Telegram Join My Telegram WhatsApp Join My WhatsApp

ಶಿಕ್ಷಣ ಸಾಲ ( education loan) ಅನ್ನು ಯಾರು ಪಡೆಯಬಹುದು ? ಮತ್ತು ಹೇಗೆ ಪಡೆಯುವುದು ? ಇಲ್ಲಿದೆ ಕಂಪ್ಲೀಟ್ ಮಾಹಿತಿ

ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸುಗಳನ್ನು  ಸಾಕಾರಗೊಳಿಸುವ ಸರ್ಕಾರ (education loan)ಮತ್ತು ಬ್ಯಾಂಕ್ ಗಳು ನೀಡುವ ಮಹತ್ವದ ಆರ್ಥಿಕ ಸಹಾಯವಾಗಿದೆ. ಇಂದಿನ ಕಾಲದಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್ಮೆಂಟ್, ವಿದೇಶಿ ಶಿಕ್ಷಣ ಇತ್ಯಾದಿ ಕೋರ್ಸ್ ಗಳ ವೆಚ್ಚ ಹೆಚ್ಚಿರುವುದರಿಂದ ಶಿಕ್ಷಣ ಸಾಲ ಒಂದು ಅಗತ್ಯ ಸಾಧನವಾಗಿ ಪರಿಣಮಿಸಿದೆ . ಈ ಲೇಖನದಲ್ಲಿ ಶಿಕ್ಷಣ ಸಾಲದ ಸಂಪೂರ್ಣ ಮಾಹಿತಿ ವಿವರವಾಗಿ ತಿಳಿಯಬಹುದು

ಶಿಕ್ಷಣ ಸಾಲ ಎಂದರೇನು ?

ಶಿಕ್ಷಣ ಸಾಲವೆಂದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ ಅಥವಾ ಸರ್ಕಾರದಿಂದ ಪಡೆಯುವ ಹಣಕಾಸು ಸಹಾಯ. ಈ ಸಾಲವನ್ನು ಉದ್ಯಾಗ ಪಡೆದ ನಂತರ ಹಂತ ಹಂತವಾಗಿ ತೀರಿಸಬೇಕು

ಇದು ಮುಖ್ಯವಾಗಿ ಟ್ಯೂಷನ್ ಫೀಸ್  , ಹಾಸ್ಟೆಲ್ ವೆಚ್ಚ , ಪುಸ್ತಕಗಳು , ಪ್ರಯಾಣದ ವೆಚ್ಚ , ಇತ್ಯಾದಿಗಳನ್ನು ಒಳಗೊಂಡಿರುತ್ತದೆ

ಶಿಕ್ಷಣ ಸಾಲ ಯೋಜನೆಯ ಮುಖ್ಯ ಉದ್ದೇಶ !

* ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವುದು

* ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅವಕಾಶ  ದೇಶದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸುವುದು

* ವಿದೇಶಿ ಶಿಕ್ಷಣಕ್ಕೆ ಸಹಾಯ

ಶಿಕ್ಷಣ ಸಾಲದ ವಿಧಗಳು :

1. ದೇಶೀಯ ಶಿಕ್ಷಣ ಸಾಲ ( indian study loan) ಭಾರತದ ಒಳಗೆ ಓದಲು ಪಡೆಯುವ ಸಾಲ

2. ವಿದೇಶಿ ಶಿಕ್ಷಣ ಸಾಲ ( abroad study loan) ವಿದೇಶದಲ್ಲಿ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುತ್ತದೆ

ಪ್ರಮುಖ ಶಿಕ್ಷಣ ಸಾಲ ಯೋಜನೆಗಳು

1. PM vidyalakshmi  ಯೋಜನೆ . ಕೇಂದ್ರ ಸರ್ಕಾರದ ಪ್ರಮುಖ ಯೋಜನೆ, ₹7.5 ಲಕ್ಷ ವರೆಗೆ. ಸಾಲ , ಹಲವು ಬ್ಯಾಂಕ್ ಗಳ ಮೂಲಕ ಅರ್ಜಿ ಸಲ್ಲಿಕೆ

2. Interest subsidy scheme (CSIS ) ಹೊಸ ವಿದ್ಯಾರ್ಥಿಗಳಿಗೆ ಬಡ್ಡಿ ಸಬ್ಸಿಡಿ, ಕುಟುಂಬದ ಆದಾಯ  ₹4.5 ಲಕ್ಷಕ್ಕಿಂತ ಕಡಿಮೆ ಇರಬೇಕು, ಕೋರ್ಸ್ ಅವಧಿ + 1 ವರ್ಷ ಬಡ್ಡಿ ಸರ್ಕಾರವೇ ಪಾವತಿಸುತ್ತಿದೆ

3 ಕರ್ನಾಟಕದ ಅರಿವು ಶಿಕ್ಷಣ ಸಾಲ ಯೋಜನೆ . ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ  ₹50,000 ರಿಂದ ₹ 5,00,000 ವರೆಗೆ ಸಾಲ  ಕೇವಲ ಬಡ್ಡಿ 2% ಆಗಿ , ಯಾವುದೇ ಗಿರವಿ ಅಗತ್ಯವಿಲ್ಲ

ಅರ್ಹತೆ : (eligibility)

ಶಿಕ್ಷಣ ಸಾಲ ಪಡೆಯಲು ಸಾಮಾನ್ಯವಾಗಿ ಈ ಅರ್ಹತೆಗಳು ಅಗತ್ಯ :

* ಭಾರತೀಯ ನಾಗರಿಕರಾಗಿರಬೇಕು

* 12 ನೇ ತರಗತಿ ಉತ್ತೀರ್ಣರಾಗಿರಬೇಕು

* ಮಾನ್ಯ ಕಾಲೇಜು / ವಿಶ್ವ ವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು

* CET, NEET, JEE  ಮುಂತಾದ ಪರೀಕ್ಷೆಗಳಲ್ಲಿ ಅರ್ಹತೆ

ಬ್ಯಾಂಕ್ ನಿಯಮಗಳ ಪ್ರಕಾರ ಕೆಲವು ಸಂಧರ್ಭಗಳಲ್ಲಿ ಕನಿಷ್ಠ 60% ಅಂಕಗಳು ಅಗತ್ಯವಿರಬಹುದು

ಸಾಲದ ಮೊತ್ತ : (loan amount)

ಭಾರತದಲ್ಲಿ ಓದಲು –> ₹ 10 ಲಕ್ಷ ವರೆಗೆ

ವಿದೇಶದಲ್ಲಿ ಓದಲು –> ₹ 100 ಲಕ್ಷ ವರೆಗೆ

ಬಡ್ಡಿದರ : (interest rate):

ಸಾಮಾನ್ಯವಾಗಿ 8% ರಿಂದ 12% ವರೆಗೆ  , ಸರ್ಕಾರದ ಯೋಜನೆಗಳು ಕಡಿಮೆ ( ಉದಾ arivu -02%)

ಗಿರವಿ ( collateral) ನಿಯಮಗಳು :

₹4 ಲಕ್ಷದವರೆಗೆ – ಗಿರವಿ ಅಗತ್ಯವಿಲ್ಲ

₹4- 7.5 ಲಕ್ಷ – ಗ್ಯಾರಂಟಿ ಬೇಕು

₹ 7-5 ಲಕ್ಷ ಮೇಲ್ಪಟ್ಟರೆ – ಆಸ್ತಿ ಗಿರವಿ ಬೇಕು

ಮರುಪಾವತಿ :(Repayment)

ಕೋರ್ಸ್ ಮುಗಿದ ನಂತರ 6 ತಿಂಗಳು  1 ವರ್ಷ ಗ್ಯಾಪ್ ( moratorium)  ನಂತರ EMI ಪ್ರಾರಂಭ . 10 ರಿಂದ 15 ವರ್ಷಗಳವರೆಗೆ ಮರುಪಾವತಿ ಅವಧಿ

ಯಾವ ವೆಚ್ಚಗಳಿಗೆ ಸಾಲ ಸಿಗುತ್ತದೆ ?

  • *ಕಾಲೇಜು ಶುಲ್ಕ
  • * ಹಾಸ್ಟೆಲ್ ಶುಲ್ಕ
  • * ಪುಸ್ತಕಗಳು ಮತ್ತು ಲ್ಯಾಪ್ ಟಾಪ್
  • * ಪ್ರಯಾಣ ವೆಚ್ಚ
  • * ಪರೀಕ್ಷಾ ಶುಲ್ಕ

ಅಗತ್ಯ ದಾಖಲೆಗಳು

  • * ಆಧಾರ್ ಕಾರ್ಡ್
  • * SSLC & PUC ಮಾರ್ಕ್ಸ್ ಕಾರ್ಡ್
  • * Admission letter
  • *Income certificate
  • *Bank statement
  • * Passport ( ವಿದೇಶಿ ಶಿಕ್ಷಣಕ್ಕೆ)

ಶಿಕ್ಷಣ ಸಾಲ ಪಡೆಯುವ ವಿಧಾನ !.

1. ಬ್ಯಾಂಕ್ ಅಥವಾ vidyalakshmi ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಿ

2. ಅಗತ್ಯ ದಾಖಲೆಗಳನ್ನು ಸಲ್ಲಿಸಿ

3. ಬ್ಯಾಂಕ್ ಪರಿಶೀಲನೆ

4. ಸಾಲ ಮಂಜೂರು

5. ಹಣ ನೇರವಾಗಿ ಕಾಲೇಜಿಗೆ ಜಮಾ

ಶಿಕ್ಷಣ ಸಾಲದ ಲಾಭಗಳು :

* ಉನ್ನತ ಶಿಕ್ಷಣಕ್ಕೆ ಹಣದ ಸಹಾಯ

* ಕಡಿಮೆ ಬಡ್ಡಿ ದರ

* ಮೆರೋಟೋರಿಯಂ ಸೌಲಭ್ಯ

* ಸರ್ಕಾರದ ಸಬ್ಸಿಡಿ

* ತೆರಿಗೆ ಸಡಲೀ( section 80E )

ಸಮಸ್ಯೆಗಳು ಮತ್ತು ಎಚ್ಚರಿಕೆಗಳು

* ಬಡ್ಡಿ ಹೆಚ್ಚಾಗುವ ಸಾದ್ಯತೆ

* ಸಮಯಕ್ಕೆ EMI  ಪಾವತಿ ಮಾಡದಿದ್ದರೆ ಪೆನಾಲ್ಟಿ

* ಗಿರವಿ ಸಮಸ್ಯೆಗಳು.

* ಸರಿಯಾದ ಮಾಹಿತಿ ಇಲ್ಲದಿದ್ದರೆ ಸಬ್ಸಿಡಿ ಕಳೆದುಕೊಳ್ಳುವ ಸಾದ್ಯತೆ

ಕೆಲವರು ಬ್ಯಾಂಕ್ ಸಬ್ಸಿಡಿ ಪ್ರಕ್ರಿಯೆ ವಿಳಂಬ ಮಾಡುತ್ತಾರೆ ಎಂಬ ಅನುಭವಗಳು ಇದ್ದಾವೆ  ಆದ್ದರಿಂದ ವಿದ್ಯಾರ್ಥಿಗಳು ಗಮನದಿಂದ ಟ್ರ್ಯಾಕ್ ಮಾಡಬೇಕು

ಉಪಸಂಹಾರ :

ಶಿಕ್ಷಣ ಸಾಲ ಯೋಜನೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಅತ್ಯಂತ ಮುಖ್ಯ ಸಾಧನವಾಗಿದೆ  ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಇದು ಒಂದು ಆಶಾಕಿರಣವಾಗಿ  ಸರ್ಕಾರದ ವಿವಿಧ ಯೋಜನೆಗಳು ಬಡ್ಡಿ ಸಬ್ಸಿಡಿ ಮತ್ತು ಕಡಿಮೆ ಬಡ್ಡಿ ದರಗಳಿಂದ ಶಿಕ್ಷಣ ಸಾಲವನ್ನು ಸುಲಭವಾಗಿ ಪಡೆಯಬಹುದು

ಆದರೆ ಸಾಲ ಪಡೆಯುವ ಮೊದಲು ಅದರ ನಿಯಮಗಳು ಬಡ್ಡಿ ಮರುಪಾವತಿ ವ್ಯವಸ್ಥೆ  ಇತ್ಯಾದಿಗಳನ್ನು ಸಂಪೂರ್ಣವಾಗಿ  ತಿಳಿದುಕೊಳ್ಳುವುದು ಅಗತ್ಯ  ಸರಿಯಾಗಿ ಬಳಸಿದರೆ ಶಿಕ್ಷಣ  ಸಾಲ ನಿಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿದೆ

ನೆನಪಿರಲಿ

Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

 

Leave a Comment