Telegram Join My Telegram WhatsApp Join My WhatsApp

Property rights: ತಂದೆಯ ಆಸ್ತಿಯಲ್ಲಿ ಮಗನಿಗೆ ಹಕ್ಕು ಯಾವಾಗ ಸಿಗುತ್ತದೆ ? ಆಸ್ತಿ ವಿಚಾರದಲ್ಲಿ ನಿಮಗೆ ಗೊತ್ತಿರಲಿ ಈ ರೂಲ್ಸ್ !

  • Property rights: ಕುಟುಂಬದಲ್ಲಿ ಆಸ್ತಿ ಹಂಚಿಕೆ (property distribution) ವಿಚಾರ  ಬಂದಾಗ  ತಂದೆ ಮತ್ತು ಮಗನ ನಡುವೆ ಕಾನೂನಾತ್ಮಕ ಜಟಾಪಟಿಗಳು ನಡೆಯುವುದು. ಹೊಸದೇನಲ್ಲ ಆದರೆ , ತಂದೆಯು ಹೊಂದಿರುವ ಎಲ್ಲಾ ಆಸ್ತಿಗಳ ಮೇಲು ಮಗನಿಗೆ ಶಮನವಾಡು ಹಕ್ಕು ಇರುತ್ತದೆಯೇ ?ಅಥವಾ ಪೂರ್ವಜರ ಆಸ್ತಿ ಮತ್ತು ತಂದೆ ಸ್ವಂತ ಕಷ್ಟದಿಂದ ಸಂಪಾದಿಸಿದ ಆಸ್ತಿಯ ನಡುವೆ ಕಾನೂನು ವತ್ಯಾಸ  ಮಾಡುತ್ತದೆಯೇ ? ಈ ಗೊಂದಲಗಳಿಗೆ ಈಗ ಹೈಕೋರ್ಟ್ ಸ್ಪಷ್ಟವಾದ ಉತ್ತರ ನೀಡಿದೆ ಮಗನಿಗೆ ಜನ್ಮಸಿದ್ಧ ಹಕ್ಕು ಸಿಗುವುದು ಯಾವ ಆಸ್ತಿಯಲ್ಲಿ ಎಂಬ ಬಗ್ಗೆ ನ್ಯಾಯಾಲಯ ನೀಡಿರುವ ಮಹತ್ವದ ತೀರ್ಪು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದ ಅನಿವಾರ್ಯ ಸಂಗತಿಯಾಗಿದೆ

ಹೌದು ಕುಟುಂಬದ ಆಸ್ತಿ ವಿವಾದಗಳಿಗೆ ಸಂಬಂಧಿಸಿದ ಮಹತ್ವದ ತೀರ್ಪಿನಲ್ಲಿ ಕೇರಳ ಹೈಕೋರ್ಟ್ ಪ್ರಮುಖ ವಿಷಯವೊಂದನ್ನು ಸ್ಪಷ್ಟಪಡಿಸಿದೆ . ಅದುವೇ ಹಿಂದೂ ಪುರುಷನೊಬ್ಬ ತನ್ನ ಸ್ವಾಯಂ ಸಂಪಾದಿಸಿದ ಆಸ್ತಿಯನ್ನು ತನ್ನ ಇಷ್ಟದಂತೆ ಮಾರಾಟ ಮಾಡಬಹುದು ಅಥವಾ ವಿಲ್ ಮೂಲಕ ಯಾರಿಗಾದರೂ ನೀಡಬಹುದು. ಆತಂಕ ಆಸ್ತಿಯ ಮೇಲೆ ಮಗನಿಗೆ ಹುಟ್ಟಿನಿಂದಲೇ ಹಕ್ಕು ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ

ಪ್ರಕರಣದ ಹಿನ್ನೆಲೆ ಏನು ?

ಈ ಪ್ರಕರಣದಲ್ಲಿ ಒಬ್ಬ ಮಗ ತನ್ನ ತಂದೆಯ ಭೂಮಿಯ ಮೇಲೆ ಹಕ್ಕು ಇದೆ ಎಂದು ಹೇಳಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದ . ತಂದೆ  ಆ ಭೂಮಿಯನ್ನು ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡಿದ್ದರು . ನಂತರ ತಾಯಿ ಮಗನನ್ನು ಹೊರಗಿಟ್ಟು ಆ ಭೂಮಿಯನ್ನು ಇತರೆ ಐದು ಕುಟುಂಬದ ಸದಸ್ಯರಿಗೆ ಹಂಚುವಂತೆ ವಿಲ್ ಮಾಡಿದ್ದರು .ಇದರಿಂದ ಅಸಮಾಧಾನಗೊಂಡ ಮಗ , ಆಸ್ತಿಯ ಮೇಲೆ ತನಗೂ ಜನ್ಮಸಿದ್ಧ  ಹಕ್ಕು ಇದೆ ಎಂದು ವಾದಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ

ನ್ಯಾಯಾಲಯದ ಅಭಿಪ್ರಾಯವೇನು ?

ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯ ಆಸ್ತಿ ಪೂರ್ವಜರಿಂದ ಬಂದ ಜಂಟಿ ಕುಟುಂಬದ ಆಸ್ತಿ ಅಲ್ಲ ಬದಲಾಗಿ ತಂದೆಯ ಸ್ವಯಂ ಸಂಪಾದಿತ ಆಸ್ತಿ ಎಂದು ಸ್ಪಷ್ಟ ಪಡಿಸಿತು .ಆದ್ದರಿಂದ ತಂದೆಗೆ ಆ ಆಸ್ತಿಯನ್ನು ತನ್ನ ಹೆಂಡತಿಗೆ  ಉಡುಗೊರೆಯಾಗಿ ನೀಡುವ ಸಂಪೂರ್ಣ ಹಕ್ಕು ಇದೆ ಎಂದು ನ್ಯಾಯಾಲಯ ಹೇಳಿತು. ಹೀಗಾಗಿ ತಾಯಿ ಮಾಡಿದ ವಿಲ್ ಸಹ ಮಾನ್ಯವಾಗಿದೆ ಎಂದು ತೀರ್ಪು ನೀಡಿತು. ಈ ಅಂಶವನ್ನು ಪರಿಗಣಿಸಿ ಮಗನ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿತು

ಹಾಗಿದ್ರೆ ಯಾವಾಗ ಮಗನಿಗೆ ಜನ್ಮಸಿದ್ಧ ಹಕ್ಕು ಸಿಗುತ್ತದೆ ?

ಮೊದಲನೆಯದಾಗಿ : ಒಬ್ಬ ವ್ಯಕ್ತಿ ತನ್ನ ಪೂರ್ವಜರ ಜಂಟಿ ಆಸ್ತಿಯನ್ನು ವಿಭಜನೆಯ ಮೂಲಕ ಪಡೆದಿದ್ದಾರೆ ನಂತರ ಅವನಿಗೆ ಮಗ ಹುಟ್ಟಿದಾಗ  ಆ ಆಸ್ತಿಯ ಸಹ ಪರ್ಸನರಿ (ಜಂಟಿ ಕುಟುಂಬ ) ಆಸ್ತಿಯಾಗುತ್ತದೆ ಆಗ ಮಗನಿಗೆ ಜನ್ಮಸಿದ್ಧ ಹಕ್ಕು ಸಿಗುತ್ತದೆ

*ಎರಡನೆಯದಾಗಿ : ಸ್ವಯಂ ಸಂಪಾದಿತ ಆಸ್ತಿ.ಅಂದರೆ ಆಸ್ತಿ ಮೊದಲಿನಿಂದಲೇ ತಂದೆಯ ಸ್ವತಃ ಸಂಪಾದಿಸಿದ್ದಾದರೆ ಮಗನಿಗೆ ಅದರ ಮೇಲೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ

ಹೀಗೆ ಆಸ್ತಿಯ ಮೂಲದ ಮೇಲೆ ಮಗನಿಗೆ ಜನ್ಮಸಿದ್ಧ ಹಕ್ಕು ಇರುವುದೇ ಇಲ್ಲವೇ ಎಂಬುವ ನಿರ್ಧಾರವಾಗಿರುತ್ತದೆ

ಮಗ ಪ್ರಕರಣದಲ್ಲಿ ಸೋತದ್ದು ಯಾಕೆ

ಕಾನೂನು ತಜ್ಞರ ಪ್ರಕಾರ, ಈ ಪ್ರಕರಣದಲ್ಲಿ ಮಗ ಸೋಲಲು ಪ್ರಮುಖ ಕಾರಣವೇನೆಂದರೆ ಆಸ್ತಿಯು ಪೂರ್ವಜರದ್ದು ಎಂದು ಸಾಬೀತು ಪಡಿಸಲು ಅವನಿಗೆ ಸಾಧ್ಯವಾಗಲಿಲ್ಲ . ಯಾಕೆಂದರೆ ದಾಖಲೆಗಳ ಪ್ರಕಾರ ಆ ಭೂಮಿಯನ್ನು ಮೊದಲೇ ಅಜ್ಜನೆ ಖರೀದಿಸಿದ್ದನು . ನಂತರ  1956 ರ ನಂತರ ನಡೆದ ವಿಭಜನೆಯ ಮೂಲಕ ತಂದೆ ತನ್ನ ಪಾಲನ್ನು ಪಡೆದಿದ್ದರೂ. ಆದ್ದರಿಂದ ಅದು ಜಂಟಿ ಕುಟುಂಬದ ಆಸ್ತಿಯಲ್ಲ , ತಂದೆಯ ವಯಕ್ತಿಕ ಆಸ್ತಿ ಎಂದು ನ್ಯಾಯಾಲಯ ನಿರ್ಧರಿಸಿತು

ಪ್ರತಿ ತಂದೆಯ ಆಸ್ತಿಯು ಜಂಟಿ ಕುಟುಂಬದ್ದಲ್ಲ !

ಕುಟುಂಬದಲ್ಲಿರುವ ಪ್ರತಿಯೊಂದು ಆಸ್ತಿಯು ಪೂರ್ವಜರಿಂದ ಬಂದಿದ್ದೆ ಎಂದು ಊಹಿಸುವುದು ಸರಿಯಲ್ಲ ಆಸ್ತಿ ಸ್ವಯಂ ಸಂಪಾದಿಸಿದ್ದು ಅಥವಾ ಪೂರ್ವಜರದ್ದು ಎಂಬುದನ್ನು ದಾಖಲೆಗಳ ಮೂಲಕ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು

ನ್ಯಾಯಾಲಯದ ಪ್ರಕಾರ ತಂದೆಯ ಹೆಸರಿನಲ್ಲಿ ಇರುವ ಎಲ್ಲ ಆಸ್ತಿಯು  ಮಗ ಹುಟ್ಟಿದ ನಂತರ ಸ್ವಯಂ ಚಲಿತವಾಗಿ ಜಂಟಿ ಕುಟುಂಬದ ಆಸ್ತಿಯಾಗುವುದಿಲ್ಲ ಆ ಆಸ್ತಿಯ ಮೂಲವೇ ಮುಖ್ಯವಾಗುತ್ತದೆ ಅದು ಪೂರ್ವಜರಿಂದ ಬಂದಿದ್ದ ಅಥವಾ ತಂದೆಯೇ ಸಂಪಾದಿಸಿದ್ದ ಎಂಬುದರ ಮೇಲೆ ಹಕ್ಕು ನಿರ್ಧಾರವಾಗುತ್ತದೆ

ಆದ್ದರಿಂದ ಸರಿಯಾದ ದಾಖಲೆಗಳು,ವಿಭಜನ ಪತ್ರಗಳು ಮತ್ತು ನೋಂದಾಯಿತ  ಉಡುಗೊರೆ ಅಥವಾ ವಿಲ್ ಗಳನ್ನು ಮಾಡುವುದು ಭವಿಷ್ಯದಲ್ಲಿ ಕುಟುಂಬದೊಳಗಿನ ಆಸ್ತಿ ವಿವಾದಗಳನ್ನು ತಪ್ಪಿಸಲು ಸಹಾಯಮಾಡುತ್ತದೆ ಜೊತೆಗೆ ಸ್ವಯಂ ಸಂಪಾದಿಸಿದ ಆಸ್ತಿಯ ಮೇಲೆ ತಂದೆಗೆ ಸಂಪೂರ್ಣ ಹಕ್ಕು ಇರುತ್ತದೆ ಮತ್ತು ಅದನ್ನು ತನ್ನ ಇಷ್ಟದಂತೆ ಮಾರಾಟ ಮಾಡಬಹುದು, ಉಡುಗೊರೆಯಾಗಿ ನೀಡಬಹುದು ಅಥವಾ ವಿಲ್ ಮೂಲಕ ಯಾರಿಗಾದರೂ ನೀಡಬಹುದು

ಒಟ್ಟಾರೆಯಾಗಿ ಆಸ್ತಿಯ ವಿಚಾರದಲ್ಲಿ ಕಾನೂನು ಹಕ್ಕುಗಳ ಆಸ್ತಿಯ ಸ್ವರೂಪದ ಮೇಲೆ ನಿರ್ಧವಾಗುತ್ತವೆ ತಂದೆಯ ಸ್ವಯಜಿತ ಆಸ್ತಿಯು ಮತ್ತು ಪಿತೃಜಿತ ಆಸ್ತಿಯ ನಡುವಿನ ವ್ಯತ್ಯಾಸವನ್ನು ಹೈಕೋರ್ಟ್ ಈಗ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು ಅನಗತ್ಯ ಕಾನೂನು ಹೋರಾಟಗಳಿಗೆ ತೆರೆ ಎಳೆದಂತಾಗಿದೆ ಆಸ್ತಿಯ ಹಂಚಿಕೆಯ ಸಂಧರ್ಭದಲ್ಲಿ ಉಂಟಾಗುವ ಕೌಟುಂಬಿಕ ಬಿರುಕುಗಳನ್ನು ತಡೆಯಲು ಇಂತಹ ಕಾನೂನುಗಳ ಅರಿವು ಅತ್ಯಗತ್ಯ ನ್ಯಾಯಾಲಯದ ಈ ಆದೇಶವು ಆಸ್ತಿ ಹಕ್ಕುಗಳ ಬಗ್ಗೆ ಜನಸಾಮಾನ್ಯರಿಗಿದ್ದ ಗೊಂದಲವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.

Leave a Comment