Telegram Join My Telegram WhatsApp Join My WhatsApp

ಸರ್ಕಾರದಿಂದ ವಿಧ್ಯಾರ್ಥಿಗಳಿಗೆ ‘KEO’ ಎ ಐ ಪರ್ಸನಲ್ ಕಂಪ್ಯೂಟರ್ ವಿತರಣೆ : ಕೇವಲ 18,999 ರೂ ಗೆ ಮಾರಾಟ ! ವಿಶೇಷತೆಗಳೇನು ?

ಕರ್ನಾಟಕ ಸರ್ಕಾರದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ನೀಡಲು ಕಿಯೋ ಎಂಬ ಹೊಸ  ಮೈಕ್ರೋ ಪರ್ಸನಲ್ ಕಂಪ್ಯೂಟರ್ ಅನ್ನು ಪರಿಚಯಿಸಿದೆ . ಇದು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ವಿನ್ಯಾಸಗೊಂಡು ತಯಾರಾದ ಸಾಧನವಾಗಿದೆ. ಸುಮಾರು 19,000 ರೂ ಬೆಲೆಯ ಈ ಕಂಪ್ಯೂಟರ್, ಇಂಟರ್ನೆಟ್ ಇಲ್ಲದಿದ್ದರೂ  ಕಾರ್ಯನಿರ್ವಹಿಸುವ  ‘ ಆನ್ – ಡಿವೈಸ್ ಎ ಐ. ಸೌಲಭ್ಯವನ್ನು ಹೊಂದಿದೆ . ‘ ಬುದ್ಧ ‘ ಎಂಬ   ಎ ಐ  ಚಾಟ್ಬಾಟ್  ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನೆರವಾಗಲಿದೆ

ಮಕ್ಕಳಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ತಲುಪಿಸಲು ಕರ್ನಾಟಕ ಸರ್ಕಾರವೂ ಕಿಯೋ ಎಂಬ ಮೈಕ್ರೋ ಪಿಸಿಯನ್ನು ಪರಿಚಯಿಸಿದೆ. ಇದು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ವಿನ್ಯಾಸಗೊಂಡು ತಯಾರಾದ ಸಾಧನವಾಗಿದೆ. ಈ ಹಿನ್ನೆಲೆಯಲ್ಲಿ ಈ ಕಂಪ್ಯೂಟರ್ ನಾ ವಿಶೇಷತೆಗಳೇನು ? ಎಂಬುದನ್ನು ತಿಳಿಯೋಣ

ಕಿಯೋ ಕಂಪ್ಯೂಟರ್ ಎಂದರೇನು  ?

ಕರ್ನಾಟಕ ಸರ್ಕಾರ ಮತ್ತು ಕಿಯೋನಿಕ್ಸ್ ಸಹಯೋಗದಿಂದ ಬಿಡುಗಡೆ ಮಾಡಲಾದ KEO (knowledge – driven, economical open- source) ಕಂಪ್ಯೂಟರ್, ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿರುವ ಒಂದು ಕ್ರಾಂತಿಕಾರಿ ಆವಿಷ್ಕಾರವಾಗಿದೆ . ಸುಮಾರು 19,000 ರೂ ಬೆಲೆಯ ಈ  ಪುಟ್ಟ ಮೈಕ್ರೋ ಪಿಸಿಯು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ವಿನ್ಯಾಸಗೊಂಡು ತಯಾರಿಸುವುದು ವಿಶೇಷ . ಪ್ರೊಫೆಸರ್ ಮತ್ತು  ಲಿನಿಕ್ಸ್ ಕಾರ್ಯಾಚರಣ ವ್ಯವಸ್ತೆಯನ್ನು ಹೊಂದಿದೆ  ಇದರ ಪ್ರಮುಖ ವಿಶಿಷ್ಟತೆ ಎಂದರೆ ಇಂಟರ್ನೆಟ್ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ಆನ್ ಡಿವೈಸ್ ಎ ಐ ಸೌಲಭ್ಯ. ಇದರಲ್ಲಿರುವ ಬುದ್ಧ ‘. ಎಂಬ ಎ ಐ ಚಾಟ್ ಬಾಟ್ ಕರ್ನಾಟಕದ DSERT ಪಠ್ಯಕ್ರಮದ ಮೇಲೆ ತರಬೇತಿ ಪಡೆದಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ನೆರವಾಗುತ್ತದೆ . 4G  ವೈ -ಫೈ  ಮತ್ತು  ವಿವಿಧ ಪೋರ್ಟಗಳ ಸಂಪರ್ಕ ಹೊಂದಿರುವ ಈ ಕೈಗೆಟುಕುವ ದರದ ಎ ಐ ಸಿದ್ಧ ಕಂಪ್ಯೂಟರ್ , ಸಾಮಾನ್ಯ ಕುಟುಂಬಗಳು , ವಿದ್ಯಾರ್ಥಿಗಳು ಮತ್ತು ಸಣ್ಣ ಉದ್ಯಮಿಗಳನ್ನು ತಂತ್ರಜ್ಞಾನದ ಮುಖ್ಯವಾಹಿನಿಗೆ  ತರುವ ಗುರಿ ಹೊಂದಿದೆ

KEO  ಕಂಪ್ಯೂಟರ್ ನಾ ಪ್ರಮುಖ ವೈಶಿಷ್ಟ್ಯಗಳು :

*ಈ ಪುಟಾಣಿ ಕಂಪ್ಯೂಟರ್ ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಎಲ್ಲಾ ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿದೆ

* ಕೇವಲ 18,999  ರೂ ಬೆಲೆ ಹೊಂದಿರುವ ಇದು ಭಾರತದಲ್ಲಿ  ಅತ್ಯಂತ ಕಡಿಮೆ ದರದ ಎ ಐ (AI) ಕಂಪ್ಯೂಟರ್ ಎಂದು ಹೆಸರುವಾಸಿಯಾಗಿದೆ

ಇದರ ವೇಗವರ್ಧನೆಗಾಗಿ ಅತ್ಯಾಧುನಿಕ ಹಾಗೂ ಮುಕ್ತ  ತಂತ್ರಜ್ಞಾನದ  64ಬಿಟ್  ಕ್ವಾಡ್ ಕೋರ್  RISC -V ಪ್ರೊಫೆಸರ್ ಅನ್ನು ಬಳಸಲಾಗಿದೆ

ಸಂಪೂರ್ಣ ಓಪನ್ ಸೋರ್ಸ್ ಸಾಫ್ಟವೇರ್  ಆಗಿರುವ ಲಿನಿಕ್ಸ್ ಆಧಾರಿತ ಕಾರ್ಯಾಚರಣಾ  ವ್ಯವಸ್ತೆಯನ್ನು ಇದು ಹೊಂದಿದೆ

* ಈ ಕಂಪ್ಯೂಟರ್ ಗಾತ್ರದಲ್ಲಿ  ಅತ್ಯಂತ ಚಿಕ್ಕದಾಗಿದ್ದು ,ಕೇವಲ ಒಂದು ಪವರ್ ಬ್ಯಾಂಕ್ ಅಷ್ಟೇ ಇದೆ ; ಇದರಿಂದಾಗಿ ಇದನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು

* ಇದರಲ್ಲಿ 8GB RAM. ಸೌಲಭ್ಯವಿದ್ದು 32 GB  ಆಂತರಿಕ ಮೆಮೊರಿಯನ್ನು ಅಗತ್ಯಕ್ಕೆ  ತಕ್ಕಂತೆ 1TB ವರೆಗೆ ಹೆಚ್ಚಿಸಿಕೊಳ್ಳಲು ಅವಕಾಶವಿದೆ

*  ಕಂಪ್ಯೂಟರ್ ಖರೀದಿಸಿದ ತಕ್ಷಣ ಬಳಸಲು ಅನುಕೂಲವಾಗುವಂತೆ , ಕಲಿಕೆ , ಪ್ರೋಗ್ರಾಮಿಂಗ್  ಮತ್ತು ದಿನನಿತ್ಯದ ಕೆಲಸಗಳಿಕೆ ಬೇಕಾದ ಅಪ್ಲಿಕೇಶನ್ ಗಳನ್ನು ಮೊದಲೇ ಅಳವಡಿಸಲಾಗಿದೆ

‘ ಬುದ್ಧ ‘ ಆಫ್ ಲೈನ್ ಎ ಐ  ಸಹಾಯಕ –

ಈ ಕಂಪ್ಯೂಟರ್ ನ  ಅತ್ಯಂತ ವಿಶಿಷ್ಟ ವೈಶಿಷ್ಟ್ಯವೆಂದರೆ ಇದರಲ್ಲಿ ಅಳವಡಿಸಲಾಗಿರುವ ‘ BIDDH ‘ ಎಂಬ ಎ ಐ (AI) ಏಜೆಂಟ್. I ಕೃತಕ ಬುದ್ಧಿಮತ್ತೆಯ ಸಾಧನವು ಕರ್ನಾಟಕದ DSERT ಪಠ್ಯಕ್ರಮದ ಆಧಾರದ ಮೇಲೆ ವಿಶೇಷವಾಗಿ ತರಬೇತಿ ಪಡೆದಿದೆ. ಇದರ ವಿಶೇಷತೆ ಎಂದರೆ , ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸಹ ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಬಲ್ಲದು . ನೆಟ್ ವರ್ಕ್ ಸಮಸ್ಯೆ ಇರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದು ದಿನದ 24 ಗಂಟೆಯೂ ಲಭ್ಯವಿರುವ ಒಬ್ಬ ವೈಯಕ್ತಿಕ ಡಿಜಿಟಲ್ ಶಿಕ್ಷಕನಂತೆ ನೆರವಾಗುತ್ತದೆ . ಶಾಲಾ ಪಠ್ಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ಪರಿಹರಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯನ್ನು ಇದು ಸುಲಭಗೊಳಿಸುತ್ತದೆ

ಯಾರು ಇದನ್ನು ಪಡೆಯಬಹುದು ?

* ಯೋಜನೆಯ ಮೊದಲ ಹಂತದಲ್ಲಿ ಬೆಳಗಾವಿ, ಕಲಬುರಗಿ, ಬೆಂಗಳೂರು , ಮತ್ತು ಮೈಸೂರು, ಕಂದಾಯ ವಿಭಾಗಗಳ ಸರ್ಕಾರಿ ಪ್ರೌಢಶಾಲೆಗಳ ವಿಧ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

* ವಿಶೇಷವಾಗಿ 8 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕಂಪ್ಯೂಟರ್ ಗಳನ್ನು ವಿತರಿಸುವ  ಗುರಿ ಹೊಂದಲಾಗಿದೆ

*ಕೇವಲ ವಿದ್ಯಾರ್ಥಿಗಳಲ್ಲದೆ ಸಣ್ಣ ಉದ್ಯಮಿಗಳು , ಗೃಹಿಣಿಯರು ಮತ್ತುಸಮಾನ್ಯ ಸಾರ್ವಜನಿಕರು ಕೂಡ ಈ ಕಂಪ್ಯೂಟರ್ ಅನ್ನು ಪಡೆಯಲು ಅವಕಾಶವಿದೆ

* ಆಸಕ್ತರು ಈ ಸಾಧನವನ್ನು ಖರೀದಿಸಲು ಕಿಯೋನಿಕ್ಸ್ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು .

* ಆಡಳಿತಾತ್ಮಕ ಕೆಲಸಗಳಿಗಾಗಿ ಗ್ರಾಮ ಪಂಚಾಯತ್ ಗ್ರಂಥಾಲಯಗಳು ಮತ್ತು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೂಡ ಈ ಸಾಧನವನ್ನು ಅಳವಡಿಸಲು ಯೋಚಿಸಲಾಗಿದೆ

* ದಿನನಿತ್ಯದ ದಾಖಲಾತಿ ಮತ್ತು ದತ್ತಾಂಶ ನಿರ್ವಹಣೆಗಾಗಿ ಸರ್ಕಾರಿ ಕಚೇರಿಗಳಲ್ಲಿ ಈ ಅಗ್ಗದ ಎ ಐ  ಕಂಪ್ಯೂಟರ್ ಗಳನ್ನು ಬಳಸಲಾಗುವುದು

ಕಿಯೋ ಕಂಪ್ಯೂಟರ್ ಅನುಕೂಲಗಳು :-

ಕಂಪ್ಯೂಟರ್ ಸಾಮಾನ್ಯ ಲ್ಯಾಪ್ಟಾಪ್ ಗಳಿಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಕಾರಣ, ಎಲ್ಲರಿಗೂ ಪೂರ್ಣ ಪ್ರಮಾಣದ ಕಂಪ್ಯೂಟರ್ ಅನುಭವವನ್ನು ನೀಡುತ್ತದೆ

* ಇದು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ವಿನ್ಯಾಸಗೊಂಡು ಸಿದ್ಧಪಡಿಸಲಾದ ಸಾಧನವಾಗಿದ್ದು ಸರ್ಕಾರದ  ಮೆಡ್ ಇನ್ ಕರ್ನಾಟಕ ‘ ಅಭಿಯಾನಕ್ಕೆ ಭಾರಿ ಬೆಂಬಲ ನೀಡುತ್ತದೆ

* ಈ ಕಂಪ್ಯೂಟರ್ ಮುಕ್ತ ತಂತ್ರಜ್ಞಾನ ಆಧಾರಿತವಾಗಿರುವುದರಿಂದ, ವಿದ್ಯಾರ್ಥಿಗಳು ಮತ್ತು ತಂತ್ರಜ್ಞರು ಯಾವುದೇ ನಿರ್ಬಂಧವಿಲ್ಲದೆ ತಮ್ಮದೇ ಆದ ಹೊಸ ಅಪ್ಲಿಕೇಶನ್ ಗಳನ್ನು  ಅಭಿವೃದ್ಧಿಪಡಿಸಲು ಇಲ್ಲಿ ಮುಕ್ತ ಅವಕಾಶವಿದೆ .

* ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್  ಬಳಸಿರುವುದರಿಂದ , ಇದು ತಂತ್ರಜ್ಞಾನ  ಕ್ಷೇತ್ರದಲ್ಲಿ  ರಾಜ್ಯದ ಸ್ವಾವಲಂಬನೆಯನ್ನು  ಎತ್ತಿ ತೋರಿಸುತ್ತದೆ

* ವಿದ್ಯಾರ್ಥಿಗಳು ಕೋಡಿಂಗ್ , ಪ್ರೋಗ್ರಾಮಿಂಗ್, ಮತ್ತು ಆಧುನಿಕ ತಂತ್ರಜ್ಞಾನ ಪಡೆಯಲು ಈ ಮುಕ್ತ ವೇದಿಕೆಯು ಅತ್ಯಂತ ಸಹಕಾರಿಯಾಗಿದೆ

ಅರ್ಜಿ ಸಲ್ಲಿಸುವುದು ಹೇಗೆ ?

*ಸಾಮಾನ್ಯ ಗ್ರಾಹಕರು KEO  ಕಂಪ್ಯೂಟರ್ ಅನ್ನು ಖರೀದಿಸಲು ಅಥವಾ ಮುಂಗಡವಾಗಿ ಕಾಯ್ದಿರಿಸಲು ಕಿಯೋನಿಕ್ಸ್ ಅಧಿಕೃತ ವೆಬ್ ಸೈಟ್ keonext.in ಗೆ ಭೇಟಿ ನೀಡಬಹುದು .

*2025 ra ಅಂತ್ಯದ ವೇಳೆಗೆ ಈ ಯೋಜನೆಯು ಜಾರಿಗೆ ಬಂದಿದ್ದು , ಪ್ರಸ್ತುತ ವೆಬ್ ಸೈಟ್ ನಲ್ಲಿ ಮುಂಗಡ  ಬುಕಿಂಗ್ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬಹುದು

* ಆರಂಭದಲ್ಲಿ ಈ ಯೋಜನೆಯನ್ನು ಆಯ್ದ ಸರ್ಕಾರಿ ಕಾರ್ಯಕ್ರಮಗಳಿಗೆ  ಸೀಮಿತಗೊಳಿಸಲಾಗಿದ್ದರು, ಮುಂಬರುವ  ದಿನಗಳಲ್ಲಿ ಇದನ್ನು ಎಲ್ಲಾ ಸಾರ್ವಜನಿಕರಿಗೆ ಮುಕ್ತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ

* ವೈಯಕ್ತಿಕವಾಗಿ ಖರೀದಿಸಲು ಇಚ್ಛಿಸುವರಿಗಾಗಿ ಮತ್ತು ಇತರ ರಾಜ್ಯಗಳಿಗೂ ಈ ತಂತ್ರಜ್ಞಾನವನ್ನು ವಿಸ್ತರಿಸಲು ಕರ್ನಾಟಕ ಐಟಿ ಇಲಾಖೆಯು  ಯೋಜನೆ ರೂಪಿಸುತ್ತಿದೆ

* ಈ ಕಂಪ್ಯೂಟರ್ ನ ಲಭ್ಯತೆ ಮತ್ತು ಹೊಸ ಖರೀದಿ ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಐಟಿ-ಬಿಟಿ  ಇಲಾಖೆ ಅಥವಾ ಕಿಯೋನಿಕ್ಸ್ ಅಧಿಕೃತ ಪ್ರಕಟಣೆಗಳನ್ನು ಗಮನಿಸುತ್ತಿರಬೇಕು

ನೆನಪಿರಲಿ :-

Vishwavanione.com  ತನ್ನ ಓದುಗರರಿಗೆ ನಿಖರವಾಗಂದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಾಧಿಕೃತವಾದ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ  ಧನ್ಯವಾದಗಳು …..

Leave a Comment