- ಇಂದಿನ ಕಾಲದಲ್ಲಿ ಶಿಕ್ಷಣವು ವಯಕ್ತಿಕ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ ವಿಶೇಷವಾಗಿ 12 PUC scholarship ಗಾಗಿ PUC ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಆದರೆ ಆರ್ಥಿಕ ಸಮಸ್ಯೆಗಳು ಅನೇಕ ವಿದ್ಯಾರ್ಥಿಗಳ ಕನಸಿಗೆ ಅಡ್ಡಿಯಾಗುತ್ತದೆ ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿವಿಧ ಸಹಾಯಧನ (scholarship) ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಬೆಂಬಲ ಒದಗಿಸುವ ಯೋಜನೆಗಳ ವಿವರ ಇಲ್ಲಿದೆ

2 PUC scholarship PUC ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ ಸಹಾಯಧನದ ಯೋಜನೆಗಳು
2 PUC ನಂತರ ವಿದ್ಯಾರ್ಥಿಗಳ ಪದವಿ , ಡಿಪ್ಲೊಮೊ, ತಾಂತ್ರಿಕ ಶಿಕ್ಷಣ , ವೈದ್ಯಕೀಯ , ಇಂಜಿನಿಯರಿಂಗ್, ಅಥವಾ ಇತರೆ ಕೋರ್ಸ್ ಗಳ ಮಾಡುತ್ತಾರೆ. ಈ ಸಮಯದಲ್ಲಿ ಶುಲ್ಕ ಪುಸ್ತಕಗಳು,ವಸತಿ , ಪ್ರಯಾಣದ ವೆಚ್ಚಗಳು ಹೆಚ್ಚಾಗುತ್ತವೆ
ಸಹಾಯಧನ ಯೋಜನೆಯ ಮುಖ್ಯ ಉದ್ದೇಶ!
ಬಡ ಹಾಗೂ ಮದ್ಯ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು . ವಿದ್ಯಾಬ್ಯಾಸ ಮುಂದುವರಿಸಲು ಪ್ರೋತ್ಸಾಹ ಧನ ನೀಡಲಾಗುವುದು, ಡ್ರಾಪೌಟ್ ಪ್ರಮಾಣ ಕಡಿಮೆ ಮಾಡುವುದು, ಪ್ರತಿಮಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು
ಪ್ರಮುಖ ಸಹಾಯಧನ ಯೋಜನೆಗಳು!
ರಾಜ್ಯ ಸರ್ಕಾರ ವಿದ್ಯಾರ್ಥಿ ವೇತನ . ರಾಜ್ಯ ಸರ್ಕಾರವು ವಿವಿಧ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತದೆ , 12 PUC ಪಾಸಾಗಿರಬೇಕು , ಕುಟುಂಬದ ಆದಾಯ ಮಿತಿ ಒಳಗಿರಬೇಕು ಮಾನ್ಯ ಕಾಲೇಜಿನಲ್ಲಿ ಪ್ರವೇಶ ಹೊಂದಿರಬೇಕು 5 ರಿಂದ 25 ಸಾವಿರದ ಹೊರಗೆ ಸಹಾಯಧನ ಪಡೆಯಲು ಅರ್ಹರಾಗುತ್ತಾರೆ ಕೆಲವು ಸಂಧರ್ಭಗಳಲ್ಲಿ ಶುಲ್ಕ ಮನ್ನವಾಗುತ್ತದೆ
SC /ST ವಿದ್ಯಾರ್ಥಿ ವೇತನ . ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸಹಾಯಧನ ವಿವರ.!
SC/ST. ವರ್ಗಕ್ಕೆ ಸೇರಿದವರಾಗಿರಬೇಕು. 12 PUC ಪಾಸಾಗಿರಬೇಕು .ಉನ್ನತ ಶಿಕ್ಷಣಕ್ಕೆ ಸೇರ್ಪಡೆಗೊಂಡಿರಬೇಕು ಈ ಯೋಜನೆಯಡಿ ಸಂಪೂರ್ಣ ಶುಲ್ಕ ಮನ್ನಾ ಹಾಗೂ ವಸತಿ ಭತ್ಯೆ ಪುಸ್ತಕದ ಖರ್ಚು ಇನ್ನಿತರ ವಿದ್ಯಾಭ್ಯಾಸಕ್ಕಾಗಿ ಈ ಯೋಜನೆ ಸಹಾಯವಾಗುತ್ತದೆ ಹಾಗೆಯೇ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಈ ಯೋಜನೆ ಲಭ್ಯವಿದೆ 3 ರಿಂದ 10 ಸಾವಿರದ ವರೆಗೆ ವಿದ್ಯಾಭ್ಯಾಸಕ್ಕಾಗಿ ನೆರವು
ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ (PM scholarship)
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆಗಳು .
- *2 PUC ನಂತರ ಪದವಿ / ತಾಂತ್ರಿಕ ಕೋರ್ಸ್ ಗೆ ಸೇರ್ಪಡೆಯಾಗಿರಬೇಕು
- * ಕೆಲವು ವಿಶೇಷ ವರ್ಗಗಳಿಗೆ ಮೀಸಲು
- * ಪ್ರತಿ ತಿಂಗಳು 1 ರಿಂದ 3 ಸಾವಿರದ ವರೆಗೆ 3 ರಿಂದ 5 ವರ್ಷಗಳ ವರೆಗೆ
- * ವಿದ್ಯಾಸಿರಿ ಸಹಾಯಧನ
- * ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆ
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಲಭ್ಯ ಇಲ್ಲದವರಿಗೆ ಈ ಯೋಜನೆಯಡಿ ತಿಂಗಳಿಗೆ 1500 ರೂಪಾಯಿಗಳ ವರೆಗೆ ಹಾಗೂ ಆಹಾರ ಮತ್ತು ವಸತಿ ಸಹಾಯಕ್ಕಾಗಿ ಈ ಯೋಜನೆ ಸಹಕಾರಿಯಾಗುತ್ತದೆ
ನ್ಯಾಷನಲ್ ಮೀನ್ – ಕಮ್ – ಮೆರಿಟ್ ವಿದ್ಯಾರ್ಥಿ ವೇತನ
* ಮಧ್ಯ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 12,000 ಸಾವಿರ ರುಪಾಯಿ ಸಹಾಯಧನ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ , ಮುಸ್ಲಿಂ, ಸಿಖ್, ಬೌದ್ಧ ವಿದ್ಯಾರ್ಥಿಗಳಿಗೆ ಸುಮಾರು 20,000 ಹಾಗೂ ಶುಲ್ಕ ಮನ್ನಾ ಸೌಲಭ್ಯಗಳನ್ನು ನೀಡಿದೆ
ಅರ್ಜಿ ಸಲ್ಲಿಸುವ ವಿಧಾನ!
ಸಹಾಯಧನ ಪಡೆಯಲು ಸರಿಯಾದ ವಿಧಾನವನ್ನು ಅನುಸರಿಸುವುದು ಮುಖ್ಯ
1. ಅಧಿಕೃತ ಪೋರ್ಟಲ್ ಗೆ ಭೇಟಿ ನೀಡುವುದು
2. ನೋಂದಣಿ ( ರಿಜಿಸ್ಟ್ರೇಷನ್ ಮಾಡುವುದು)
3. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವುದು
4. ಅರ್ಜಿ ಸಲ್ಲಿಸುವುದು
5. ಪರಿಶೀಲನೆ ಮತ್ತು ಮಂಜೂರು
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು!
- * 12 PUC ಮಾರ್ಕ್ಸ್ ಕಾರ್ಡ್
- * ಆಧಾರ್ ಕಾರ್ಡ್
- * ಆದಾಯ ಪ್ರಮಾಣಪತ್ರ
- * ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- * ಬ್ಯಾಂಕ್ ಪಾಸ್ ಬುಕ್ ಹಾಗೂ ಪೋಟೋ
ವಿದ್ಯಾರ್ಥಿಗಳಿಗೆ ಮುಖ್ಯ ಸೂಚನೆ
ಸಾಮಾನ್ಯವಾಗಿ ಜೂನ್ ರಿಂದ ಸೆಪ್ಟೆಂಬರ್ ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗುತ್ತದೆ , ಕೊನೆಯ ದಿನಾಂಕವನ್ನು ತಪ್ಪದೆ ಗಮನಿಸಬೇಕು, ವಿದ್ಯಾರ್ಥಿಗಳಿಗೆ ಮುಖ್ಯ ವಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಮಾತ್ರ ನೀಡಿ , ದಾಖಲೆಗಳು ಸ್ಪಷ್ಟವಾಗಿರಲಿ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವುದು ಹಾಗೂ ಬ್ಯಾಂಕ್ ಖಾತೆ ಸಕ್ರಿಯವಾಗಿರಲಿ
ಸಹಾಯಧನದ ಪ್ರಯೋಜನಗಳು!
ಸಹಾಯಧನದಿಂದ ವಿದ್ಯಾರ್ಥಿಗಳಿಗೆ ಹಲವಾರು ಲಾಭಗಳಿವೆ : ಆರ್ಥಿಕ ಒತ್ತಡ ಕಡಿಮೆ, ವಿದ್ಯಾಬ್ಯಾಸ ಮುಂದುವರಿಸಲು ಅವಕಾಶ, ಉತ್ತಮ ಭವಿಷ್ಯ ನಿರ್ಮಾಣ , ಕುಟುಂಬದ ಬಾರ ಕಡಿಮೆ ಮಾಡಲು ಸಹಕಾರಿ
ಸವಾಲುಗಳು ಮತ್ತು ಪರಿಹಾರಗಳು
ಮಾಹಿತಿ ಕೊರತೆ , ಅರ್ಜಿ ಪ್ರಕ್ರಿಯೆಯೇ ಕಷ್ಟ , ದಾಖಲೆಗಳ ಸಮಸ್ಯೆ , – ಪರಿಹಾರಗಳು : ಶಾಲಾಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ , ಆನ್ ಲೈನ್ ನಲ್ಲಿ ಮಾರ್ಗದರ್ಶನ , ಸರ್ಕಾರದ ಸಹಾಯ ಕೇಂದ್ರಗಳು ,
ಭವಿಷ್ಯದ ದೃಷ್ಟಿಕೋನ
ಸರ್ಕಾರವೂ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವ ಸಾದ್ಯತೆ . ಡಿಜಿಟಲ್ ಅರ್ಜಿ ಪ್ರಕ್ರಿಯೆ ಸುಧಾರಣೆ . ವಿದ್ಯಾರ್ಥಿಗಳಿಗೆ ಹೆಚ್ಚುವರಿ ಯೋಜನೆಗಳು . ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸರ್ಕಾರ ಹಲವು ಲಾಭದಾಯಕ ಮತ್ತು ವಿದ್ಯಾಭ್ಯಾಸಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ ಈ ಯೋಜನೆಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಎಂಬುದು ಸರ್ಕಾರ ಉದ್ದೇಶ ಆಗಿದೆ ಸಾಮಾನ್ಯವಾಗಿ ಈ ಯೋಜನೆಗಳು ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಸಹಕಾರಿಯಾಗಿದ್ದು ಬಡತನ ನಿರ್ಮೂಲನೆಗೆ ಸಹಕಾರಿಯಾಗುತ್ತದೆ
ಸಮಾರೋಪ :
2 PUC ಪಾಸಾದ ನಂತರ ವಿದ್ಯಾರ್ಥಿಗಳ ಜೀವನದಲ್ಲಿ ಹೋಸ ಅಧ್ಯಯನ ಆರಂಭವಾಗುತ್ತದೆ ಈ ಸಂಧರ್ಭದಲ್ಲಿ ಸಹಾಯಧನ ಯೋಜನೆಗಳು ವಿದ್ಯಾರ್ಥಿಗಳಿಗೆ ದೊಡ್ಡ ಬೆಂಬಲ ವಾಗುತ್ತದೆ. ಸರ್ಕಾರದ ಈ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡರೆ ಯಾವುದೇ ಆರ್ಥಿಕ ಅಡಚಣೆಗಳಿಲ್ಲದೆ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು ಪ್ರತಿಯೊಬ್ಬ ವಿದ್ಯಾರ್ಥಿಯು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಿ ತಮ್ಮ ಭವಿಷ್ಯವನ್ನು ಉತ್ತಮ ಗೊಳಿಸಿಕೊಳ್ಳಬೇಕು ಶಿಕ್ಷಣವೇ ಜೀವನ ಪ್ರಮುಖ ಹಂತವಾಗಿರುವುದರಿಂದ ಸಹಾಯಧನ ಯೋಜನೆಗಳ ಒಂದು ಮಹತ್ವದ ಅವಕಾಶವೆಂದು ಪರಿಗಣಿಸಬೇಕು
ನೆನಪಿರಲಿ
Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು