Telegram Join My Telegram WhatsApp Join My WhatsApp

ಗೃಹಲಕ್ಷ್ಮಿ ಬ್ಯಾಂಕ್ ಗೆ ಸರ್ಕಾರ ಅಸ್ತು ನೊಂದಣಿ ಮಾಡಿಕೊಂಡರೆ ಸಿಗುತ್ತೆ 3ಲಕ್ಷದವರೆಗೂ ಸಾಲ

  • ಗೃಹಲಕ್ಷ್ಮಿ ಬ್ಯಾಂಕ್ ಗೆ ಸರ್ಕಾರ ಅಸ್ತು 

Gruhalakshmi ಗೃಹಲಕ್ಷ್ಮಿ ಫಲಾನುಭವಿಗಳಿಗಾಗಿ  ಸರ್ಕಾರ ಬರೊಬ್ಬರಿ 3 ಲಕ್ಷ ರೂಪಾಯಿವರೆಗೆ. ಸಾಲ

ನೀಡುವ ಗೃಹಲಕ್ಮಿ (ಬ್ಯಾಂಕ್) ಸ್ಥಾಪನೆ ಮಾಡುತ್ತಿದೆ . ಸದ್ಯ ಅಧಿಕೃತವಾಗಿ ಬ್ಯಾಂಕ್ ಗೆ ಸಚಿವ ಸಂಪುಟ ಇದಕ್ಕೆ  ಗ್ರಿನ್ ಸಿಗ್ನಲ್ ನೀಡಿದೆ. ಹಲವು ನಿಯಮಗಳನ್ನು ತರಲಾಗುತ್ತಿದ್ದು, ಗೃಹಲಕ್ಮಿ ಯೋಜನೆಯ ಫಲಾನುಭವಿಗಳಿಗೆ  ಬರುತ್ತಿದ್ದ ಹಣ ಕಡಿಮೆಯಾಗಿ ನೇರವಾಗಿ ಬ್ಯಾಂಕ್ ಗೆ  ಜಮೆ ಆಗಲಿದೆ .3 ಲಕ್ಷ ಸಾಲ ಪಡೆಯುವುದು ಹೇಗೆ ?

ಹೆಚ್ಚಿನ ವಿವರ ಇಲ್ಲಿದೆ

ಬೆಂಗಳೂರು: ಗೃಹಲಕ್ಷ್ಮಿ ಕರ್ನಾಟಕ ಸರ್ಕಾರವೂ ಗ್ರಿನ್ ಸಿಗ್ನಲ್ ನೀಡಿದೆ. ನೊಂದಣಿ  ಮಾಡಿಕೊಳ್ಳುವ ಮಹಿಳೆಯರಿಗೆ ಪ್ರತಿ ತಿಂಗಳು ಬರುವ 2000ರೂ ಪೈಕಿ 1800 ಖಾತೆಗೆ ರೂಪಾಯಿ ಜಮೆಯಾಗಲಿದ್ದು 200 ರೂಪಾಯಿ ಬ್ಯಾಂಕ್ ನಲ್ಲಿ ಠೇವಣಿ ಇರಲಿದೆ . 30 ಸಾವಿರದಿಂದ 3 . ಲಕ್ಷ ಸಾಲ ಸೌಲಭ್ಯ ಸಿಗಲಿದೆ . ಗೃಹಲಕ್ಮಿ ಯೋಜನೆಯ ಫಲಾನುಭವಿಗಳಿಗಾಗಿಯೇ ಪ್ರತ್ಯೇಕ ಸಹಕಾರ ಸಂಘವನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು ಇದಕ್ಕೆ ಸಚಿವ ಸಂಪುಟ ಸಭೆಯು ಕೂಡ ಅಧಿಕೃತ ಒಪ್ಪಿಗೆ ನೀಡಿದೆ . ಗೃಹಲಕ್ಮಿ ಗ್ಯಾರೆಂಟಿ ಯೋಜನೆಯಡಿ ಈವರೆಗೆ 1.24 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ ತಲಾ 2000 ರೂಪಾಯಿಯಂತೆ ಈವರೆಗೆ 26 ಕಂತುಗಳನ್ನು ಸರ್ಕಾರ ಯಶಸ್ವಿಯಾಗಿ ಪಾವತಿಸಿದೆ. ಈಗ ಈ ಮಹಿಳೆಯರನ್ನು ಇನ್ನಷ್ಟು ಸ್ವಾವಲಂಬಿಗಳನ್ನಾಗಿಸಲು ಸಹಕಾರ ಸಂಘವನ್ನು ಹುಟ್ಟುಹಾಕಲಾಗುತ್ತಿದೆ

ಈ ಸಹಕಾರ ಸಂಘ ಸ್ಥಾಪನೆ ಪ್ರಕ್ರಿಯೆ ಆರಂಭವಾದ ಬಳಿಕ ಆರು ತಿಂಗಳವರೆಗೆ ಮಹಿಳೆಯರ ಖಾತೆಗೆ ಅಂದರೆ ಬ್ಯಾಂಕ್ (ಸಂಘಕ್ಕೆ) ಸೇರುವ ಮಹಿಳೆಯರಿಗೆ  2000 ರೂ ಬದಲು ಕೇವಲ 1800 ರೂಪಾಯಿ ಜಮೆಯಾಗಲಿದೆ . 200 ರೂಪಾಯಿ ಸದಸ್ಯರ ಹೆಸರಿಗೆ ಠೇವಣಿ ಇರಲಿದೆ . ಆತಂಕ ಪಡುವ ಅಗತ್ಯವಿಲ್ಲ. ಈ ಕಡಿತಗೊಂಡ ಮೊತ್ತವು ನಿಮ್ಮ ಅಂದರೆ ಸದಸ್ಯರ ಖಾತೆಯಲ್ಲಿಯೇ ಭದ್ರವಾಗಿ ಉಳಿತಾಯದ ರೂಪದಲ್ಲಿ ಇರಲಿದೆ

ಗೃಹಲಕ್ಮಿ ಬ್ಯಾಂಕ್ ಸದಸ್ಯತ್ವ ಪಡೆಯೋದು ಹೇಗೆ ? 

ಗೃಹಲಕ್ಮಿ ಬ್ಯಾಂಕ್ ನಿಂದ  ಸಾಲ ಸೌಲಭ್ಯ ಪಡೆಯಲು ಮಹಿಳೆಯರು ಮೊದಲು ಹಣ ಕಟ್ಟಿ ಶೇರ್ ಹೋಲ್ಡರ್ಸ್ ಆಗಬೇಕಿದೆ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತೀರ್ಮಾನಿಸುವಂತೆ ,ಫಲಾನುಭವಿಗಳು ಸದಸ್ಯತ್ವ ಪಡೆಯಲು ಒಂದು ಬಾರಿಗೆ 1250 ರೂಪಾಯಿಗಳನ್ನು ನೀಡಬೇಕು. ಇದರಲ್ಲಿ 1000 ರೂಪಾಯಿ ಹಣ ಷೇರು ಹಣ ಕೂಡ ಇರಲಿದೆ . ಇದಲ್ಲದೇ ಮೇಲೆ ಹೇಳಿದಂತೆ ಪ್ರತಿ ತಿಂಗಳು 200 ರೂಪಾಯಿಯಂತೆ ಕನಿಷ್ಠ ಆರು ತಿಂಗಳವರೆಗೆ ಉಳಿತಾಯ ರೂಪದಲ್ಲಿ ಜಮೆ ಮಾಡಬೇಕು ಯಾರು ಈ ರೀತಿ ನಿರಂತರವಾಗಿ ಉಳಿತಾಯ ಮಾಡುತ್ತಾರೋ ಅವರು ಮಾತ್ರ ಮುಂದೆ ಬಾರಿ ಮೊತ್ತದ ಸಾಲ ಪಡೆಯಲು ಅರ್ಹರಾಗುತ್ತಾರೆ

ಮಹಿಳೆಯರಿಗೆ 3 ಲಕ್ಷದವರೆಗೆ ಸಿಗಲಿದೆ ಸಾಲ ! 

ಈ ಸಂಘದ ಅತಿ ದೊಡ್ಡ ಲಾಭ ಎಂದರೆ ಅದು ಸಾಲ ಸೌಲಭ್ಯ . ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 30 ಸಾವಿರ ರೂಪಾಯಿಯಿಂದ ಹಿಡಿದು ಬರೋಬ್ಬರಿ 3 ಲಕ್ಷ ರೂಪಾಯಿಯ ವರೆಗೆ  ವಯಕ್ತಿಕ ಸಾಲ ಒದಗಿಸಲಾಗುವುದು . ರಾಷ್ಟಿಕೃತ ಬ್ಯಾಂಕ್ ಗಳಿಗೆ ಸಮನಾಗಿ ವಾರ್ಷಿಕ ಶೇ .7% ರಿಂದ ಶೇ 9% ರಷ್ಟು ಅಥವಾ ಅದಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಉದ್ದೇಶಿಸಲಾಗಿದೆ .ಸಾಲ ಪಡೆಯುವ ಪ್ರಕ್ರಿಯೆ ಕೂಡ ತುಂಬಾ ಸುಲಭ

ಸಾಲಕ್ಕೆ ಜಮೀನು ಅಗತ್ಯವಿಲ್ಲ .

ಇಲ್ಲಿ ಸಾಲ ಪಡೆಯುವುದಕ್ಕೆ ಯಾವುದೇ ರೀತಿಯ ಜಮೀನು  ಅಗತ್ಯವಿರುವುದಿಲ್ಲ . ಸಂಪೂರ್ಣವಾಗಿ ನಗದು ರಹಿತ ಡಿಜಿಟಲ್ ಪಾವತಿಯ ಮೂಲಕವೇ ವಹಿವಾಟಿಗೆ ಆದ್ಯತೆ ನೀಡಲಾಗಿದೆ . ಸಂಘದ ಮೂಲಕ ಪಡೆದ ಸಾಲದ ಹಣವನ್ನು ಮಹಿಳೆಯರು ಸಣ್ಣಪುಟ್ಟ ವ್ಯಾಪಾರ , ಗುಡಿ ಕೈಗಾರಿಕೆ , ಕೃಷಿ , ಹೈನುಗಾರಿಕೆ , ಮಕ್ಕಳ ಶಿಕ್ಷಣ ಹಾಗೂ ವಾಹನ ಖರೀದಿಗೆ ಬಳಸಿಕೊಳ್ಳಬಹುದು .ಇದರಿಂದ ಮಹಿಳೆಯರು ಕೇವಲ ಮನೆಯಲ್ಲಿ ಕೂರದೆ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ಉದ್ಯಮಿಗಳಾಗಲು ಸಹಾಯವಾಗುತ್ತದೆ ಎಂಬುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ಪಷ್ಟ ಉದ್ದೇಶವಾಗಿದೆ

ಸರ್ಕಾರ ಬದಲಾದರೂ ಬ್ಯಾಂಕ್  ಮುಚ್ಚಲ್ಲ! 

 

ಕಳೆದ ವರ್ಷ ನವೆಂಬರ್ 28  ರಂದು ಗೃಹಲಕ್ಮಿ ಸಹಕಾರಿ ಬ್ಯಾಂಕ್ ಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು . ಆದರೆ ಪ್ರಕ್ರಿಯೆಗಳು ಮಾತ್ರ ಶುರುವಾಗಿದ್ದು . ಈಗ ಸಚಿವ ಸಂಪುಟ ಈ ಗೃಹಲಕ್ಮಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತಕ್ಕೆ ಅಧಿಕೃತ ಒಪ್ಪಿಗೆ ನೀಡಿದೆ . ಈ ಹಿಂದೆ ಈ ಬಗ್ಗೆ ಮಾತನಾಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರು , ಈ ಹಿಂದೆ ಗಂಡನ ಉದ್ಯಮದಲ್ಲಿ ಹೆಂಡತಿ ಕೇವಲ ಕೈಜೋಡಿಸುತ್ತಿದ್ದಳು. ಆದರೆ, ಇತ್ತೀಚಿಗೆ ಮಹಿಳೆಯರೇ ಸ್ವತಃ ಉದ್ಯಮಿಗಳಾಗುತ್ತಿದ್ದಾರೆ . ಇಂತಹ ಮಹಿಳೆಯರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ನನ್ನ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿರುವ ಈ ಗೃಹಲಕ್ಮಿ ಬ್ಯಾಂಕ್ ಅನ್ನು ಮುಚ್ಚುವ ಪ್ರಯತ್ನ ಮಾಡುವುದಿಲ್ಲ . ಸರ್ಕಾರ ಬದಲಾವಣೆಯಾದರೂ ಬ್ಯಾಂಕ್ ಮುಚ್ಚಲ್ಲ , ಇದು ನಿರಂತರ ಪ್ರಕ್ರಿಯೆ ಎಂದು ಲಕ್ಮೀ ಹೆಬ್ಬಾಳ್ಕರ್ ರವರು ಹೇಳಿದ್ದಾರೆ

Leave a Comment