Telegram Join My Telegram WhatsApp Join My WhatsApp

Budget 2026: ಶಿಕ್ಷಣ ಕ್ಷೇತ್ರಕ್ಕೆ ₹47,724 ಕೋಟಿ ಮೀಸಲು : KPS ವಿಸ್ತರಣೆ

Budget 2026: ಶಿಕ್ಷಣ ಕ್ಷೇತ್ರಕ್ಕೆ ₹47,724 ಕೋಟಿ ಮೀಸಲು: KPS ವಿಸ್ತರಣೆ, AI ಟ್ಯೂರರ್ ಸ್ಥಾಪನೆ, 15 ಸಾವಿರ ಶಿಕ್ಷಕರ ನೇಮಕ ಘೋಷಣೆ

ಕಾಂಗ್ರೆಸ್ ಸರ್ಕಾರ ₹47724 ಕೋಟಿ ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ, 800 KPS ಶಾಲೆಗಳ ಉನ್ನತೀಕರಣ, ‘ ವಿದ್ಯಾವಿಕಾಸ ‘ ಯೋಜನೆ, ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಕಲಿಕೆ, 15,000 ಬೋಧಕ ಹುದ್ದೆಗಳ ಭರ್ತಿ ಘೋಷಿಸಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ

ರಾಜ್ಯದ ಒಟ್ಟು ಬಜೆಟ್ ನಲ್ಲಿ ?

ಶಿಕ್ಷೆ ಕ್ಷೇತ್ರಕ್ಕೆ (education) ಮಹತ್ವದ ಆದ್ಯತೆ ನೀಡಲಾಗಿದ್ದು ₹47724 ಕೋಟಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ  ಮೀಸಲಿರಿಸಿದೆ. ಪ್ರಾಥಮಿಕ ಪ್ರೌಡ ಮತ್ತು ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಹಲವು ಹೊಸ ಯೋಜನೆಗಳು ಮತ್ತು ಸುಧಾರಣಾ ಕ್ರಮಗಳನ್ನು ಸರ್ಕಾರ  ಘೋಷಿಸಿದೆ. ಮೂಲಸೌಕರ್ಯ ಅಭಿವೃದ್ಧಿ , ಶಿಕ್ಷಕ ನೇಮಕಾತಿ, ಡಿಜಿಟಲ್ ಕಲಿಕೆ, ಹಾಗೂ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ  ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರಮುಖ ಹೆಜ್ಜೆ !

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರಮುಖ ಹೆಜ್ಜೆಯಾಗಿ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ (KPS) ಗಳಾಗಿ ಉನ್ನತೀಕರಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ ₹3900 ಕೋಟಿ ಅನುದಾನ ಮೀಸಲಿಡಲಾಗಿದೆ. ಜೊತೆಗೆ ಶಿಕ್ಷಕರ  ವರ್ಗಾವಣೆ ಕೌನ್ಸೆಲಿಂಗ್  ಪ್ರಕ್ರಿಯೆಯಲ್ಲಿ  KPS ಶಾಲೆಗಳ ಉದ್ಧೆಗಳಿಗೆ ಮೊದಲ ಆದ್ಯತೆ  ನೀಡಲಾಗುವುದು ಎಂದು ಘೋಷಿಸಲಾಗಿದೆ. ಖಾಸಗಿ ಶಾಲೆಗಳ ಮಾನ್ಯತೆ  ಪಡೆಯುವ ಮತ್ತು ನವೀಕರಿಸುವ  ಪ್ರಕ್ರಿಯೆಯನ್ನು  ಸರಳೀಕರಿಸುವ ನಿಟ್ಟಿನಲ್ಲಿ ಆನ್ ಲೈನ್ ಮೂಲಕ ಅರ್ಜಿ ಮತ್ತು ಅಗತ್ಯ  ದಾಖಲೆಗಳನ್ನು ಸಲ್ಲಿಸುವ ವ್ಯವಸ್ಥೆ  ಜಾರಿಗೊಳಿಸಲಾಗುತ್ತಿದೆ. ಇದರ ಮೂಲಕ ಆಡಳಿತಾತ್ಮಕ  ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ

ಇದನ್ನೂ ಓದಿ !https://vishwavanione.com/ಬಜೆಟ್-ಘೋಷಣೆ-ವಿದ್ಯಾರ್ಥಿನಿ/

ಸಿದ್ದರಾಮಯ್ಯ ಬಜೆಟ್ ಲೆಕ್ಕಾಚಾರ, ಶಿಕ್ಷಣಕ್ಕೆ ಸಿಂಹಪಾಲು, ಯಾವ ಇಲಾಖೆಗೆ ಎಷ್ಟು ಸಾವಿರ  ಕೋಟಿ ಬಿಡುಗಡೆ ಗೊತ್ತಾ ?

 

ವಿದ್ಯಾವಿಕಾಸ’ ಯೋಜನೆ ಗೆ ಪುಷ್ಟಿ!

2026-27 ನೇ ಶೈಕ್ಷಣಿಕ ಸಾಲಿನಿಂದ ‘ ವಿದ್ಯಾವಿಕಾಸ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಸಾಮಗ್ರಿ ನೀಡಲಾಗುತ್ತಿದೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕಗಳು, 1 ರಿಂದ 10 ನೇ ತರಗತಿಯ ವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳು  ಹಾಗೂ ಪದವಿ ಪೂರ್ವ  ವಿದ್ಯಾರ್ಥಿಗಳಿಗೆ  ಪಠ್ಯ ಪುಸ್ತಕಗಳು  ಉಚಿತವಾಗಿ ವಿತರಿಸಲಾಗುತ್ತಿದೆ

ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು !

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಕೊಠಡಿಗಳ ನಿರ್ಮಾಣ  ಮತ್ತು ಹಳೆಯ ಕೊಠಡಿಗಳ ದುರಸ್ತಿಗೆ ₹565 ಕೋಟಿ ಅನುದಾನ ಮೀಸಲಿರಿಸಲಾಗಿದೆ.ಜೊತೆಗೆ ಶೌಚಾಲಯ ನಿರ್ಮಾಣಕ್ಕೆ ₹ 75 ಕೋಟಿ ಮತ್ತು ಪೀಠೋಪಕರಣಗಳ ಖರೀದಿಗೆ ₹ 25 ಕೋಟಿ ನೀಡಲಾಗುತ್ತದೆ . ಶಿಕ್ಷಣ ಸಂಸ್ಥೆಗಳ ನಿರ್ವಹಣೆ ಗೆ ಪ್ರತ್ಯೇಕವಾಗಿ ₹125 ಕೋಟಿ  ಅನುದಾನ ಮೀಸಲಿರಿಸಲಾಗಿದೆ. ಭಾಷೆ ಸಾಮರ್ಥ್ಯ ವೃದ್ಧಿಗೂ ಸರ್ಕಾರ ಮಹತ್ವ ನೀಡಿದ್ದು , ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಶಿಕ್ಷಕರಿಗೆ ಇಂಗ್ಲಿಷ್  ಭಾಷಾ ತರಬೇತಿ ಕಾರ್ಯಕ್ರಮವನ್ನು ₹ 24 ಕೋಟಿ ವೆಚ್ಚದಲ್ಲಿ ನೆಡಸಲಾಗುತ್ತದೆ

ಡಿಜಿಟಲ್ ಕ್ಷೇತ್ರಕ್ಕೆ ಉತ್ತೇಜನ !

ಡಿಜಿಟಲ್ ಕಲಿಕೆಯನ್ನು ಉತ್ತೇಜಿಸಲು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಧಾರವಾಡ ) ಇವರ ಸಹಯೋಗದಲ್ಲಿ  8 ರಿಂದ 12  ನೇ ತರಗತಿಯ ವರೆಗೆ ಓದುತ್ತಿರುವ ಸುಮಾರು 12.28 ಲಕ್ಷ ವಿದ್ಯಾರ್ಥಿಗಳಿಗೆ  AI ಆಧಾರಿತ ವಯಕ್ತಿಕ ಡಿಜಿಟಲ್ ಟ್ಯೂಟರ್ ವ್ಯವಸ್ಥೆ ಒದಗಿಸಲಾಗುತ್ತದೆ. ಇದರ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಗುರಿ ಹೊಂದಲಾಗಿದೆ

ಬೋಧಕ ಹುದ್ದೆಗಳ ಭರ್ತಿ ಖಾತ್ರಿ !

ಇನ್ನೊಂದೆಡೆ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಲು 2026-27 ನೇ ಸಾಲಿನಲ್ಲಿ ಶಾಲೆ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಸುಮಾರು 15,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಜೊತೆಗೆ ವಿದ್ಯಾರ್ಥಿಗಳ ಮಾನಸಿಕ  ಆರೋಗ್ಯವನ್ನು ಸುಧಾರಿಸಲು  204 BRC  ಕೇಂದ್ರ ಗಳಲ್ಲಿ  ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸಲಾಗುತ್ತದೆ

ಮಕ್ಕಳ ಆರೋಗ್ಯಕ್ಕೆ  ವಿಶೇಷ ಕಾಳಜಿ !

ವಿಜಯಪುರ. ಸೈನಿಕ ಶಾಲೆಯ ಹಾಸ್ಟೆಲ್ ಕಟ್ಟಡ ಗಳ ಪುನರ್ ನಿರ್ಮಾಣಕ್ಕೆ ಪ್ರಾರಂಭಿಕವಾಗಿ ₹ 10 ಕೋಟಿ ಅನುದಾನ ನೀಡಲಾಗುತ್ತಿದೆ. ಮಕ್ಕಳ ಮೇಲೆ ಹೆಚ್ಚುತ್ತಿರುವ ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನು ತಡೆಯಲು 16 ವರ್ಷದೊಳಗಿನ ಮಕ್ಕಳಿಕೆ  ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ವೇಳೆ ಶಾಲೆ – ಕಾಲೇಜು ಗಳ ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಕಠಿಣ ನಿಯಮವನ್ನು, ಜಾಗೃತಿ ಕಾರ್ಯಕ್ರಮಗಳು ಮತ್ತು ಸಹಾಯ ಕೇಂದ್ರಗಳನ್ನು ಸ್ಥಾಪಿಸಲಗುತ್ತದೆ.ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ  ಗುಣಮಟ್ಟ ಹೆಚ್ಚಿಸುವ ಮತ್ತು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಗೆ ಉತ್ತೇಜನ ನೀಡುವ ಹಲವು ಮಹತ್ವದ ಯೋಜನೆಗಳನ್ನು ಸರ್ಕಾರ ಬಜೆಟ್ ನಲ್ಲಿ ಪ್ರಕಟಿಸಿದ

Leave a Comment