ಈ ಸಾರಿ ನಡೆಯುತ್ತಿರುವ 2026 ನ T-20 ವಿಶ್ವ ಕಪ್ ಪಂದ್ಯಾವಳಿಗಳು ಬಹಳ ರೋಚಕ ರೀತಿಯಲ್ಲಿ ನಡೆಯುತ್ತಿದ್ದು ಯಾವ ಯಾವ ತಂಡಗಳು ಸೆಮಿಫೈನಲ್ ಹಂತಕ್ಕೆ ಹೋಗುತ್ತವೆ ಎಂಬ ಗೊಂದಲವು ಎಲ್ಲರ ಮುಂದೆ ದೊಡ್ಡ ಪ್ರಶ್ನೆಯಾಗಿದೆ
ಸೆಮೀಸ್ ಆಡಲು ಯಾವ ತಂಡಗಳಿಗೆ ಅವಕಾಶವಿದೆ
ಒಂದು ಕಡೆ ಸೌತ್ ಅಪ್ರಿಕಾ ತಂಡವು ಮತ್ತು ಇಂಗ್ಲೆಂಡ್ ತಂಡವು ತಮ್ಮ ಒಂದು ಸೆಮೀ ಪೈನಲ್ ಆಡಲು ಆಯ್ಕೆ ಯಾಗಿದ್ದು ಇನ್ನುಳಿದ ಎರಡು ಸ್ಥಾನಗಳಿಗೆ ಬಹಳ ದೊಡ್ಡ ಪೈಪೋಟಿ ಏರ್ಪಟ್ಟಿದೆ ಎನ್ನಬಹುದು
ಸೆಮೀ ಫೈನಲ್ ಆಡಲು ಕಾಯುತ್ತಿರುವ ಇನ್ನುಳಿದ ನಾಲ್ಕು ತಂಡಗಳ ಮದ್ಯ ಎರಡು ಸ್ಥಾನಗಳಿಗೆ ಪೈಪೋಟಿ
ಹೌದು ಇನ್ನುಳಿದ ನಾಲ್ಕು ತಂಡಗಳಿಗೆ ಅವಕಾಶ ಇರುವ ಕಾರಣ ಸೆಮೀ ಫೈನಲ್ ಗೆ ಪೈಪೋಟಿ ನಡೆದಿದೆ. ತವರಿನ ತಂಡವಾದ ಭಾರತ ತಂಡವು ತನ್ ಎರಡು ಪಂದ್ಯಗಳನ್ನು ಅಡಿದೆ ಅದರಲ್ಲಿ ಸೌತ್ ಅಪ್ರಿಕಾ ವಿರುದ್ದ ಸೋತು ನಂತರ ಜಿಂಬಾಂಬೆ ವಿರುದ್ದ ಗೆಲುವನ್ನು ಪಡೆದಿದೆ ಮತ್ತು ಬಾಕಿ ಇರುವ ಒಂದು ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ ಅಡಲಿದ್ದು ಭಾರತ ತಂಡವು ಈ ವೆಸ್ಟ್ ಇಂಡೀಸ್ ವಿರುದ್ಧ ಮಾಡು ಇಲ್ಲವೆ ಮಡಿ ಪಂದ್ಯ ಆಗಿರುವ ಕಾರಣ ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೆಮೀ ಫೈನಲ್ ಗೆ ಲಗ್ಗೆ ಇಡುತ್ತದೆ
ಮತ್ತು ಅದೇ ರೀತಿ ವೆಸ್ಟ್ ಇಂಡೀಸ್ ತಂಡವು ಒಳ್ಳೆಯ ಪ್ರದರ್ಶನ ನೀಡುತ್ತ ಬಂದಿದೆ ವೆಸ್ಟ್ ಇಂಡೀಸ್ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೌತ್ ಅಪ್ರಿಕಾ ವಿರುದ್ದ ಸೋತು ನಂತರ ಜಿಂಬಾಂಬೆ ವಿರುದ್ಧ ಗೆಲುವನ್ನು ಸಾಧಿಸಿದೆ ಆದಾ ಕಾರಣ ವೆಸ್ಟ್ ಇಂಡೀಸ್ ಇನ್ನೂ ಒಂದು ಪಂದ್ಯ ಭಾರತ ತಂಡದ ವಿರುದ್ದ ಅಡಲಿದೆ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತ ತಂಡವನ್ನು ಸೋಲಿಸಿದರೆ ಡೈರೆಕ್ಟ್ ಸೆಮೀ ಫೈನಲ್ ಹಂತಕ್ಕೆ ಪ್ರವೇಶ ಪಡೆಯುತ್ತದೆ
ಗ್ರೂಪ್ ಬಿ ನಲ್ಲಿರುವ ತಂಡಗಳಾದ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ ತಂಡಗಳಿಗೆ ಅವಕಾಶ ಇದೇ. ಪಾಕಿಸ್ತಾನ ತಂಡವು ಸಹಾ ಎರಡು ಪಂದ್ಯಗಳನ್ನು ಅಡಿದೆ ಅದರಲ್ಲಿ ಒಂದು ಗೆದ್ದು ಇನ್ನೊಂದು ಟೈ ಆಗಿದೆ ಪಾಕಿಸ್ತಾನ ತಂಡದ ನೆಟ್ ರನ್ ರೇಟ್ – ಇರುವ ಕಾರಣ ಬಾಕಿ ಇರುವ ಇನ್ನೊಂದು ಪಂದ್ಯವನ್ನು ದೊಡ್ಡ ಪ್ರಮಾಣದಲ್ಲಿ ಗೆದ್ದರೆ ಮಾತ್ರ ಅವಕಾಶ ಸಿಗುತ್ತದೆ ಮತ್ತು ಇನ್ನೊಂದು ಕಡೆ ನ್ಯೂಜಿಲ್ಯಾಂಡ್ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ಅಡಿದೆ ಅದರಲ್ಲಿ ಒಂದು ಗೆದ್ದು ಒಂದು ಸೋತಿದೆ ಮತ್ತು ಪಾಕಿಸ್ತಾನದ ವಿರುದ್ದ ಟೈ ಆಗಿದೆ ಇದರಿಂದ ನ್ಯೂಜಿಲ್ಯಾಂಡ್ ತಂಡವು ಒಂದು ವೇಳೆ ಪಾಕಿಸ್ತಾನ ತಂಡವು ಶ್ರೀಲಂಕಾ ತಂಡದ ವಿರುದ್ದ ಸೋತರೆ ಮಾತ್ರ ಸೆಮೀ ಫೈನಲ್ ಗೆ ಪ್ರವೇಶ ಪಡೆಯುತ್ತದೆ
ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಯಾವ ತಂಡಕ್ಕೆ ಲಾಭ ಯಾವ ತಂಡಕ್ಕೆ ನಷ್ಟ?
ಭಾರತ ತಂಡ ಮತ್ತು ವೆಸ್ಟ್ ಇಂಡೀಸ್ ತಂಡವು ಎರಡು ತಂಡಗಳು ಒಂದು ಪಂದ್ಯ ಗೆದ್ದು ಒಂದು ಪಂದ್ಯವನ್ನು ಸೋತಿದೆ ಇದರಿಂದ ಈ ಎರಡು ತಂಡಗಳು ತಮ್ಮ ಅಂತಿಮ ಪಂದ್ಯವನ್ನು ಅಡಲಿದ್ದು ಯಾವ ತಂಡ ಗೆಲ್ಲುತದೆಯೊ ಅ ತಂಡ ಸೆಮೀ ಫೈನಲ್ ಗೆ ಪ್ರವೇಶ ಪಡೆಯುತ್ತದೆ ಒಂದು ವೇಳೆ ಪಂದ್ಯ ಮಳೆ ಬಂದು ರದ್ದಾದರೆ ವೆಸ್ಟ್ ಇಂಡೀಸ್ ತಂಡದ ನೆಟ್ ರನ್ ರೇಟ್ ಭಾರತ ತಂಡಕ್ಕಿಂತ ಹೆಚ್ಚು ಇರುವ ಕಾರಣ ಪಂದ್ಯ ರದ್ದಾದರೆ ಎರಡು ತಂಡಗಳಿಗೂ ಒಂದು ಒಂದು ಅಂಕವನ್ನು ನೀಡಲಾಗುವುದು ಇದರಿಂದ ವೆಸ್ಟ್ ಇಂಡೀಸ್ ತಂಡದ ನೆಟ್ ರನ್ ರೇಟ್ ಜಾಸ್ತಿ ಇರುವ ಕಾರಣದಿಂದ ವೆಸ್ಟ್ ಇಂಡೀಸ್ ತಂಡವು ಸೆಮೀ ಫೈನಲ್ ಗೆ ನೆರ ಪ್ರವೇಶ ಪಡೆಯುತ್ತದೆ