾಂಶ : –
RCB ಟಿಕೆಟ್ ವಂಚನೆ ಒಂದು ದೊಡ್ಡ ಸಮಸ್ಯೆಯಾಗಿದ್ದು ಪ್ರತಿಯೊಬ್ಬ ಅಭಿಮಾನಿಯೂ ಎಚ್ಚರಿಕೆಯಿಂದ ಇರಬೇಕು ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಹಣ ಮತ್ತು ನಿಮ್ಮ ಸಮಯವನ್ನು ಉಳಿಸಬಹುದು . ಯಾವುದೇ ನಡೆಯುವ ಪಂದ್ಯಗಳ ಟಿಕೆಟ್ ಬುಕ್ ಮಾಡುವ ಸಂಧರ್ಭದಲ್ಲಿ ಎಚ್ಚರಿಕೆ ಇಂದ ಮಾಡಿ ಏಕೆಂದರೆ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಸಹ ಮೋಸಗಾರರು ದುರುಪಯೋಗ ಪಡಿಸಿಕೊಳ್ಳುತ್ತಾರೆ
ನೆನಪಿರಲಿ:
ನಿಮ್ಮ vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ