Telegram Join My Telegram WhatsApp Join My WhatsApp

Post office: 2 ಲಕ್ಷ ರೂಪಾಯಿ ಹೂಡಿಕೆ, ಬರೀ ಬಡ್ಡಿಯಿಂದಲೇ ₹90,000 ಸಿಗುತ್ತೆ ! ಅಂಚೆ ಕಚೇರಿ ಬಂಪರ್ ಯೋಜನೆ !

Post office : ಬ್ಯಾಂಕ್ ಎಫ್ ಡಿ (fixed deposit) ತರಹವೇ ಇರುವ ಒಂದು ಬೊಂಬಾಟ್ ಸ್ಕೀಮ್ ಅಂದ್ರೆ ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್. ಇದರಲ್ಲಿ ನೀವು ಕೇವಲ 2 ಲಕ್ಷ ಹೂಡಿಕೆ ಮಾಡಿದ್ರೆ,ಬರೊಬ್ಬರಿ 90,000 ರೂ. ಗಳವರೆಗೆ ಕೇವಲ ಬಡ್ಡಿ (intrest) ರೂಪದಲ್ಲಿ  ಲಾಭ ಪಡೆಯಬಹುದು ! ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

 

ತಿಳಿಯ ಬೇಕಾದ ಮಾಹಿತಿ 

ನಾವೆಲ್ಲರೂ ಕಷ್ಟಪಟ್ಟು ದುಡಿದ ಹಣವನ್ನು ಸೇಫ್ ಆಗಿ ಹೂಡಿಕೆ ( investment) ಮಾಡಬೇಕು ಮತ್ತು ಅದಕ್ಕೆ ಗ್ಯಾರೆಂಟಿ ರಿಟರ್ನ್ಸ್ (guaranteed returns) ಸಿಗಬೇಕು ಅಂತ ಬಯಸ್ತೀವಿ. ಈ ವಿಚಾರದಲ್ಲಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಜನರಿಗೆ ಯಾವತ್ತಿಗೂ ಫೇವರೆಟ್

ಈ ಟೈಮ್ ಡೆಪಾಸಿಟ್ ಯೋಜನೆಯಡಿಯಲ್ಲಿ ಹೂಡಿಕೆದಾರಿಗೆ ಪ್ರಸ್ತುತ ಗರಿಷ್ಟ 7.5 ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ. ಇದು ಕೇವಲ ಸುರಕ್ಷಿತ ಹೂಡಿಕೆ ಮಾತ್ರವಲ್ಲದೆ, ಈ ಸರ್ಕಾರಿ ಯೋಜನೆಯಲ್ಲಿ ನೀವು ಐದು ವರ್ಷಗಳವರೆಗೆ ನಿಮ್ಮ ಹಣವನ್ನು ಲಾಕ್ ಇನ್ ಮಾಡಿ, ಬ್ಯಾಂಕ್ಗಳಿಗಿಂತಲೂ ಉತ್ತಮವಾದ ಲಾಭ ಗಳಿಸಲು ಹೇಳಿ ಮಾಡಿಸಿದಂತಿದೆ

 

ಈ ಸ್ಕಿಂನಲ್ಲಿ ಹೂಡಿಕೆದಾರರು ಒಂದೇ ದೀರ್ಘಾವಧಿ ಗೆ ಅಂಟಿಕೊಳ್ಳುವಂತಿಲ್ಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿಭಿನ್ನ ಅವಧಿಗಳಲ್ಲಿ ಹೂಡಿಕೆ ಮಾಡಬಹುದಾಗಿದೆ ಆ ರೀತಿಯಲ್ಲಿ 1 ವರ್ಷ 2 ವರ್ಷ 3 ವರ್ಷ ಮತ್ತು ಗರಿಷ್ಟ 5 ವರ್ಷ ಗಳವರೆಗೆ ಹಣವನ್ನು ಡೆಪಾಸಿಟ್ ಮಾಡುವ ಫ್ಲೆಸಿಬಲ್ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತದೆ

ವಿಭಿನ್ನ ಅವಧಿಗಳಿಗೆ ಸಿಗುವ ಬಡ್ಡಿದರಗಳ ಲೆಕ್ಕಾಚಾರವನ್ನು ಒಮ್ಮೆ ನೋಡಿದರೆ ,ನೀವು ಕೇವಲ ಒಂದು ವರ್ಷಕ್ಕೆ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 6.9 ರಷ್ಟು ಬಡ್ಡಿ ಸಿಗುತ್ತದೆ . ಅದೇ ರೀತಿ ಎರಡು ಅಥವಾ ಮೂರು ವರ್ಷಗಳ ವರೆಗೆ ಹೂಡಿಕೆ ಮಾಡಿದರೆ ಶೇಕಡಾ 7 ರಷ್ಟು ಬಡ್ಡಿ ಪಕ್ಕ . ಇನ್ನು ನೀವು ಐದು ವರ್ಷಗಳ ಗರಿಷ್ಟ ಅವಧಿಗೆ ಹೂಡಿಕೆ ಮಾಡಿದರೆ ಗರಿಷ್ಟ ಶೇಕಡಾ 7.5 ರಷ್ಟು ರಿಟರ್ನ್ಸ್  ಸಿಗುತ್ತದೆ

ಈ ಪೋಸ್ಟ್ ಆಫೀಸ್ ಯೋಜನೆ ಯಾಕೆ ಇಷ್ಟು ಫೇಮಸ್ ಅಂದ್ರೆ ಅಸಲಿಗಿಂತ ಬಡ್ಡಿಯಿಂದಲೇ ಜಾಸ್ತಿ ಲಾಭ ಗಳಿಸಬಹುದು ಉದಾಹರಣೆ ನೀವು 5 ವರ್ಷಗಳ ಅವಧಿ ಗೆ 2 ಲಕ್ಷ  ರೂಪಾಯಿಗಳನ್ನು ಹೂಡಿಕೆ ಮಾಡ್ತೀರಾ ಅಂದುಕೊಳ್ಳಿ ಶೇಕಡಾ 7.5 ರಷ್ಟು ಬಡ್ಡಿದರ ಲೆಕ್ಕದಲ್ಲಿ  ಐದು ವರ್ಷದ ನಂತರ ನಿಮ್ಮ ಕೈಗೆ ಒಟ್ಟು 2,89,990 ರೂಪಾಯಿಗಳು ಸಿಗುತ್ತವೆ  ಅಂದರೆ ಕೇವಲ ಬಡ್ಡಿಯ ಮೊತ್ತವೇ ಬರೊಬ್ಬರಿ 89,990 ರೂಪಾಯಿ ಸಿಗುತ್ತವೆ

ನಿಮ್ಮ ಹೂಡಿಕೆ ಮೊತ್ತವನ್ನು ಹೆಚ್ಚಿಸಿದರೆ ಬಡ್ಡಿಯ ಆದಾಯ ಕೂಡ ಡಬಲ್ ಆಗುತ್ತದೆ ಉದಾಹರಣೆಗೆ ನೀವು ಇದೆ ಸ್ಕಿಂನಲ್ಲಿ ಐದು ವರ್ಷಗಳ ಕಾಲ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮ್ಮ ಕೈಗೆ ಬರೋಬ್ಬರಿ 7,24,974 ರೂಪಾಯಿಗಳು ಸಿಗುತ್ತವೆ. ಅಂದರೆ 2 ಲಕ್ಷ ಕ್ಕೂ ಅಧಿಕ ಮೊತ್ತ ಬರಿ ಬಡ್ಡಿಯಿಂದಲೇ ನಿಮ್ಮ ಅಕೌಂಟ್ ಸೇರುತ್ತದೆ

 

ಈ 5 ವರ್ಷದ ಟೈಮ್ ಡೆಪಾಸಿಟ್ ಯೋಜನೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 c. ಅಡಿಯಲ್ಲಿ ಭರ್ಜರಿ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಕನಿಷ್ಠ 1,000 ರುಪಾಯಿ ಗಳಿಂದ ಸಿಂಗಲ್ ಅಥವಾ ಜಾಯಿಂಟ್ ಅಕೌಂಟ್ ತೆರೆಯಬಹುದು. ಗರಿಷ್ಟ ಹೂಡಿಕೆಗೆ ಯಾವುದೇ ಮಿತಿಯಿಲ್ಲ ,ಹೀಗಾಗಿ ಎಸ್ಟು ಬೇಕಾದರೂ ಇನ್ವೆಸ್ಟ್ ಮಾಡಿ ಸೇಫ್ ಆಗಿ ಉಳಿತಾಯ ಮಾಡಬಹುದು

Leave a Comment