ಭಾರತದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಹಾಗೂ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಅತ್ಯಂತ ಮಹತ್ವದ ಯೋಜನೆ ಎಂದರೆ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ (PMEGP) . ಈ ಯೋಜನೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವಕರಿಗೆ ಉದ್ಯಮ ಆರಂಭಿಸಲು ಆರ್ಥಿಕ ಸಹಾಯವನ್ನು ನೀಡುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪ್ರಮುಖ ಉದ್ದೇಶ ಹೊಂದಿದೆ
ಯೋಜನೆಯ ಪರಿಚಯ :

PMEGP ಯೋಜನೆಯನ್ನು 2008 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಖಾದಿ ಮತ್ತು ಗ್ರಾಮೀಣ ಕೈಗಾರಿಕ ಆಯೋಗ (KVIC) ಮೂಲಕ ಜಾರಿಗೊಳಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ಹೊಸ ಉದ್ಯಮಗಳನ್ನು ಸ್ಥಾಪಿಸುವುದಕ್ಕೆ ಸಹಾಯ ಮಾಡುವುದು ಮತ್ತು ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು
ಈ ಯೋಜನೆಯ ಮೂಲಕ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳನ್ನು ಆರಂಭಿಸಲು ಸರ್ಕಾರದಿಂದ ಸಬ್ಸಿಡಿ (ಧನಸಹಾಯ) ನೀಡಲಾಗುತ್ತದೆ ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ನಗರ ಪ್ರದೇಶದಲ್ಲಿಯೂ ಉದ್ಯಮಶೀಲತೆ ಹೆಚ್ಚಾಗುತ್ತದೆ
ಯೋಜನೆಯ ಉದ್ದೇಶಗಳು
PMEGP ಯೋಜನೆಯ ಪ್ರಮುಖ ಉದ್ದೇಶಗಳು ಹೀಗಿವೆ :
ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸುವುದು
ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದು
ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನೆ ಹೆಚ್ಚಿಸುವುದು
ಯುವಕರಲ್ಲಿ ಉದ್ಯಮಶೀಲತೆ ( Entrepreneurship) ಬೆಳೆಸುವುದು
ಯೋಜನೆಯ ಮುಖ್ಯ ಲಕ್ಷಣಗಳು
PMEGP ಯೋಜನೆಯ ಪ್ರಮುಖ ವಿಶೇಷತೆಗಳು
1. ಸಬ್ಸಿಡಿ ಆಧಾರಿತ ಯೋಜನೆ ಸರ್ಕಾರದಿಂದ ಪ್ರಾಜೆಕ್ಟ್ ವೆಚ್ಚದ ಮೇಲೆ 15% ರಿಂದ 35% ವರೆಗೆ ಸಬ್ಸಿಡಿ ನೀಡಲಾಗುತ್ತದೆ
2. ಗ್ರಾಮ ಮತ್ತು ನಗರ ಎರಡಕ್ಕೂ ಅನ್ವಯ. ಈ ಯೋಜನೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಯುವಕರಿಗೆ ಅನ್ವಯಿಸುತ್ತದೆ
3. ಬ್ಯಾಂಕ್ ಸಾಲ ವ್ಯವಸ್ಥೆ. ಉದ್ಯಮ ಆರಂಭಿಸಲು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗುತ್ತದೆ
4. ವಿವಿಧ ಕ್ಷೇತ್ರಗಳಿಗೆ ಅನ್ವಯ ಉತ್ಪಾದನಾ ( manufacturing) mattu ಸೇವಾ ( sarvice) ಕ್ಷೇತ್ರಗಳಿಗೂ ಅನ್ವಯಿಸುತ್ತದೆ
ಅರ್ಹತೆ ( Eligibility)
PMEGP ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಅರ್ಹತೆಗಳನ್ನು ಹೊಂದಿರಬೇಕು :
ಕನಿಷ್ಠ 18 ವರ್ಷ ವಯಸ್ಸಿರಬೇಕು
10 ನೇ ತರಗತಿ ಪಾಸಾದವರು ( 10ಲಕ್ಷಕ್ಕಿಂತ ಹೆಚ್ಚು ಯೋಜನೆಗಳಿಗೆ )
ಸ್ವತ ಉದ್ಯಮ ಆರಂಭಿಸಲು ಆಸಕ್ತಿ ಇರಬೇಕು
ಯಾವುದೇ ಸರ್ಕಾರಿ ಸಬ್ಸಿಡಿ ಯೋಜನೆ ಬಳಸಿರಬಾರದು
ಸಬ್ಸಿಡಿ ವಿವರಗಳು
PMEGP ಯೋಜನೆಯಲ್ಲಿ ಸಬ್ಸಿಡಿ ಪ್ರಮಾಣವು ಅಭ್ಯರ್ಥಿಯ ವರ್ಗ ಮತ್ತು ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ
ವರ್ಗ ಗ್ರಾಮೀಣ ಪ್ರದೇಶ ನಗರ ಪ್ರದೇಶ
ಸಾಮಾನ್ಯ ವರ್ಗ 25% ,15% , SC/ST/OBC/ ಮಹಿಳೆ/ ವಿಕಲಚೇತನ 35%,25%
ಪ್ರಾಜೆಕ್ಟ್ ವೆಚ್ಚ ಮಿತಿ
ಉತ್ಪಾದನಾ ಕ್ಷೇತ್ರ :₹50 ಲಕ್ಷವರೆಗೆ
ಸೇವಾ ಕ್ಷೇತ್ರ ₹20 ಲಕ್ಷ ವರೆಗೆ
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :
PMEGP ಯೋಜನೆಗೆ ಅರ್ಜಿ ಸಲ್ಲಿಸುವುದು ಈಗ ತುಂಬಾ ಸುಲಭವಾಗಿದೆ:
1. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
2.ಅಧಿಕೃತ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಬೇಕು
3.ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
4. ಬ್ಯಾಂಕ್ ಪರಿಶೀಲನೆ ಮತ್ತು ಸಂದರ್ಶನ ಪ್ರಕ್ರಿಯೆ
5. ಅನುಮೋದನೆ ನಂತರ ಸಾಲ ಮತ್ತು ಸಬ್ಸಿಡಿ ಬಿಡುಗಡೆ
ಅಗತ್ಯ ದಾಖಲೆಗಳು :-
- ಆಧಾರ್ ಕಾರ್ಡ್ವಿ
- ವಿಳಾಸದ ಪುರಾವೆ
- ವಿದ್ಯಾರ್ಹPMತೆ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು
- ಪ್ರಾಜೆಕ್ಟ್ ವರದಿ
ಯೋಜನೆಯ ಪ್ರಯೋಜನಗಳು :
- PMEGP ಯೋಜನೆಯಿಂದ ಹಲವಾರು ಲಾಭಗಳಿವೆ :
- ಸ್ವಂತ ಉದ್ಯಮ ಆರಂಭಿಸಲು ಅವಕಾಶ
- ಸರ್ಕಾರದಿಂದ ಸಬ್ಸಿಡಿ ಸಹಾಯ
- ಉದ್ಯೋಗ ಸೃಷ್ಟಿ
- ಗ್ರಾಮೀಣ ಅಭಿವೃದ್ದಿಗೆ ಉತ್ತೇಜನ
- ಯುವಕರ ಆರ್ಥಿಕ ಸ್ವಾವಲಂಬನೆ
ಯಾವ ಉದ್ಯಮಗಳನ್ನು ಆರಂಭಿಸಬಹುದು ?
- PMEGP ಯೋಜನೆಯಡಿ ವಿವಿಧಿ ರೀತಿಯ ಉದ್ಯಮಗಳನ್ನು ಆರಂಭಿಸಬಹುದು :
- ಆಹಾರ ಸಂಸ್ಕರಣೆ ಉದ್ಯಮ
- ಹ್ಯಾಂಡ್ ಕ್ರಾಪ್ಟ್ ಮತ್ತು ಹ್ಯಾಂಡ್ ಲೂಮ್ ಉದ್ಯಮ
- ಕೃಷಿ ಆಧಾರಿತ ಉದ್ಯಮ
- ಸೇವಾ ಕ್ಷೇತ್ರ ( ಸಲೂನ್,ರಿಪೇರಿ ಅಂಗಡಿ ಇತ್ಯಾದಿ )
- ಸಣ್ಣ ಉತ್ಪಾದನಾ ಘಟಕಗಳು
ಯೋಜನೆಯ ಪ್ರಭಾವ
PMEGP ಯೋಜನೆಯು ಭಾರತದಲ್ಲಿ ಸಾವಿರಾರು ಉದ್ಯಮಗಳನ್ನು ಸ್ಥಾಪಿಸಲು ಸಹಾಯ ಮಾಡಿದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ಯುವಕರು ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ನೀಡುವರಾಗುತ್ತಿದ್ದಾರೆ
ಸವಾಲುಗಳು :
- ಯೋಜನೆಯಲ್ಲಿರುವ ಕೆಲವು ಸವಾಲುಗಳು
- ಬ್ಯಾಂಕ್ ಸಾಲ ಪಡೆಯುವಲ್ಲಿ ಕೆಲವು ತೊಂದರೆಗಳು
- ಪ್ರಾಜೆಕ್ಟ್ ವರದಿ ತಯಾರಿಸುವಲ್ಲಿ ಅನುಭದ ಕೊರತೆ
- ಮಾಹಿತಿ ಕೊರತೆ
- ಕೆಲವೊಮ್ಮೆ ಸಬ್ಸಿಡಿ ಬಿಡುಗಡೆ ವಿಳಂಬ
ಸಲಹೆಗಳು :
- ಯೋಜನೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲು :
- ಸರಿಯಾದ ಪ್ರಾಜೆಕ್ಟ್ ಆಯ್ಕೆ ಮಾಡಿಕೊಳ್ಳಿ
ತರಬೇತಿ ಪಡೆಯಿರಿ:
ಬ್ಯಾಂಕ್ ಜೊತೆ ಉತ್ತಮ ಸಂಪರ್ಕ ಇರಲಿ
ಮಾರುಕಟ್ಟೆ ಅಧ್ಯಯನ ಮಾಡಿ
ಸಮಾರೋಪ :
ಪ್ರಧಾನಮತ್ರಿ ಉದ್ಯೋಗ ಸೃಜನ ಕಾರ್ಯಕ್ರಮ PMEGP . ಯುವಕರಿಗೆ ಒಂದು ಉತ್ತಮ ಅವಕಾಶವಾಗಿದೆ ಈ ಯೋಜನೆಯ ಮೂಲಕ ಸ್ವಂತ ಉದ್ಯಮ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬಹುದು. ಸರ್ಕಾರ ನೀಡುವ ಸಬ್ಸಿಡಿ ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ವಿ ಉದ್ಯಮಿಯಾಗುವುದು ಸಾಧ್ಯ
ಈ ಯೋಜನೆ ಕೇವಲ ಉದ್ಯೋಗ ಸೃಷ್ಟಿಯಲ್ಲ, ದೇಶದ ಆರ್ಥಿಕ ಅಭಿವೃದ್ಧಿಗೆ ಸಹ ಸಹಾಯ ಮಾಡುತ್ತದೆ. ಆದ್ದರಿಂದ ಯುವಕರು ಈ ಯೋಜನೆಯ ಸದುಪಯೋಗ ಪಡೆದು ತಮ್ಮ ಭವಿಷ್ಯವನ್ನು ಸುಧಾರಿಸಿಕೊಳ್ಳಬೇಕು
ನೆನಪಿರಲಿ:
Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು