ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಹಿತದೃಷ್ಟಿಯಿಂದ ಪಡಿತರ ರೇಷನ್ ಅಂಗಡಿಗಳಲ್ಲಿ ಸೀಮೆಎಣ್ಣೆ ಭಾಗ್ಯವನ್ನು ಪುನರಾರಂಭಿಸಬೇಕೆಂಬ ಕೂಗು ಕೇಳಿಬಂದಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗಿದ್ದರೂ,ಬೆಲೆ ಏರಿಕೆಯ ಬಿಸಿಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಸೀಮೆಎಣ್ಣೆ ಅನಿವಾರ್ಯವಾಗಿದೆ ಎಂಬ ವಾದವನ್ನು i ಮನವಿಯಲ್ಲಿ ಮುಂದಿಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದ ಪಡಿತರ ಕೇಂದ್ರಗಳಲ್ಲಿ (Ration Depots) ಸ್ಥಗಿತಗೊಂಡಿರುವ ಸೀಮೆಎಣ್ಣೆ ವಿತರಣೆಯನ್ನು ಮತ್ತೆ ಆರಂಭಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ಕುರಿತು ನೆರವಾಗಿ ಪ್ರಧಾನ ಮಂತ್ರಿಗಳ ಕಚೇರಿಗೆ (PMO) ಬೃಹತ್. ಬೇಡಿಕೆಯೊಂದು ಸಲ್ಲಿಕೆಯಾಗಿದ್ದು, ಬಡ ಮತ್ತು ಮಧ್ಯಮ ವರ್ಗದ (middle class) ಕುಟುಂಬಗಳ ಹಿತದೃಷ್ಟಿಯಿಂದ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಸೀಮೆಎಣ್ಣೆ ಭಾಗ್ಯವನ್ನು ಪುನರಾರಂಭಿಸಬೇಕೆಂಬ ಕೂಗು ಕೇಳಿಬಂದಿದೆ.ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಗಿದ್ದರೂ ಬೆಲೆ ಏರಿಕೆಯ ಬಿಸಿಯಿಂದಾಗಿ ಗ್ರಾಮೀಣ ಭಾಗದ ಜನರಿಗೆ ಸೀಮೆಎಣ್ಣೆ ಅನಿವಾರ್ಯವಾಗಿದೆ ಎಂಬ ವಾದವನ್ನು ಈ ಮನವಿಯಲ್ಲಿ ಮುಂದಿಡಲಾಗಿದೆ
ಮನವಿಯಲ್ಲೇನಿದೆ ?
ಈ ಸಂಬಂಧ ಆಲ್ ಇಂಡಿಯಾ ಫೇರ್ ಪ್ರೈಸ್ ಶೇಪ್ ಡೀಲರ್ಸ್ ಫಢರೇಶನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪಡಿತರ ಅಂಗಡಿಗಳ ಮೂಲಕ ಸೀಮೆಎಣ್ಣೆ ವಿತರಣೆ ಪುನರಾರಂಭಿಸುವಂತೆ ಮನವಿ ಮಾಡಿದೆ. ಎಲ್ ಪಿ ಜಿ ಲಭ್ಯತೆಯಲ್ಲಿ ಯಾವುದೇ ಅಡಚಣೆ ಉಂಟಾದರೆ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಸೀಮೆಎಣ್ಣೆ ಮಹತ್ವದ ಪರ್ಯಾಯ ಇಂಧನವಾಗಬಹುದು ಎಂದು ಫೆಡರೇಶನ್ ಹೇಳಿದೆ
ನಿಂತುಹೋದ ಸೀಮೆಎಣ್ಣೆ ವಿತರಣೆ !
ಭಾರತದಲ್ಲಿ ಪಡಿತರ ಅಂಗಡಿಗಳ ಮೂಲಕ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ವಿತರಣೆ ಮಾಡುತ್ತಿದ್ದ ಕಾಲವು ಇತ್ತು ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ವ್ಯವಸ್ಥೆಯನ್ನೂ ಕ್ರಮೇಣ ನಿಲ್ಲಿಸಲಾಯಿತು ವಿಶೇಷವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಎಲ್ ಪಿ ಜಿ ಸಂಪರ್ಕ ನೀಡಲಾಗಿದ್ದು ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸೀಮೆಎಣ್ಣೆ ವಿತರಣೆಯನ್ನು ಕಡಿತಗೊಳಿಸಲಾಯಿತು 2020-21ಪಡಿತರ ಅಂಗಡಿಗಳ ಮೂಲಕ ಸೀಮೆಎಣ್ಣೆ ವಿತರಣೆ ಬಹುತೇಕ ಸಂಪೂರ್ಣವಾಗಿ ನಿಂತುಹೋಯಿತು ಆದರೆ ಈಗಿನ ಪರಿಸ್ಥಿತಿಯಲ್ಲಿ ಮತ್ತೆ ಅದನ್ನ ಪುನರಾರಂಭಿಸುವುದು ಅಗತ್ಯವಿದೆ ಎಂದು ವಿತರಕರ ಸಂಘ ಅಭಿಪ್ರಾಯಪಟ್ಟಿದೆ . ವಿಶೇಷವಾಗಿ ಗ್ರಾಮೀಣ ಹಾಗೂ ಅರೆನಗರಗಳ ಪ್ರದೇಶಗಳಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಇದು ಸುರಕ್ಷತಾ ಜಾಲದಂತೆ ಕೆಲಸ ಮಾಡಬಹುದು ಎಂದು ಅವರು ಹೇಳಿದ್ದಾರೆ
ಬಿಸಿನೆಸ್ ಟುಡೇ ವರದಿ ಪ್ರಕಾರ,
ವಿತರಕರ ಸಂಘವು ಪಿಎಂ ಒ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಹಾರ್ಡೀಪ್ ಪುರಿ ಅವರಿಗೆ ಜ್ಞಾಪಕ ಪತ್ರ ಕಳುಹಿಸಲಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಜಾಲದ ಮೂಲಕ ಸೀಮೆಎಣ್ಣೆ ವಿತರಣೆ ಪುನರಾರಂಭಿಸುವ ಸಾಧ್ಯತೆ ಯನ್ನೂ ಪರಿಗಣಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ . ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಅಸ್ತಿರತೆ ಉಂಟುಮಾಡಿರುವ ಹಿನ್ನಲೆಯಲ್ಲಿ i ಬೇಡಿಕೆ ಬಂದಿದೆ ವಿಶೇಷವಾಗಿ ಹಾರ್ಮುಜ್ ಜಲಮಾರ್ಗ ಸೇರಿದಂತೆ ಪ್ರಮುಖ ಸಮುದ್ರ ಮಾರ್ಗದಲ್ಲಿ ಸಂಘರ್ಷ ಹೆಚ್ಚಿರುವುದರಿಂದ ಜಾಗತಿಕ ಇಂಧನ ಪೂರೈಕೆ ಬಗ್ಗೆ ಆತಂಕ ಹೆಚ್ಚಾಗಿದೆ
ಮತ್ತಷ್ಟು ಹೆಚ್ಚಿನ ಆತಂಕ!
ಭಾರತವು ತನ್ನ ಕಚ್ಚಾ ತೈಲ ಹಾಗೂ ಎಲ್ ಪಿ ಜಿ ಅಗತ್ಯಗಳ ದೊಡ್ಡ ಭಾಗವನ್ನು ಅಮದು ಗಳ ಮೂಲಕ ಪೂರೈಸುತ್ತದೆ. ಆದ್ದರಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾದರೆ ಅಥವಾ ಸಾಗಣೆ ಮಾರ್ಗದಲ್ಲಿ ಅಡಚಣೆ ಉಂಟಾದರೆ , ಅದು ಇಂಧನ ಪೂರೈಕೆಗೆ ಪರಿಣಾಮ ಬೀರುವ ಸಾದ್ಯತೆ ide ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ . ಇದರಿಂದ ಎಲ್ ಪಿ ಜಿ ಲಭ್ಯತೆಯ ಮೇಲೆ ಉತ್ತದ ಹೆಚ್ಚಬಹುದು ಎಂಬ ಭೀತಿ ವ್ಯಕ್ತವಾಗಿದೆ ಕೆಲವು ಪ್ರದೇಶಗಳಲ್ಲಿ ಜನರು ಸಿಲಿಂಡರ್ ಪಡೆಯಲು ಏಜೆನ್ಸಿ ಗಳ ಮುಂದೆ ಸಾಲಿನಲ್ಲಿ ನಿಂತಿರುವ ಘಟನೆಗಳು ವರದಿಯಾಗುತ್ತಿರುವುದು i ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ
ಮತ್ತೊಮ್ಮೆ ಚರ್ಚೆಗೆ ಬಂದಿದೆ ಈ ವಿಷಯ
ಸರ್ಕಾರ ಈ ಬೇಡಿಕೆಯನ್ನು ಹೇಗೆ ಪರಿಗಣಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಆದರೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚುತ್ತಿರುವ ಸಮಯದಲ್ಲಿ ಈ ವಿಷಯವು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ ಮುಂದಿನ ದಿನಗಳಲ್ಲಿ ಇಂಧನ ಪೂರೈಕೆ ಹಾಗೂ ಬೆಲೆ ಸ್ಥಿತಿಗತಿ ಹೇಗೆ ರೂಪಗೊಳ್ಳುತ್ತದೆ ಎಂಬುದರ ಮೇಲೆ ಸರ್ಕಾರದ ನಿರ್ಧಾರವು ಅವಲಂಬಿತವಾಗಿರಲಿದೆ