ನಿಮ್ಮ ಸ್ವಂತ ಊರಿನಲ್ಲಿ ಇದ್ದುಕೊಂಡು ಸರಕಾರಿ ಕೆಲಸದ ಮಾದರಿಯಲ್ಲೇ ಒಂದು ಉದ್ಯೋಗ ಮಾಡಬೇಕು ಎಂಬಆಸೆ ನಿಮಗಿದೆಯೇ ? ಆಗಿದ್ದಾರೆ ನಿಮಗೊಂದು ಸುವರ್ಣ ಅವಕಾಶ ಕರ್ನಾಟಕ ಸರ್ಕಾರದ ಗ್ರಾಮ ಒನ್ (Gram one) ಕೇಂದ್ರಗಳನ್ನು ನೆಡೆಸಲು ಈಗ ಹೊಸದಾಗಿ ಅರ್ಜಿ ಆಹ್ವಾನಿಸಲಾಗಿದ್ದು ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಇದು ಬದುಕು ಕಟ್ಟಿಕೊಳ್ಳುವ ಉತ್ತಮ ದಾರಿಯಾಗಿದೆ
ಗ್ರಾಮ್ ಒನ್ ಪ್ರಾಂಚೈಸಿ ಪಡೆದುಕೊಳ್ಳುವುದು ಹೇಗೆ ?
ಯಾರು ಅರ್ಜಿ ಸಲ್ಲಿಸಬಹುದು ? ಮತ್ತು ಏನೇನು ಮಾಡಬೇಕು ?
ಕನಿಷ್ಠ PUC ಪಾಸಾಗಿರುವ ಅಥವಾ ಡಿಪ್ಲೊಮೊ / ಪದವಿ ಹೊಂದಿರುವ ಸ್ಥಳೀಯ ನಿವಾಸಿಗಳಿಗೆ ಆದ್ಯತೆ ನೀಡಲಾಗುತ್ತದೆ ಸುಮಾರು ಒಂದರಿಂದ ಎರಡು ಲಕ್ಷ ಹೂಡಿಕೆಯಲ್ಲಿ ಕಂಪ್ಯೂಟರ್ ,ಪ್ರಿಂಟರ್ ಸ್ಕ್ಯಾನರ್ ಮತ್ತು ಹೈ ಸ್ಪೀಡ್ ಇಂಟರ್ನೆಟ್ ಸೌಲಭ್ಯ ಹೋದಳು ಈ ಬಂಡವಾಳ ಅಗತ್ಯ
ಅರ್ಜಿ ನೋಂದಾಯಿಸಲು Karnatakaone.gov.in ವೆಬ್ಸೈಟ್ ಗೆ ಭೇಟಿ ನೀಡಿ. ನಿಮ್ಮ ಅರ್ಜಿ ನೋಂದಾಯಿಸಬಹುದು ಅರ್ಜಿಯ ಶುಲ್ಕ 100 ಮತ್ತು ಭದ್ರತಾ ಠೇವಣಿ 5000 (ನಿಮ್ಮ ಅರ್ಜಿ ಆಯ್ಕೆಯಾದ ನಂತರ 5000 ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಕಟ್ಟಬೇಕು )
ಅಗತ್ಯ ದಾಖಲೆಗಳು
- ಗುರುತಿನ ಚೀಟಿ, ಆಧಾರ್ ಕಾರ್ಡ್,ಮತ್ತು ಪಾನ್ ಕಾರ್ಡ್ ,
- ಶೈಕ್ಷಣಿಕ ದಾಖಲೆ ಪಿಯುಸಿ ಅಂಕ ಪಟ್ಟಿ (ಮಾರ್ಕ್ಸ್ ಕಾರ್ಡ್)
- ಸುರಕ್ಷಿತ ದಾಖಲೆ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ (ಕಡ್ಡಾಯ)
ಗ್ರಾಮ್ ಒನ್ ಅಂದರೆ ಏನು?
ಹಳ್ಳಿ ಜನರಿಗೆ ಪಹಣಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ,ಅಥವಾ ಬ್ಯಾಂಕಿಂಗ್ ಸೇವೆಗಳಿಗಾಗಿ ತಾಲೂಕು ಕಚೇರಿಗೆ ಅಲೆಯುವ ಸಂಕಟ ತಪ್ಪಿಸಲು ಸರ್ಕಾರ ತಂದಿರುವ ಯೋಜನೆಯೇ ಈ ಗ್ರಾಮ್ ಒನ್. ಈ ಕೇಂದ್ರವನ್ನು ನೀವೇ ನೆಡಸಿ ಜನರಿಗೆ ಸೇವೆ ನೀಡುತ್ತಾ ಪ್ರತಿ ತಿಂಗಳು 20 ರಿಂದ 30 ಸಾವಿರ ಆದಾಯಗಳಿಸಬಹುದು
ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು ?
ಈ ಕೇಂದ್ರವನ್ನು ಆರಂಭಿಸಲು ಸರ್ಕಾರ ಕೆಲವು ಸರಳ ನಿಯಮಗಳನ್ನು ನೀಡಿದೆ. ವಿದ್ಯಾರ್ಹತೆ : ನೀವು ಕಾಣಿಸ್ತಾ ಪಿಯುಸಿ ಪಾಸ್ ಆಗಿದ್ದರೆ ಸಾಕು. ಅಥವಾ ಪದವಿ ಪಡೆದವರಿಗೂ ಅವಕಾಶ ಇದೆ
ತಾಂತ್ರಿಕ ಜ್ಞಾನ : ಕಂಪ್ಯೂಟರ್ ಬಳಸಲು ಕಾಣಿಸ್ತಾ ಜ್ಞಾನ ನಿಮ್ಮಲ್ಲಿರಬೇಕು
ಸ್ಥಳೀಯರು ನೀವು ಅದೇ ಗ್ರಾಮದ ಅಥವಾ ಸುತ್ತಮುತ್ತಲಿನ ನಿವಾಸಿಯಾಗಿರಬೇಕು
ಹೂಡಿಕೆ : ಕೇಂದ್ರ ಸ್ಥಾಪಿಸಲು ಸುಮಾರು ಒಂದರಿಂದ ಎರಡು ಲಕ್ಷ ರೂಪಾಯಿ ಬಂಡವಾಳ ಬೇಕಾಗುತ್ತದೆ (ಕಂಪ್ಯೂಟರ್, ಪ್ರಿಂಟರ್, ಇತ್ಯಾದಿ ಖರೀದಿಸಲು)
ಅರ್ಜಿ ಹಾಕುವಮುನ್ನ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ,
- ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ,
- ಪಿಯುಸಿ ಅಂಕ ಪಟ್ಟಿ,
- ಬ್ಯಾಂಕ್ ಪಾಸ್ ಬುಕ್ ಅಥವಾ ಕ್ಯಾನ್ಸಲ್ಡ್ ಚೆಕ್
- ಮತ್ತು ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ (ಇದು ಕಡ್ಡಾಯ )
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ನಾಲ್ಕು ಪೋಟೋ
ಕೇಂದ್ರದಲ್ಲಿ ಏನೇನು ಸೌಲಭ್ಯ ಇರಬೇಕು !
ಒಂದು ಪುಟ್ಟ ಕಚೇರಿಯಂತೆ ಇರಬೇಕಾಗುತ್ತದೆ
ಒಂದು ಲ್ಯಾಪ್ಟಾಪ್ ಅಥವಾ (PC) ಮತ್ತು ಪ್ರಿಂಟರ್, ಸ್ಕ್ಯಾನರ್, ವೇಗದ ಇಂಟರ್ನೆಟ್ ಸಂಪರ್ಕ ಜನರು ಕುಳಿತುಕೊಳ್ಳಲು ಆರರಿಂದ ಎಂಟು ಕುರ್ಚಿಗಳು ಮತ್ತು CCTV ಕ್ಯಾಮರಾ.
ಅರ್ಜಿ ಸಲ್ಲಿಸುವುದು ಹೇಗೆ ?
ಯಾವುದೇ ಮಧ್ಯವರ್ತಿಗಳ ಅಂಗಿಲ್ಲದೆ ನೀವೇ ಆನಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ
ಮೊದಲು http://Karnatakaone.gov.in ಪೋರ್ಟಲ್ ಗೆ ಭೇಟಿನೀಡಿ. ಮುಂದಣಿಯಲ್ಲಿ ರಿಜಿಸ್ಟರ್ ನಾವ್ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ಲಾಗ್ ಇನ್ ಆಗಿ ನಿಮ್ಮ ಹೆಸರು ವಿಳಾಸ ಮತ್ತೆ ಶೈಕ್ಷಣಿಕ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಅರ್ಜಿ ಪ್ರಕ್ರಿಯೆಗಾಗಿ 100 ರೂಪಾಯಿ ಶುಲ್ಕ vannu ಆನ್ ಲೈನ್ ನಲ್ಲಿ ಪಾವತಿಸಿ ನಿಮ್ಮ ಅರ್ಜಿ ಓಕೆ ಆದ ನಂತರ ಐದು ಸಾವಿರ ರುಪಾಯಿ ಭದ್ರತಾ ಠೇವಣಿ ಕಟ್ಟಬೇಕಾಗುತ್ತದೆ (ರಿಫುಂಡೆಬಲ್)
ನಿಮಗೊಂದು ಸೂಕ್ಷ್ಮ ಸಲಹೆ
ನಿಮ್ಮ ಗ್ರಾಮ್ ಒನ್ ಕೇಂದ್ರವು ಹಳ್ಳಿಯ ಬಸ್ ನಿಲ್ದಾಣ, ಮಾರುಕಟ್ಟೆ, ಮತ್ತು ಜನರು ಹೆಚ್ಚಾಗಿ ಓಡಾಡುವ ಜಾಗದಲ್ಲಿದ್ದರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ ಇದರಿಂದ ನಿಮ್ಮ ಸಂಪಾದನೆಯ ಹೆಚ್ಚಾಗುತ್ತದೆ ನಿಮ್ಮ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಗ್ರಾಮದಲ್ಲಿ ಇಂಟರ್ನೆಟ್ ಸಿಗ್ನಲ್ ಚೆನ್ನಾಗಿ ಬರುವ ಜಾಗದಲ್ಲಿ ಕಚೇರಿ ತೆರೆಯಿರಿ
ಪ್ರಮುಖ ಸಲಹೆ : ಸರ್ಕಾರದ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಈ ಕೆಲಸವು ಕೇವಲ ಉದ್ಯೋಗವಲ್ಲ ಅದೊಂದು ಸಮಾಜ ಸೇವೆ ಎಂದರೆ ತಪ್ಪಾಗಲಾರದು ಕಡಿಮೆ ಬಂಡವಾಳದಲ್ಲಿ ಸ್ವಂತ ಉದ್ಯೋಗ ಮಾಡಬೇಕೆಂಬ ಯುವಕ ಯುವತಿಯರಿಗೆ ಇದು ನಿಜಕ್ಕೂ ಸುವರ್ಣ ಅವಕಾಶ ತಡಮಾಡದೆ ಇಂದೇ ನಿಮ್ಮ ಅರ್ಜಿಗಳನ್ನು ಸಲ್ಲಿಸಿ ಮತ್ತು ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಿ