Telegram Join My Telegram WhatsApp Join My WhatsApp

ಭಾರತೀಯ ರೈಲ್ವೆ ಇಲಾಖೆಯ ಉದ್ಯೋಗಗಳು : ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷೆ, ಮುಂತಾದ ವಿವರಗಳ ಸಂಪೂರ್ಣ ಮಾಹಿತಿ

ಭಾರತದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಅವಕಾಶಗಳನ್ನು ಒದಗಿಸುವ ಕ್ಷೇತ್ರವೆಂದರೆ  indian railways ( ಭಾರತೀಯ ರೈಲ್ವೆ ಇಲಾಖೆ) ಇದು ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿರುವ ವಿಶ್ವದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ. ಯುವಕರಿಗೆ ಸ್ಥಿರ ಉದ್ಯೋಗ ,ಉತ್ತಮ ವೇತನ ಮತ್ತು ಭದ್ರ ಭವಿಷ್ಯ ನೀಡುವ ಕಾರಣದಿಂದ ರೈಲ್ವೆ ಉದ್ಯೋಗಗಳು ಬಹಳ ಜನಪ್ರಿಯವಾಗಿವೆ

ರೈಲ್ವೆ ಉದ್ಯೋಗಗಳ ಮಹತ್ವ :

ರೈಲ್ವೆ ಇಲಾಖೆಯು ದೇಶದ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುವುದಷ್ಟೇ ಅಲ್ಲದೆ ವಿವಿಧ ಹುದ್ದೆಗಳ ಮೂಲಕ ಉದ್ಯೋಗ ಸೃಷ್ಟಿಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಪ್ರತಿ ವರ್ಷ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತವೆ . ಈ ನೇಮಕಾತಿಗಳನ್ನು ರೈಲ್ವೆ recruitment board ( RRB ) mattu  railway recruitment cell ( RRC ) ಮೂಲಕ ನಡೆಸಲಾಗುತ್ತದೆ

ರೈಲ್ವೆ ಉದ್ಯೋಗಗಳ ಪ್ರಮುಖ ವಿಭಾಗಗಳು :

ರೈಲ್ವೆ ಉದ್ಯೋಗಗಳನ್ನು ಹಲವಾರು ವಿಭಗಳಲ್ಲಿ ವಿಂಗಡಿಸಲಾಗಿದೆ

1. ತಾಂತ್ರಿಕ ( technical job’s) ,ಇಂಜಿನಿಯರ್ ಗಳು ( mechanical, civil, electrical). ಟೆಕ್ನಿಷಿಯನ್ ಗಳು , ಸಿಗ್ನಲ್ ಮತ್ತು ಟೆಲಿಕಾಂ ಸಿಬ್ಬಂದಿ . .  ಈ ಉದ್ದೆಗಳಿಗೆ ಡಿಪ್ಲೊಮಾ ಅಥವಾ ಇಂಜಿನಿಯರಿಂಗ್ ಪದವಿ ಅಗತ್ಯವಿರುತ್ತದೆ

2. ಅತಾಂತ್ರಿಕ ( non – technical job’s). . ಕ್ಲರ್ಕ್ , ಟಿಕೆಟ್ ಕಲೆಕ್ಟರ್ (TC ) , ಟಿಕೆಟ್ ಎಕ್ಸಾಮಿಕರ್ ( TTE) , ಸ್ಟೇಷನ್ ಮಾಸ್ಟರ್ , ಈ ಹುದ್ದೆಗಳಿಗೆ ಸಾಮಾನ್ಯವಾಗಿ ಪದವಿ ( digree) ಅಗತ್ಯವಿರುತ್ತದೆ .

3. ಗುಂಪು C ಮತ್ತು ಗುಂಪು D ಹುದ್ದೆಗಳು . ಗುಂಪು C : ಜೂನಿಯರ್ ಕ್ಲರ್ಕ್ , ಕಮರ್ಷಿಯಲ್ ಆಪರೇಟರ್ , ಸ್ಟೇಷನ್ ಮಾಸ್ಟರ್  & ಗುಂಪು D ಟ್ರ್ಯಾಕ ಮೆಂಟೈನರ್, ಹೆಲ್ಪರ್,  ಪೋರ್ಟರ್  group D ಹುದ್ದೆಗಳಿಗೆ 10 ನೇ ತರಗತಿ ಅಥವಾ ITI ಅರ್ಹತೆಗಳು ಸಾಕು

ಅರ್ಹತೆಗಳು : ( eligibility criteria)

ರೈಲ್ವೆ ಉದ್ಯೋಗಗಳಿಗೆ ಅರ್ಜಿ ಹಾಕಲು ಕೆಳಗಿನ ಅರ್ಹತೆಗಳು ಅಗತ್ಯ

ಶೈಕ್ಷಣಿಕ ಅರ್ಹತೆ : 10 ನೇ / 12 ನೇ / ITI / ಡಿಪ್ಲೊಮಾ/ ಪದವಿ

ವಯೋಮಿತಿ : ಸಾಮಾನ್ಯವಾಗಿ  18 ರಿಂದ 033 ವರ್ಷ , ಮೀಸಲಾತಿ ಪ್ರಕಾರ ವಯಸ್ಸಿನ ಸಡಿಲಿಕೆ

ಆಯ್ಕೆ ಪ್ರಕ್ರಿಯೆ : (selection process)

ರೈಲ್ವೆ ಉದ್ಯೋಗಗಳಿಗೆ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ

1. ಕಂಪ್ಯೂಟರ್ ಆಧಾರಿತ ಪರೀಕ್ಷೆ ( CBT )  ,  ಫಿಸಿಕಲ್ ಟೆಸ್ಟ್ (ಕೆಲವು ಹುದ್ದೆಗಳಿಗೆ ) , ಡಾಕ್ಯುಮೆಂಟ್ ಪರಿಶೀಲನೆ , ಮೆಡಿಕಲ್ ಟೆಸ್ಟ್ ,  ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ , ಗಣಿತ, ತಾರ್ಕಿಕತೆ , ಸಾಮಾನ್ಯ ವಿಜ್ಞಾನ ಪ್ರಶ್ನೆಗಳು ಬರುತ್ತವೆ

ಪರೀಕ್ಷಾ ಮಾದರಿ :-

Multiple choice questions ( MCQs) , negative marking ಇರುತ್ತದೆ ,ಸಾಮಾನ್ಯವಾಗಿ 90 ನಿಮಿಷಗಳ ಅವಧಿ ಇರುತ್ತದೆ .

ವೇತನೆ ಮತ್ತು ಸೌಲಭ್ಯಗಳು:-

ರೈಲ್ವೆ ಉದ್ಯೋಗಗಳು ಉತ್ತಮ ವೇತನ ಮತ್ತು ಸೌಲಭ್ಯಗಳನ್ನು ನೀಡುತ್ತವೆ :  ಪ್ರಾರಂಭಿಕ ವೇತನ : ₹ 18,000 ರಿಂದ  ₹ 56,000+ , ಡಿಯರ್ ಅಲೌನ್ಸ್ ( DA) ಹೌಸ್ ರೆಂಟ್ ಆಲೌನ್ಸ್ ( HRA ) , ಉಚಿತ ಅಥವಾ ರಿಯಾಯಿತಿ ರೈಲು ಪ್ರಯಾಣಮಟ್ಟು ಪಿಂಚಣಿ ಮತ್ತು ವಿಮಾ ಸೌಲಭ್ಯ

ಪ್ರಮುಖ ಹುದ್ದೆಗಳ ವಿವರಣೆ :

*. ಲೋಕೋ ಪೈಲೆಟ್ : ರೈಲು ಚಾಲನೆ ಮಾಡುವ ಜವಾಬ್ದಾರಿ ಹೊಂದಿರುವ ಹುದ್ದೆ .ತಾಂತ್ರಿಕ ಜ್ಞಾನ ಅಗತ್ಯ.

*. ಸ್ಟೇಷನ್ ಮಾಸ್ಟರ್: ಸ್ಟೇಷನ್ ಕಾರ್ಯಾಚರಣೆ ಮತ್ತು ರೈಲು ಸಂಚಾರ ನಿಯಂತ್ರಣ

*. ಟಿಕೆಟ್ ಎಕ್ಸಾಮಿಕರ್:  ಪ್ರಯಾಣಿಕರ ಟಿಕೆಟ್ ಪರಿಶೀಲನೆ

*. ಟ್ರ್ಯಾಕ್ ಮೇಂಟೆನರ್ . ರೈಲು ಹಳಿ ಸಂರಕ್ಷಣೆ ಮತ್ತು ನಿರ್ವಹಣೆ

ಪರೀಕ್ಷೆಗೆ ತಯಾರಿ ಹೇಗೆ : –

ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ, ಸಮಯ ನಿರ್ವಹಣೆ ಕಲಿಯಿರಿ , ದಿನನಿತ್ಯ ಸಾಮಾನ್ಯ ಜ್ಞಾನ ಓದಿರಿ ,  ಮಾಕ್ ಟೆಸ್ಟ್ ಗಳನ್ನು ತೆಗೆದುಕೊಳ್ಳಿ

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕು , ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಪೋಟೋ ಮತ್ತು ಡಾಕ್ಯುಮೆಂಟ್ ಅಪ್ಲೋಡ್ ಮಾಡಿ , ಪರೀಕ್ಷಾ ಶುಲ್ಕ ಪಾವತಿಸಿ

ಸವಾಲುಗಳು:-

1. ಹೆಚ್ಚಿನ ಸ್ಪರ್ಧೆ

2. ಪರೀಕ್ಷೆ ಕಠಿಣತೆ

3. ಸಮಯ ನಿರ್ವಹಣಾ ಸಮಸ್ಯೆ

ಭವಿಷ್ಯದ ಅವಕಾಶಗಳು :-

ರೈಲ್ವೆ ಇಲಾಖೆಯಲ್ಲಿ ಭವಿಷ್ಯದಲ್ಲಿ ಇನ್ನಷ್ಟು ಉದ್ಯೋಗಾವಕಾಶಗಳನ್ನು ಸ್ತ್ರುಸ್ತಿಸುವ ನಿಟ್ಟಿನಲ್ಲಿದೆ : ಹೊಸ ರೈಲು ಮಾರ್ಗಗಳು , ಹೈ ಸ್ಪೀಡ್ ರೈಲು ಯೋಜನೆ , ಡಿಜಿಟಲ್ ವ್ಯವಸ್ಥೆಗಳ ಅಭಿವೃದ್ಧಿ

ಸಮಾರೋಪ:- ಭಾರತೀಯ ರೈಲ್ವೆ ಉದ್ಯೋಗಗಳು ಯುವಕರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ   ಇದು ಕೇವಲ ಉದ್ಯೋಗವಲ್ಲ ಒಂದು ಭದ್ರ ಮತ್ತು ಗೌರವಯುತ ಜೀವನದ ದಾರಿಯಾಗಿದೆ . ಸರಿಯಾದ ಶ್ರಮ ಮತ್ತು ತಯಾರಿಯಿಂದ ಯಾರಾದರೂ ರೈಲ್ವೆ ಉದ್ಯೋಗ ಪಡೆಯಬಹುದು  ಮತ್ತು ಕುಟುಂಬಗಳ ಆರ್ಥಿಕತೆಯ ಮೇಲೆ ನೀವು ಉದ್ಯೋಗ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಸುಧಾರಣೆಯನ್ನು ಕಾಡಬಹುದು. ಮತ್ತು ಇದರಿಂದ ದೇಶದಲ್ಲಿ ನೆಲೆಸಿರುವ ನಿರುದ್ಯೋಗದ ಸಮಸ್ಯೆಯನ್ನು ಹೋಗಲಾಡಿಸಬಹುದು

ನೆನಪಿರಲಿ :-

ನಿಮ್ಮ  vishwavanione.com  ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

 

Leave a Comment