Telegram Join My Telegram WhatsApp Join My WhatsApp

IDBI ಬ್ಯಾಂಕಿನಲ್ಲಿ ಉದ್ಯೋಗಾವಕಾಶ ಒಟ್ಟು 1300 ಹುದ್ದೆಗಳ ಭರ್ತಿ ಗೆ ಅರ್ಜಿ ಆಹ್ವಾನ

ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕ ಗ್ರೇಡ್ A ಮತ್ತು ಕಿರಿಯ ಸಹಾಯಕ ವ್ಯವಸ್ಥಾಪಕ ಗ್ರೇಡ್ O (ಪ್ರಾದೇಶಿಕ) ಹುದ್ದೆಗಳ ನೇಮಕಾತಿ ಗಾಗಿ ಅಧಿಸೂಚನೆ ಬಿಡುಗಡೆಗೊಂಡಿದ್ದು ಅರ್ಜಿ ಸಲ್ಲಿಕೆ ಮಾರ್ಚ್ 08ರಿಂದ ಆರಂಭವಾಗಿದೆ

ವಿವಿಧ ರಾಜ್ಯಗಳಲ್ಲಿ ಇರುವ ತನ್ನ ಶಾಖೆಗಳಿಗೆ ಸಹಾಯಕ ವ್ಯವಸ್ಥಾಪಕ ಗ್ರೇಡ್ A (200ಸ್ಥಾನಗಳು) ಹಾಗೂ ಕಿರಿಯ ಸಹಾಯಕ ವ್ಯವಸ್ಥಾಪಕ ಗ್ರೇಡ್ O (1100) ಸ್ಥಾನಗಳು ಸೇರಿದಂತೆ ಒಟ್ಟು 1300 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ ಬ್ಯಾಂಕಿಂಗ್ ವಲಯದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಯಾವುದೇ ಪದವೀಧರ  ಉದ್ಯೋಗಾಂಕ್ಷಿಗಳು ಮಾರ್ಚ್ 28 ರ. ಒಳಗಡೆ ಅಧಿಕೃತ ವೆಬ್ ಸೈಟ್ www.idbi.bank.in ಬೇಟಿ ನೀಡಿ ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು :

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 08 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 28. 2026
  • ಆನ್ ಲೈನ್ ಪರೀಕ್ಷೆಯ ದಿನಾಂಕ  ಏಪ್ರಿಲ್ 12,2026 ( ತಾತ್ಕಾಲಿಕ )
  • ಖಾಲಿ ಇರುವ ಹುದ್ದೆಗಳ ವಿವರ :ಸಹಾಯಕ ವ್ಯವಸ್ಥಾಪಕ ಗ್ರೇಡ್ ಎ’  -200 ಹುದ್ದೆಗಳು
  • ಕಿರಿಯ ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ ಒ ‘ -1100 ಹುದ್ದೆಗಳು

ಶೈಕ್ಷಣಿಕ ಅರ್ಹತೆ :

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ  ವಿಶ್ವವಿದ್ಯಾನಿಲಯ ಅಥವಾ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿರಬೇಕು . ಜೊತೆಗೆ ನಿಗದಿತ ಕೆಲಸದ ಅನುಭವವಿರಬೇಕು

ವಯೋಮಿತಿ :

01-03-2026 ರಂತೆ ;

ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ ಎ ‘ ಹುದ್ದೆಗೆ ಕನಿಷ್ಠ ಮಿತಿ 21 ವರ್ಷಗಳು , ಗರಿಷ್ಟ ಮಿತಿ 30 ವರ್ಷಗಳು

ಕಿರಿಯ ವ್ಯವಸ್ಥಾಪಕ ಗ್ರೇಡ್ ‘ ಒ ‘ ಹುದ್ದೆಗೆ ಕನಿಷ್ಠ ಮಿತಿ 20 ವರ್ಷಗಳು ಮತ್ತು ಗರಿಷ್ಟ ಮಿತಿ 25 ವರ್ಷಗಳು

ವಯೋಮಿತಿ ಸಡಿಲಿಕೆ ; ಒಬಿಸಿ ಅಭ್ಯರ್ಥಿಗಳಿಗೆ  03 ವರ್ಷಗಳು , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 05 ವರ್ಷಗಳು  ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳು

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ :

ಆನ್ ಲೈನ್ ಪರೀಕ್ಷೆ (OT)

ದಾಖಲೆ ಪರಿಶೀಲನೆ (DV )

ವಯಕ್ತಿಕ ಸಂದರ್ಶನ (PI)

ನೇಮಕಾತಿ ಪೂರ್ವ ವೈದ್ಯಕೀಯ ಪರೀಕ್ಷೆ (PRMT)

ಸಂಬಳ:-

ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ ಎ ‘ ಹುದ್ದೆಗೆ ವೇತನ ಶ್ರೇಣಿ  ₹48480 -2000(7) -62480 – 2340(2)- 67160- 2680(7) -85920(17) year’s)

ಕಿರಿಯ ಸಹಾಯಕ ವ್ಯವಸ್ಥಾಪಕ ಗ್ರೇಡ್ ‘ ಒ ಹುದ್ದೆಗೆ ವೇತನ; ಐಡಿಬಿಐ ಬ್ಯಾಂಕ್ ನಿಯಮದ ಅನುಸಾರ ಮಹೇಯಾನ ವೇತನವನ್ನು ನೀಡಲಾಗುತ್ತದೆ

ಅರ್ಜಿ ಶುಲ್ಕ :

ಎಸ್ ಸಿ , ಎಸ್ ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 250 ರುಪಾಯಿ (ಬದಲಾಗಬಹುದು )  ಇತರೆ ಎಲ್ಲ ಅಭ್ಯರ್ಥಿಗಳಿಗೆ – 1050ರೂಪಾಯಿ (ಬದಲಾಗಬಹುದು )

ಅರ್ಜಿ ಸಲ್ಲಿಸುವ ವಿಧಾನ :

* ಅಭ್ಯರ್ಥಿಯು ಅಧಿಕೃತ IDBI ವೆಬ್ ಸೈಟ್  https://www.idbi -bank.in.carreers-current-openings.aspx ಗೆ ಭೇಟಿ ನೀಡಿ .

  • ಪ್ರಸ್ತುತ ತೆರೆಯುವಿಕೆ ವಿಭಾಗದಲ್ಲಿ ನೀಡಲಾಗಿರುವ (ಸಹಾಯಕ ವ್ಯವಸ್ಥಾಪಕ ನೇಮಕಾತಿ – ಗ್ರೇಡ್ A (ಎರಡು ವರ್ಷ ಅನುಭವ ) :2026-27(ಹೊಸದು ) ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ (ಜೆ ಎ ಎಂ )ಗ್ರೇಡ್  ಒ ನೇಮಕಾತಿ ಪ್ರಾದೇಶಿಕ :2026-27 ( ಹೊಸದು) ಲಿಂಕ್ ಮೇಲೆ ಟ್ಯಾಪ್ ಮಾಡಿ
  • ಬಳಿಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಹೊಸ ಬಳಕೆದಾರರಾಗಿದ್ದಲ್ಲಿ ನೋಂದಣಿ ಮಾಡಿ ಅಥವಾ ಹೆಸರು / ಜನ್ಮ ದಿನಾಂಕ / ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಬಳಸಿ ಲಾಗ್ ಇನ್ ಆಗಿ
  • ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ,ಭಾವಚಿತ್ರ ,ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ನಿಮ್ಮ ವರ್ಗಕ್ಕೆ ಅನ್ವಯಿಸುವಂತೆ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ
  • ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ
  • ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ

Read more