Telegram Join My Telegram WhatsApp Join My WhatsApp

LPG NEW RULES:Government denies LPG refill rule changes, urges no panic – ಇಲ್ಲಿದೆ ಸಂಪೂರ್ಣ ವಿವರಣೆ

LPG NEW RULES:ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಗೃಹ ಬಳಕೆಯ LPG ಸಿಲಿಂಡರ್ ಗಳಿಗೆ ಸಂಬಂಧಿಸಿದಂತೆ ಹಲವು ಸುದ್ದಿಗಳು ಮತ್ತು ವದಂತಿಗಳು ಹರಿದಾಡುತ್ತಿವೆ . ವಿಶೇಷವಾಗಿ LPG ರೀಫಿಲ್ ನಿಯಮದಲ್ಲಿ ದೊಡ್ಡ ಬದಲಾವಣೆ ‘ ಎಂಬ ವಿಷಯ ಜನರಲ್ಲಿ ಆತಂಕವನ್ನು ಉಂಟುಮಾಡಿದೆ , ಆದರೆ ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿರುವುದೇನೆಂದರೆ ಇಂತಹ ಯಾವುದೇ ಹೊಸ ನಿಯಮವನ್ನು ಜಾರಿಗೊಳಿಸಲಾಗಿಲ್ಲ ಮತ್ತು ಜನರು ಯಾವುದೇ ರೀತಿಯ ಗಾಬರಿಗೆ ಒಳಗಾಗಬೇಕಿಲ್ಲ ಎಂದು ತಿಳಿಸಿದೆ. ಈ ಹಿನ್ನಲೆಯ ಮೇಲೆ ಈ ವಿಷಯದ ಸಂಪೂರ್ಣ ವಿಶ್ಲೇಷಣೆಯನ್ನು ನೋಡೋಣ

ವದಂತಿಗಳ ಮೂಲ ಏನು ?

ಸೋಶಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ವಾಟ್ಸಾಪ್ ಮತ್ತು Facebook ಮೂಲಕ LPG ಸಿಲಿಂಡರ್ ಪಡೆಯಲು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ ಎಂಬ ಸುಳ್ಳು ಮಾಹಿತಿಗಳು ವೈರಲ್ ಆಗಿದ್ದವು ಕೆಲವೊಂದು ಸಂದೇಶಗಳಲ್ಲಿ ” ಒಂದು ವರ್ಷದಲ್ಲಿ ಕೇವಲ ಒಂದು ಸಿಲಿಂಡರ್ಗಳನ್ನು  ಮಾತ್ರ ಪಡೆಯಬಹುದು ” ಆಧಾರ್ ಲಿಂಕ್ ಮಾಡದಿದ್ದರೆ ಸಬ್ಸಿಡಿ ಸಿಗುವುದಿಲ್ಲ ‘ ಎಂಬಂತಹ ಮಾಹಿತಿ ಹರಿದಾಡುತಿತ್ತು

ಇವುಗಳನ್ನು ನಂಬಿದ ಜನರು ಗ್ಯಾಸ್ ಏಜೆನ್ಸಿಯ ಮುಂದೆ ಸಾಲಿನಲ್ಲಿ ನಿಂತು ಮುಂಚಿತವಾಗಿ ಸಿಲಿಂಡರ್ ಬುಕ್ ಮಾಡುವ ಪ್ರಯತ್ನ ಮಾಡಿದರು. ಇದರಿಂದ ಅನಗತ್ಯ ಒತ್ತಡವು ಉಂಟಾಯಿತು

ಸರ್ಕಾರದ ಸ್ಪಷ್ಟನೆ

ಕೇಂದ್ರ ಸರ್ಕಾರದ ತೈಲ ಮತ್ತು ಪ್ರಕೃತಿ ಅನಿಲದ ಸಚಿವಾಲಯ ( ministry of petroleum and natural gas) ಸ್ಪಷ್ಟವಾಗಿ ಹೇಳಿರುವುದೇನೆಂದರೆ

LPG ರೀಫಿಲ್ ನಿಯಮದಲ್ಲಿ ಯಾವುದೇ ಹೊಸ ಬದಲಾವಣೆಗಳಿಲ್ಲ

ಸಬ್ಸಿಡಿ ವ್ಯವಸ್ಥೆ ಹಳೆಯಂತೆಯೇ ಮುಂದುವರಿಯುತ್ತದೆ

ಜನರು ವದಂತಿಗಳನ್ನು ನಂಬಬಾರದು

ಸರ್ಕಾರ ” ಪ್ಯಾನಿಕ್ ಆಗಬೇಡಿ” ಎಂದು ಜನತೆಗೆ ಮನವಿ ಮಾಡಿದೆ . ಅಧಿಕೃತ ಮಾಹಿತಿ ಪಡೆಯಲು ಸರ್ಕಾರದ ವೆಬ್ ಸೈಟ್ ಅಥವಾ ಅಧಿಕೃತ ಘೋಷಣೆಗಳನ್ನು ಮಾತ್ರ ಅನುಸರಿಸಬೇಕು ಎಂದು ತಿಳಿಸಿದೆ

LPG  ಸಬ್ಸಿಡಿ – ಹಳೆಯ ವ್ಯವಸ್ಥೆ ಹೇಗೆ ಇದೆ ?

ಭಾರತದಲ್ಲಿ LPG ಸಬ್ಸಿಡಿ ವ್ಯವಸ್ಥೆ  ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಇದರ ಪ್ರಮುಖ ಅಂಶಗಳು

ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ (DBT)

ಒಂದು ಕುಟುಂಬಕ್ಕೆ ವರ್ಷಕ್ಕೆ ನಿರ್ಧಿಷ್ಟ ಪ್ರಮಾಣದ ಸಿಲಿಂಡರ್ ಗಳಿಗೆ ಮಾತ್ರ ಸಬ್ಸಿಡಿ ದೊರೆಯುತ್ತದೆ

PMUY (pradhan mantri ujjwala yojana) ಫಲಾನುಭವಿಗಳಿಗೆ ವಿಶೇಷ ಸೌಲಭ್ಯಗಳಿವೆ

ಈ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸರ್ಕಾರ ದೃಢಪಡಿಸಿದೆ

ಜನರಲ್ಲಿ ಉಂಟಾದ ಆತಂಕ!

ವದಂತಿಗಳ ಪರಿಣಾಮವಾಗಿ ಹಲವಾರು ಕುಟುಂಬಗಳು ಭಯದಿಂದ ಹೆಚ್ಚು ಸಿಲಿಂಡರ್ ಬುಕ್ ಮಾಡಿದ್ದು  ಕೆಲವು ಕಡೆ ತಾತ್ಕಾಲಿಕ ಕೊರತೆ ಉಂಟಾಯಿತು ಗ್ರಾಮೀಣ ಪ್ರದೇಶಗಳಲ್ಲಿ ಈ ಆತಂಕ ಹೆಚ್ಚು ಕಂಡುಬಂತು

ಅನೇಕರು ” ಇನ್ನೂ ಮುಂದೆ ಸಿಲಿಂಡರ್ ಸಿಗುವುದಿಲ್ಲ ” ಎಂಬ ಭಾವನೆಗೆ ಒಳಗಾಗಿ ಅನಗತ್ಯ ಹಣ ವ್ಯಯ ಮಾಡಿದರು  ಇದರಿಂದ ಮದ್ಯಮ ವರ್ಗ ಮತ್ತು ಬಡ ಕುಟುಂಬಗಳಿಗೆ ತೊಂದರೆ ಉಟಾಯಿತು

ಸೋಶಿಯಲ್ ಮೀಡಿಯಾದ ಪಾತ್ರ

ಈ ಘಟನೆಯಲ್ಲಿ ಸೋಶಿಯಲ್ ಮೀಡಿಯಾ ಪ್ರಮುಖ ಪಾತ್ರವಹಿಸಿದೆ ಸರಿಯಾದ ಮಾಹಿತಿ ಪರಿಶೀಲನೆ ಮಾಡದೆ ಜನರು ಸಂದೇಶಗಳನ್ನು ಹಂಚಿಕೊಂಡಿದ್ದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ

ತಜ್ಞರು ಹೇಳುವಂತೆ

ಯಾವುದೇ ಸುದ್ದಿಯನ್ನು ನಂಬುವ ಮೂಡಲು ಅದರ ಮೂಲ ಪರಿಶೀಲಿಸಬೇಕು  ಸರ್ಕಾರಿ ಮಾಹಿತಿ ಎಂದರೆ ಅಧಿಕೃತ ವೆಬ್ ಸೈಟ್ ಅಥವಾ ಪ್ರಕಟಣೆಗಳನ್ನು ಮಾತ್ರ ನಂಬಬೇಕು

LPG  ವಿತರಣೆ ವ್ಯವಸ್ಥೆ

ಭಾರತದಲ್ಲಿ LPG ವಿತರಣೆ ವ್ಯವಸ್ಥೆ ಬಹಳ ವ್ಯಾಪಕವಾಗಿದೆ  ಪ್ರಮುಖ ಕಂಪನಿಗಳು indian oil corporation & Bharat petroleum & Hindustan petroleum  ಈ ಕಂಪನಿಗಳು ದೇಸ್ಯಾದ್ಯಂತ ಲಕ್ಷಾಂತರ ಮನೆಗಳಿಗೆ LPG ಸಿಲಿಂಡರ್ ಗಳ ಪೂರೈಸುತ್ತಿವೆ. ಈ ಸಂಸ್ಥೆಗಳು ಕೂಡ ಯಾವುದೇ ಹೊಸ ನಿಯಮಗಳಿಲ್ಲ ಎಂದು ದೃಢಪಡಿಸಿವೆ

ಗ್ರಾಹಕರಿಗೆ ಸೂಚನೆಗಳು?

ಸರ್ಕಾರ ಮತ್ತು ತಜ್ಞರು ಗ್ರಾಹಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ

1. ವದಂತಿಗಳನ್ನು ನಂಬಬೇಡಿ

2.ಅಗತ್ಯವಿದ್ದಾಗ ಮಾತ್ರ ಸಿಲಿಂಡರ್ ಬುಕ್ ಮಾಡಿ

3. ಅಧಿಕೃತ ವೆಬ್ ಸೈಟ್ ಅಥವಾ ಏಜೆನ್ಸಿ ಯಿಂದ ಮಾಹಿತಿ ಪಡೆಯಿರಿ

4. OTP ಅಥವಾ Bank ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ

ಭವಿಷ್ಯದ ದೃಷ್ಟಿಕೋನ

LPG ಬಳಕೆ ಭಾರತದಲ್ಲಿ ನಿರಂತರವಾಗಿ ಹೆಚ್ಚುತ್ತಿದೆ . ಪರಿಸರ ಸ್ನೇಹಿ ಇಂಧನವಾಗಿರುವುದರಿಂದ ಸರ್ಕಾರ ಇದರ ಬಳಕೆಯನ್ನು ಉತ್ತೇಜಿಸುತ್ತಿದೆ ಮುಂದಿನ ದಿನಗಳಲ್ಲಿ

ಡಿಜಿಟಲ್ ಬುಕ್ಕಿಂಗ್ ವ್ಯವಸ್ಥೆ ಇನ್ನಷ್ಟು ಸುಧಾರಣೆ

ಸಬ್ಸಿಡಿ ವ್ಯವಸ್ಥೆಯಲ್ಲಿ  ಪಾರದರ್ಶಕತೆ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ವಿತರಣಾ ಕೇಂದ್ರಗಳು

ಇವುಗಳ ಮೇಲೆ ಸರ್ಕಾರ ಗಮನ ಹರಿಸುತ್ತಿದೆ

ತಜ್ಞರ ಅಭಿಪ್ರಾಯ

ಆರ್ಥಿಕ  ತಜ್ಞರ ಪ್ರಕಾರ ಇಂತಹ ವದಂತಿಗಳು ಮಾರುಕಟ್ಟೆಯಲ್ಲಿ ಅಸ್ತಿರತೆ ಉಂಟು ಮಾಡುತ್ತವೆ ಜನರು ಗಾಬರಿಗೊಂಡರೆ ಬೇಡಿಕೆ  ಏಕಾಏಕಿ  ಹೆಚ್ಚಾಗಿ ಸರಬರಾಜು ಮೇಲೆ ಒತ್ತಡ ಬರುತ್ತದೆ ಇದರಿಂದ ತಾತ್ಕಾಲಿಕ ಕೊರತೆ ಮತ್ತು ಬೆಲೆ ಏರಿಕೆ ಸಂಭವಿಸಬಹುದು

ಸಮಾರೋಪ

ಒಟ್ಟಿನಲ್ಲಿ LPG ರೀಫಿಲ್ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ  ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಕಿಲ್ಲ ಇಂತಹ ಸಂಧರ್ಭಗಳಲ್ಲಿ ಜಾಗೃತಿಯಿಂದ ವರ್ತಿಸಿ , ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವುದು  ಅತ್ಯಂತ ಮುಖ್ಯ

ಸೋಶಿಯಲ್ ಮೀಡಿಯಾದಲ್ಲಿ ಹರಡುವ ಪ್ರತಿಯೊಂದು ಸುದ್ದಿಯನ್ನು  ನಂಬುವುದರಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ . ಆದ್ದರಿಂದ ಪ್ರತಿ ನಾಗರಿಕನೂ ಮಾಹಿತಿ ಪರಿಶೀಲನೆ ಮಾಡುವ ಜವಾಬ್ದಾರಿಯನ್ನು ಹೊಂದಿರಬೇಕು

ನೆನಪಿರಲಿ

Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

Leave a Comment