Telegram Join My Telegram WhatsApp Join My WhatsApp

Money: ಕೈಗೆ ದುಡ್ಡು ಬೇಕು ಅಂತ ಪರ್ಸನಲ್ ಲೋನ್ ತಗೊತಿದಿರ ? FD ಮೇಲೆ ಸಿಗೋ ಈ ಬಂಪರ್ ಲಾಭ ಮಿಸ್ ಮಾಡ್ಕೊಳ್ಬೇಡಿ!

  • Money : ನಿಮ್ಮ ಹೆಸರಿನಲ್ಲಿ ಈಗಾಗಲೇ ಸ್ಥಿರ ಠೇವಣಿ  ( fixed deposit) ಇದ್ದರೆ ಅದರ ಆಧಾರದ ಮೇಲೆ ಅತಿಕಡಿಮೆ ಬಡ್ಡಿಗೆ ಸುಲಭವಾಗಿ ಸಾಲ ಪಡೆಯಬಹುದು ಪರ್ಸನಲ್ ಲೋನ್ ಗೆ ಹೋಲಿಸಿದರೆ ಅಗ್ಗದ ಹಾಗೂ ಬೆಸ್ಟ್ ಆಯ್ಕೆಯಾಗಿದೆ

ನಿಮಗೆ ಧಿಡೀರ್ ಹಣದ ಅವಶ್ಯಕತೆ (financial emergency) ಎದುರಾದಾಗ ಮೊದಲಿಗೆ ನೆನಪಾಗುವುದೇ ಲೋನ್

ವಯಕ್ತಿಕ ಸಾಲ (ಪರ್ಸನಲ್ ಲೋನ್)

ಬ್ಯಾಂಕ್ನಿಂದ ಸಾಲ ಪಡೆಯುವುದು ತುಂಬ ಸುಲಭ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ ಆಮೇಲೆ EMI. ಮೂಲಕ ಆರಾಮಾಗಿ ಕಟ್ಟಬಹುದು ಅಂತ ಹೆಚ್ಚಿನವರು ಯೋಚಿಸುತ್ತಾರೆ ಆದರೆ i ಧಾವಂತದಲ್ಲಿ ನಾವೆಲ್ಲರೂ ಒಂದು ದೊಡ್ಡ ವಿಚಾರವನ್ನೇ ಮರೆತುಬಿಡುತ್ತೇವೆ ಅದೇನಪ್ಪ ಅಂದರೆ ನಿಮ್ಮ ಹೆಸರಿನಲ್ಲಿ ಈಗಾಗಲೇ ಸ್ಥಿರ ಠೇವಣಿ  ಎಂದರೆ fixed deposit ಇದ್ದರೆ ಅದರ ಆಧಾರದ ಮೇಲೆ ಅತಿಕಡಿಮೆ ಬಡ್ಡಿಗೆ ಸುಲಭವಾಗಿ ಸಾಲ ಪಡೆಯಬಹುದು ಪರ್ಸನಲ್ ಲೋನ್ ಗೆ ಹೋಲಿಸಿದರೆ idu ಅಗ್ಗದ ಆಯ್ಕೆಯಾಗಿದೆ

FD ಮೇಲಿನ ಸಾಲ ಹೇಗೆ ವರ್ಕ್ ಆಗುತ್ತದೆ

ಈ ಸಲ ಪಡೆಯಲು ನೀವು ನಿಮ್ಮ FD ಯನ್ನು ಮುರಿಯುವ (ಕ್ಲೋಸ್ ಮಾಡುವ) ಅಗತ್ಯವೇ ಇಲ್ಲ. ಬ್ಯಾಂಕುಗಳು ನಿಮ್ಮ ಎಫ್ ಡಿ ಯನ್ನು ಒಂದು ರೀತಿಯ ಭದ್ರತೆಯಾಗಿ ಇಟ್ಟುಕೊಂಡು ಸಾಲ ನೀಡುತ್ತೇವೆ ಸಾಮಾನ್ಯವಾಗಿ ನಿಮ್ಮ FD ಯ ಒಟ್ಟು ಮೊತ್ತದ ಶೇಕಡಾ 80% ರಿಂದ 90% ರಷ್ಟು ಹಣವನ್ನು ನೀವು ಸಾಲವಾಗಿ ಪಡೆಯಬಹುದು

ಇಲ್ಲಿನ ಅಸಲಿಯ ಮಜಾ ಅಂದರೆ ಬ್ಯಾಂಕ್ ನಲ್ಲಿ ನಿಮ್ಮ FD  ಸಂಪೂರ್ಣ ಸೇಫ್ ಆಗಿರುತ್ತದೆ ಮತ್ತು ಅದರಮೇಲೆ ಬರುವ ಬಡ್ಡಿಕುಡ ನಿಮಗೆ ಸಿಗುತ್ತಲೇಇರುತ್ತದೆ  ಈ ಸಾಲದ ಮೇಲಿನ ಬಡ್ಡಿ ದರವು FD ಬಡ್ಡಿಗಿಂತ ಕೇವಲ ಶೇಕಡಾ 1 ರಿಂದ 2 ರಷ್ಟು ಮಾತ್ರ ಹೆಚ್ಚಿರುತ್ತದೆ ಉದಾಹರಣೆಗೆ ನೀವು FD ಗೆ ಶೇಕಡಾ 7% ಬಡ್ಡಿ ಸಿಗುತ್ತಿದ್ದರೆ ನೀವು ಪಡೆಯುವ ಸಾಲಕ್ಕೆ ಶೇಕಡಾ 8 ರಿಂದ 9 ರವರೆಗೆ ಮಾತ್ರ ಬಡ್ಡಿ ಕಟ್ಟಬೇಕಾಗುತ್ತ

ಪರ್ಸನಲ್ ಲೋನ್ ಅಷ್ಟು ದುಬಾರಿ ಏಕೆ?

ಪರ್ಸನಲ್ ಲೋನ್ ಎನ್ನುವುದು ಒಂದು ಅಸುರಕ್ಷಿತ ಸಾಲ (unsecured loan) ಅಂದರೆ ಇಲ್ಲಿ ಬ್ಯಾಂಕಿಗೆ ಯಾವುದೇ ಅಡಮಾನ ಅಥವಾ ಆಸ್ತಿಯನ್ನು ಗ್ಯಾರಂಟಿಯಾಗಿ ನೀಡುವುದಿಲ್ಲ  ಬ್ಯಾಂಕಿಗೆ ರಿಸ್ಕ್ ಜಾಸ್ತಿ ಇರುವುದರಿಂದ ಅವರು ನಿಮ್ಮಿಂದ ಹೆಚ್ಚಿನ ಬಡ್ಡಿ ಕೂಡ ಸಿಕ್ಕಾಪಟ್ಟೆ ಹೈ ಆಗಿರುತ್ತದೆ ? ಸಾಮಾನ್ಯವಾಗಿ ಪರ್ಸನಲ್ ಲೋನ್ ಗೆ ಶೇಕಡಾ 10 ರಿಂದ 18 ರಷ್ಟು ಅಥವಾ ಅದಕ್ಕಿಂತ ಹೆಚ್ಚು ಬಡ್ಡಿ ವಿಧಿಸಲಾಗುತ್ತದೆ

ಇದರ ಜೊತೆಗೆ ಪ್ರೊಸೆಸಿಂಗ್ ಫೀ ಮುಂಚಿತವಾಗಿ ಸಾಲ ತೀರಿಸಿದ ಪ್ರೀ ಪೇಮೆಂಟ್ ಚಾರ್ಜಸ್ ಅಂತ ಬೇರೆ ಬೇರೆ ಶುಲ್ಕ ಗಳನ್ನೂ ವಸೂಲಿ ಮಾಡುತ್ತಾರೆ ಉದಾಹರಣೆಗೆ ನೀವು ಐದು ಲಕ್ಷ ರೂಪಾಯಿ ಪರ್ಸನಲ್ ಲೋನ್ ಅನ್ನು 3 ವರ್ಷಕ್ಕೆ ತೆಗೆದುಕೊಂಡಿದ್ದರೆ ಬಡ್ಡಿಯ ರೂಪದಲ್ಲಿ ನೀವು ದೊಡ್ಡ ಮೊತ್ತವನ್ನು ಬ್ಯಾಂಕಿಗೆ ಸೇರಿಸಬೇಕಾಗುತ್ತದೆ

ಹಾಗಾದರೆ ನಿಮಗೆ ಯಾವುದು ಬೆಸ್ಟ್ ಆಯ್ಕೆ ?

ನಿಮ್ಮ ಬಳಿ ಈಗಾಗಲೇ ಒಂದು FD ಇದ್ದರೆ ಕಣ್ಣು ಮುಚ್ಚಿಕೊಂಡು ಅದರಮೇಲೆ ಸಾಲ ಪಡೆಯುವುದೇ ಅತ್ಯಂತ ಜಾಣತನದ ಮತ್ತು ಅಗ್ಗದ ಆಯ್ಕೆ ಇದರಿಂದ ನೀವು FD ಯನ್ನು ಅವಧಿಗೂ ಮುನ್ನ ಮುರಿದು ದಂಡ ಕಟ್ಟುವ ಪ್ರಮೇಯ ಬರುವುದಿಲ್ಲ ಆದರೆ ನೀವು FD ಹಣವನ್ನು ಮಕ್ಕಳ ಮದುವೆ ಅಥವಾ ಶಿಕ್ಷಣ ದಂತಹ ನಿರ್ದಿಷ್ಟ ಗುರಿಗಾಗಿ ಕಾಯ್ದಿರಿಸಿದ್ದಾರೆ ಅಥವಾ FD ಮೊತ್ತಕ್ಕಿಂತ ಹೆಚ್ಚಿನ ಹಣ ತುರ್ತಾಗಿ ಬೇಕಾದರೆ ಮಾತ್ರ ಪರ್ಸನಲ್ ಲೋನ್ ತೆಗೆದು ಕೊಳ್ಳುವುದು ಅನಿವಾರ್ಯ

ನಿಮ್ಮ FD ಮೂಲಕ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು

ಹೌದು ನೀವು FD ಮೂಲಕ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು ಹೇಗೆ ಎಂಬುದನ್ನು ತಿಳಿಯಿರಿ  ಮೊದಲಿಗೆ ನಿಮ್ಮ FD ಯಾವ ಬ್ಯಾಂಕ್ ನಲ್ಲಿ ಇದೆ ಎಂಬುದನ್ನು ತಿಳಿಯಿರಿ ಒಂದುವೇಳೆ ನಿಮ್ಮ ಬ್ಯಾಂಕ್ ರಾಷ್ಟ್ರೀಯ ಬ್ಯಾಂಕ್ ಆಗಿದ್ದೆ ಆದಲ್ಲಿ ನೀವು ಸುಲಭವಾಗಿ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು

ಮೊದಲ ನಿಮ್ಮ ಬ್ಯಾಂಕ್ ನಲ್ಲಿ  ಖಾತೆ ತೆಗೆದುಕೊಂಡು ಬ್ಯಾಂಕಿನ ಸಿಬ್ಬಂದಿ ಮತ್ತು ಮ್ಯಾನೇಜರ್ ಬಳಿ ಒಂದು ಅರ್ಜಿ ಸಲ್ಲಿಸಿ Mobile banking active ಮಾಡಲು ಅರ್ಜಿ ಸಲ್ಲಿಸಿ ನಂತರ  ಈಗಾಗಲೇ ನೀವು FD ಯನ್ನು ಹೊಂದಿದ್ದರೆ fd ಆಧಾರದ ಮೇಲೆ ನೀವು ಕ್ರೆಡಿಟ್ ಕಾರ್ಡ್ ಪಡೆಯಲು ಅವಕಾಶ ನೀಡುತ್ತದೆ fd ಮೂಲಕ ಕ್ರೆಡಿಟ್ ಕಾರ್ಡ್ ಪಡೆದರೆ ಶೇಕಡಾ 80ರಿಂದ 90ರಷ್ಟು ಕ್ರೆಡಿಟ್ ಲಿಮಿಟ್ ಸಿಗುತ್ತದೆ ಎಂದರೆ. ನೀವು ಒಂದು ಲಕ್ಷ ರೂಪಾಯಿ FD ಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಶೇಕಡಾ 80ರಿಂದ 90ರಷ್ಟು ಅಂದರೆ 80ರಿಂದ 90ಸಾವಿರದ ವರೆಗೆ ಕ್ರೆಡಿಟ್ ಲಿಮಿಟ್ ದೊರೆಯುತ್ತದೆ ಮತ್ತು ಇನ್ನಿತರ ಕೊಡುಗೆಗಳು ಸಹ ಸಿಗುತ್ತವೆ ಅಂದರೆ ಒಮ್ಮೆ ನೀವು ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ಮಾಡಿದರೆ ಸುಮಾರು 45 ದಿನಗಳ ವರೆಗೆ ಬಡ್ಡಿ ರಹಿತ (interest free) ಸಾಲ ಸೌಲಭ್ಯ ನೀಡಲಾಗುತ್ತದೆ

ಕ್ರೆಡಿಟ್ ಕಾರ್ಡ್ ನಾ ಕರಾಳ ಸತ್ಯವನ್ನು ಪಡೆಯುವ ಮುನ್ನ ತಿಳಿಯಿರಿ

ನಿಮಗೆ ಕ್ರೆಡಿಟ್ ಕಾರ್ಡ್ ಅವಶ್ಯಕತೆ ಇದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಿರಿ ಅವಶ್ಯಕತೆ ಇಲ್ಲವದಲ್ಲಿ ಅದರಿಂದ ದೂರವಿರಿ

ಒಂದು ವೇಳೆ ನೀವು FD ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಪಡೆದಿದ್ದೆಯಾದಲ್ಲಿ ಕಾರ್ಡ್ ಮೂಲಕ ವಹಿವಾಟು ನಡೆಸಿ ನಂತರ ಸರಿಯಾದ ಸಮಯದಲ್ಲಿ ಮರುಪಾವತಿ (repayment) ಮಾಡದೇಹೊದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಾರ್ಜಸ್ ಅನ್ನು ಬ್ಯಾಂಕುಗಳು ವಿಧಿಸುತ್ತವೆ e.g  ಲೆಟ್ ಫೀ ಮತ್ತು ಬಡ್ಡಿ ಇನ್ನಿತರ ಹೆಚ್ಚಿನ ಚಾರ್ಜಸ್ ಗಳ ವಿಧಿಸುತ್ತಾರೆ ಮತ್ತು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡದೆ ಹೋದಲ್ಲಿ ನಿಮಗೆ ಯಾವುದೇ ಮಾಹಿತಿಯನ್ನು ನೀಡದೆ nimmaFD ಯನ್ನು ಬ್ರೇಕ್ ಮಾಡಿ ಕ್ರೆಡಿಟ್ ಕಾರ್ಡ್ ಸಾಲವನ್ನು ಅವರೇ ಮರುಪಾವತಿ ಮಾಡಿಕೊಳ್ಳುತ್ತಾರೆ ಅದರಿಂದ ಕ್ರೆಡಿಟ್ ಕಾರ್ಡ್ ಪಡೆಯುವ ಮುನ್ನ ಒಮ್ಮೆ ಯೋಚಿಸಿ ನಂತರ ಅರ್ಜಿ ಸಲ್ಲಿಸಿ

Leave a Comment