Telegram Join My Telegram WhatsApp Join My WhatsApp

Central sector scheme of scholarship ಮೂಲಕ ಎಷ್ಟು ಹಣ ಪಡೆಯಬಹುದು ? ಯಾರು ಈ ಯೋಜನೆಗೆ ಅರ್ಹರು? ಸಂಪೂರ್ಣ ಮಾಹಿತಿ

Central sector scheme of scholarship:ಭಾರತದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಅನೇಕ scholarship ಯೋಜನೆಗಳನ್ನು  ಜಾರಿಗೆ ತಂದಿದೆ ಅವುಗಳಲ್ಲಿ ಪ್ರಮುಖ ಯೋಜನೆ ಎಂದರೆ  Central sector scheme of scholarshi.  ಈ ಯೋಜನೆ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ರೂಪಿಸಲಾಗಿದೆ. ಈ ಲೇಖದಲ್ಲಿ ಈ ಯೋಜನೆಯ ಉದ್ದೇಶ ಮತ್ತು ಅರ್ಹತೆ ಮತ್ತು ಲಾಭಗಳು ಹಾಗೂ ಅರ್ಜಿ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ವಿವರಗಳನ್ನು ತಿಳಿಯಬಹುದು

ಯೋಜನೆಯ ಪರಿಚಯ :

Central sector scheme of scholarship ಅನ್ನು ministry of education India ಮೂಲಕ ಜಾರಿಗೆ ತಂದಿದ್ದು 12 ನೇ ತರಗತಿ ಪೂರೈಸಿದ ನಂತರ ಉನ್ನತ ಶಿಕ್ಷಣ ಪಡೆಯಲು  ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ ದೇಶ್ಯಾದ್ಯಂತ  ಲಕ್ಷಾಂತರ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಮತ್ತು ಪ್ರಯೋಜನ ಪಡೆಯುತ್ತಿದ್ದಾರೆ

ಯೋಜನೆಯ ಉದ್ದೇಶ :

ಈ ಯೋಜನೆಯ ಪ್ರಮುಖ ಉದ್ದೇಶಗಳು ಹಾಗೂ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವುದು , ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉತ್ತೇಜಿಸುವುದು , ಶಿಕ್ಷಣ ತೊರೆಯುವ ಪ್ರಮಾಣವನ್ನು ಕಡಿಮೆ ಮಾಡುವುದು , ದೇಶದ ಮಾನವ ಸಂಪನ್ಮೂಲ ವನ್ನು ಅಭಿವೃದ್ಧಿ ಪಡಿಸುವುದು

ವಿದ್ಯಾರ್ಥಿವೇತನದ ಪ್ರಮಾಣ :- ( scholarship amount )

ಈ ಯೋಜನೆಯಡಿ ಕೆಳಗಿನಂತೆ ಹಣಕಾಸು ಸಹಾಯ ನೀಡಲಾಗುತ್ತದೆ

* ಪದವಿ ( graduation) ವರ್ಷಕ್ಕೆ ₹10,000

* ಪೋಸ್ಟ್ ಗ್ರಾಜುವೇಷನ್ ( post graduation) ವರ್ಷಕ್ಕೆ ₹20,000

* ವೃತ್ತಿಪರ ಕೋರ್ಸ್ ಗಳು : ಕೆಲವು ಕೋರ್ಸ್ ಗಳು ಹೆಚ್ಚುವರಿ ಸಹಾಯ

* ಈ ಹಣವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ .(DBT )

ಅರ್ಹತೆಗಳು : ( eligibility criteria)

ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಪೂರೈಸಿರಬೇಕು

1. ವಿದ್ಯಾರ್ಥಿ 12 ನೇ ತರಗತಿ ಯಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು

2. ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು

3. ವಿದ್ಯಾರ್ಥಿ ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು

4. ವಿದ್ಯಾರ್ಥಿ ಇತರೆ ಯಾವುದೇ ದೊಡ್ಡ ವಿದ್ಯಾರ್ಥಿ ವೇತನ ಪಡೆಯುತ್ತಿರಬಾರದು

ಮೀಸಲಾತಿ :

ಈ ಯೋಜನೆಯಲ್ಲಿ ಸರ್ಕಾರದ ಮೀಸಲಾತಿ ನೀತಿಯನ್ನು ಅನುಸರಿಸಲಾಗಿದೆ

SC/ ST  ವಿದ್ಯಾರ್ಥಿಗಳಿಗೆ ವೇಷದ ಮೀಸಲಾತಿ . OBC ವರ್ಗದ ವಿಧ್ಯಾರ್ಥಿಗಳಿಗೆ ಅವಕಾಶ .  ಮಹಿಳಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ

ಅರ್ಜಿ ಸಲ್ಲಿಸುವ ವಿಧಾನ:

ಈ ಯೋಜನೆಗೆ ಅರ್ಜಿ ಸಲ್ಲಿಸಲು  national scholarship portal ಬಳಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಹಂತಗಳು :  NSP ವೆಬ್ ಸೈಟ್ ಗೆ ಭೇಟಿ ನೀಡಿ, ಹೊಸ ಬಳಕೆದಾರರಾಗಿ  ನೋಂದಣಿ ಮಾಡಿ , ಲಾಗಿನ್ ಆಗಿ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ , ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ , ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ಅನ್ನು ತೆಗೆದುಕೊಳ್ಳಿ

ಅಗತ್ಯ ದಾಖಲೆಗಳು :

1.12 ನೇ ತರಗತಿ ಅಂಕಪಟ್ಟಿ

2.ಆದಾಯ ಪ್ರಮಾಣಪತ್ರ

3. ಆಧಾರ್ ಕಾರ್ಡ್

4.ಬ್ಯಾಂಕ್ ಖಾತೆಯ ವಿವರ

5.ಕಾಲೇಜು ಪ್ರವೇಶ ಪ್ರಮಾಣ ಪತ್ರ

ಆಯ್ಕೆ ಪ್ರಕ್ರಿಯೆ :

ಈ ಯೋಜನೆಯಲ್ಲಿ ಆಯ್ಕೆ  ಮುಖ್ಯವಾಗಿ  ಮೆರಿಟ್ ( merit) ಆಧಾರಿತವಾಗಿರುತ್ತದೆ ರಾಜ್ಯದ ಹಲವಾರು 12 ನೇ ತರಗತಿ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಪ್ರತಿ ರಾಜ್ಯಕ್ಕೂ ಒಂದು ನಿರ್ದಿಷ್ಟ ಸಂಖ್ಯೆಯ scholarship ಸೀಟುಗಳನ್ನು ನೀಡಲಾಗುತ್ತದೆ

ಯೋಜನೆಯ ಅವಧಿ :

1.ಪದವಿ ಕೋರ್ಸ್ ಗಳಿಗೆ : 3 ವರ್ಷ

2. ಪೋಸ್ಟ್ ಗ್ರಾಜುವೇಷನ್ : 2 ವರ್ಷ .

ವೃತ್ತಿ ಪರ ಕೋರ್ಸ್ ಗಳಿಗೆ : ಕೋರ್ಸ್ ಗಳ ಅವಧಿಯ ವರೆಗೆ

ನವೀಕರಣ :

ಈ ವಿದ್ಯಾರ್ಥಿ ವೇತನವನ್ನು ಮುಂದುವರಿಸಲು ವಿದ್ಯಾರ್ಥಿಗಳು  ಪ್ರತಿ ವರ್ಷ ಕನಿಷ್ಠ ಉತ್ತೀರ್ಣರಾಗಿರಬೇಕು , ಉತ್ತಮ ಶೈಕ್ಷಣಿಕ ಸಾಧನೆ  ತೋರಬೇಕು , ಕಾಲೇಜಿನಲ್ಲಿ ನಿರಂತರವಾಗಿ ಹಾಜರಿರಬೇಕು

ಯೋಜನೆಯ ಪ್ರಯೋಜನಗಳು:

ಈ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಹಲವಾರು ಲಾಭಗಳಿವೆ , ಶಿಕ್ಷಣದ ವೆಚ್ಚ ಭಾರ ಕಡಿಮೆ ಆಗುತ್ತದೆ ಆರ್ಥಿಕ ಸಮಸ್ಯೆಗಳಿದ್ದರೂ ಸಹ ಇದನ್ನು ಮುಂದುವರಿಸಲು ಸಹಾಯ ಮಾಡುತ್ತದೆ , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ , ಉತ್ತಮ ಭವಿಷ್ಯ ನಿರ್ಮಾಣಕ್ಕೆ ಅವಕಾಶ ಕಲ್ಪಿಸುತ್ತಿದೆ

ಪ್ರಮುಖ ಸವಾಲುಗಳು :

ಈ ಯೋಜನೆ ಇದ್ದರೂ ಕೆಲವು ಸವಾಲುಗಳಿವೆ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಕೊರತೆ , ಅರ್ಜಿ ಪ್ರಕ್ರಿಯೆ ಜಟಿಲತೆ , ದಾಖಲೆಗಳ ಕೊರತೆ

ಪರಿಹಾರ ಕ್ರಮಗಳು : ಶಾಲಾ ಮತ್ತು ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು , ಡಿಜಿಟಲ್ ಸೇವೆಗಳ ಸುಧಾರಣೆ , ಸರಳ ಮತ್ತು ವೇಗವಾದ ಅರ್ಜಿ ವ್ಯವಸ್ಥೆ

ಸಮಾರೋಪ:

Central sector scheme of scholarship ಎಂಬುದು ಭಾರತದಲ್ಲಿ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ.  ಇದು ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ  ವಿಧ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ದಾರಿ ತೆರೆದಿದೆ. ಸರ್ಕಾರದ ಈ ಮಹತ್ವದ ಯೋಜನೆಯನ್ನು ಸರಿಯಾಗಿ ಬಳಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಧಿಸಲು ಸಾಧ್ಯವಾಗುತ್ತದೆ  ಹೀಗಾಗಿ ಅರ್ಹರಾದ ಎಲ್ಲಾ ವಿದ್ಯಾರ್ಥಿಗಳು Central sector scheme of scholarship ಯೋಜನೆಗೆ ಅರ್ಜಿ ಸಲ್ಲಿಸಿ ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು

ನೆನಪಿರಲಿ

ನಿಮ್ಮ vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

 

Leave a Comment