ಇರಾನ್ ಮತ್ತು ಇಸ್ರೇಲ್ ಯುದ್ಧದ ನಡುವಿನ ಕಚ್ಚಾ ತೈಲದ. ಅನಿಲದ ಕೊರತೆ ಉಂಟಾಗಿದೆ ಈ ಮಧ್ಯೆ LPG GAS ಭಾರತ್ ಗ್ಯಾಸ್ ಕಂಪನಿಯಿಂದ ಗ್ರಾಹಕರಿಗೆ ಒಂದು ಮಹತ್ವದ ಮಾಹಿತಿಯನ್ನು ರವಾನಿಸಿದೆ ಮನೆ ಮಾಲೀಕರು ಗೃಹಿಣಿಯರು ಇದನ್ನು ತಿಳಿದುಕೊಳ್ಳಬೇಕು
ಇರಾನ್ ಮತ್ತು ಇಸ್ರೇಲ್ ಯುದ್ಧದ ತೀವ್ರತೆಯಿಂದ ಕಚ್ಚಾ ತೈಲ,
ಅನಿಲದ ಕೊರತೆ ಉಂಟಾಗಿದೆ. ಹರ್ಮೋಜ್ ಜಲಸಂಧಿ ಮುಚ್ಚಿರುವುದಿಂದ
ಭಾರತಕ್ಕೆ ಕಚ್ಚಾ ತೈಲ ಆಮದು ಕಡಿಮೆಯಾಗಿದೆ ಎನ್ನಲಾಗುತ್ತಿದೆ ಇದರಿಂದಾಗಿ ಕಳೆದ ಕೆಲವು ದಿನಗಳಿಂದ ದೇಶದ ಹಲವು ಭಾಗಗಳಲ್ಲಿ ಕಮರ್ಷಿಯಲ್ ವಾಣಿಜ್ಯ LPG ಸಿಲಿಂಡರ್ ಗಳ ಕೊರತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ
ಗ್ಯಾಸ್ ಸಿಗಲ್ಲ . ಗ್ಯಾಸ್ ಕೊರತೆ ಉಂಟಾಗಿದೆ ಅಂತೆಲ್ಲ ಹಲವು ಊಹಾಪೋಹಗಳು,ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು ಮತ್ತು ಮಾತುಗಳಿಂದ ಗೃಹ ಬಳಕೆಯ ಗ್ರಾಹಕರು ಆತಂಕಕ್ಕೊಳಗಾಗಿದ್ದಾರೆ. ಯುದ್ಧದ ತೀವ್ರತೆಯಿಂದ ಗ್ಯಾಸ್ ಸಿಗದೇ ಹೋದರೆ ಮುಂದಿನ ಕಥೆ ಏನು ಎಂದು ಚಿಂತೆ ಮಾಡುತ್ತಿದ್ದಾರೆ
ಈ ಮಧ್ಯ ಭಾರತ್ ಗ್ಯಾಸ್ ಕಂಪನಿಯಿಂದ ತಮ್ಮಗ್ರಾಹಕರಿಗೆ ಸ್ಪಷ್ಟ ಸಂದೇಶ ನೀಡಿದೆ ಕಂಪನಿ ತಮ್ಮ ಗ್ರಾಹಕರಿಗೆ sms. ವಾಟ್ಸಪ್ ಮೆಸೇಜ್ಗಳ ಮೂಲಕ ಮತ್ತು ಇತರ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದೆ .ಕಂಪನಿ ಗ್ರಾಹಕರಿಗೆ ನೀಡುವ ಪ್ರಮುಖ ಅಂಶಗಳು ಅಂದರೆ ಗೃಹ ಬಳಕೆಗೆ ಯಾವುದೇ ರೀತಿಯ ಸಿಲೆಂಡರ್ ಕೊರತೆ ಉಂಟಾಗಿಲ್ಲ ಎಂದಿದ್ದಾರೆ.ಗೃಹ ಬಳಕೆಯ ಸಿಲಿಂಡರ್ಗಳು ಸ್ಟಾಕ್ ಸಾಕಷ್ಟಿದೆ ಭಾರತ್ ಗ್ಯಾಸ್ ಕಂಪನಿ ತಮ್ಮ ಗ್ಯಾಸ್ ಸ್ಟೋರೇಜ್ ಅಂದರೆ ಗೋದಾಮುಗಳಲ್ಲಿ ಗೃಹ ಬಳಕೆಯ ಸಿಲೆಂಡರ್ಗಳು ಸ್ಟಾಕ್ ಇರುವುದಾಗಿ ದೃಢಪಡಿಸಿದೆ,ಗ್ರಾಹಕರು ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ
ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಗ್ಯಾಸ್ ಕೊರತೆ
ವಾಣಿಜ್ಯ ಬಳಕೆಗೆ (ಹೋಟೆಲ್ ಗಳು ರೆಸ್ಟೋರೆಂಟ್ ಗಳು, ಧಾಬಾಗಳು ಇತರೆ ವ್ಯಾಪಾರ ಸ್ಥಾಪನೆಗಳು) ಬಳಸುವ ಸಿಲೆಂಡರ್ ಗಳಲ್ಲಿ ಕೆಲವು ಭಾಗಗಳಲ್ಲಿ ಕೊರತೆ ಇರುವುದು ನಿಜ .ಆದರೆ ಇದು ಗೃಹ ಬಳಕೆಯ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಂಪನಿ ಖಚಿತಪಡಿಸಿದೆ
ಗ್ರಾಹಕರಿಗೆ ಮನವಿ ಮಾಡಿಕೊಳ್ಳುವಾಗ ಕಂಪನಿಗಳು ಒಂದು ಮುಖ್ಯ ಸಲಹೆ ನೀಡಿವೆ . ಇಂಧನ ಮತ್ತು ಗ್ಯಾಸ್ ಅನ್ನು ಅನವಶ್ಯವಾಗಿ ಬಳಸಬೇಡಿ. ಇದರಿಂದ ಸ್ಟಾಕ್ ಇನ್ನಷ್ಟು ದಿನಗಳ ಕಾಲ ಉಳಿಯುತ್ತವೆ .ಮತ್ತು ಎಲ್ಲರಿಗೂ ಸಮಾನವಾಗಿ ಲಭ್ಯವಾಗುತ್ತದೆ . ಊಹಾಪೋಹಗಳಿಗೆ ಕಿವಿಕೊಡಬೇಡಿ .ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ “ಸಿಲಿಂಡರ್ ಕೊರತೆ ಆಗುತ್ತಿದೆ ” “ಇನ್ನು ಸಿಗುವುದಿಲ್ಲ ” ಎಂಬಂತಹ ಸುದ್ದಿಗಳಿಗೆ ಕಿವಿಕೊಡಬೇಡಿ ಎಂದು ಕಂಪನಿಗಳು ಸ್ಪಷ್ಟವಾಗಿ ಹೇಳಿವೆ .ಕಂಪನಿಗಳು ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ ಎಂದು ಸೂಚಿಸಲಾಗಿದೆ.
ಈ ಸಂದೇಶವನ್ನು ಗ್ರಾಹಕರಿಗೆ ತಲುಪಿಸಲು ಭಾರತ್ ಗ್ಯಾಸ್ ಮತ್ತು ಎಚ್ ಪಿ ಗ್ಯಾಸ್ ಎರಡೂ ಕಂಪನಿಗಳು ತಮ್ಮ ಗ್ರಾಹಕರಿಗೆ ಎಸ್ ಎಂ ಎಸ್ , ವಾಟ್ಸಪ್ ಮೆಸೇಜ್ ಗಳನ್ನು ಕಳುಹಿಸಿವೆ . ಹಲವು ಗ್ರಾಹಕರು ತಮ್ಮ ಫೋನುಗಳಲ್ಲಿ ಈ ಸಂದೇಶವನ್ನು ಪಡೆದಿದ್ದಾರೆ. ಕಂಪನಿಗಳು ತಮ್ಮ ಅಧಿಕೃತ ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಈ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ
ಗ್ರಾಹಕರು ಏನು ಮಾಡಬೇಕು ? ಭಯ ಪಡುವ ಅಗತ್ಯವಿಲ್ಲ ಗೃಹ ಬಳಕೆಗೆ ಸಿಲಿಂಡರ್ ಸಾಕಷ್ಟು ಲಭ್ಯವಿದೆ. ಅನಗತ್ಯ ಭಯದಿಂದ ಹೆಚ್ಚು ಸಿಲಿಂಡರ್ ಬುಕ್ ಮಾಡಬೇಡಿ, ಇದರಿಂದ ಇತರೆ ಗ್ರಾಹಕರಿಗೆ ಕೊರತೆ ಉಂಟಾಗಬಹುದು. ಕಂಪನಿಯ ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯಿರಿ. ಇಂಧನವನ್ನು ಉಳಿತಾಯವಾಗಿ ಬಳಸಿ, ಅನವಶ್ಯ ಬಳಕೆ ತಪ್ಪಿಸಿ ಎಂದಿದ್ದಾರೆ.
ಈ ಸಂದೇಶವು ಗೃಹ ಬಳಕೆಯ ಆತಂಕವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಕಮರ್ಷಿಯಲ್ ಸಿಲಿಂಡರ್ ಕೊರತೆಯು ಗೃಹ ಬಳಕೆಯ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕಂಪನಿಗಳು ಪದೇ ಪದೇ ದೃಢಪಡಿಸಿವೆ. ಗ್ರಾಹಕರು ಶಾಂತಚಿತ್ತರಾಗಿ ತಮ್ಮ ಸಿಲಿಂಡರ್ ಬುಕ್ ಮಾಡಬಹುದು ಎಂದು ಕಂಪನಿಗಳು ಮನವಿ ಮಾಡಿಕೊಂಡಿವೆ