ಗೃಹಲಕ್ಮಿ ಯೋಜನೆ ಫಲಾನುಭವಿಗಳಿಗೆ 27 ನೇ ಕಂತಿನ ಹಣ ಬಿಡುಗಡೆಯಾಗಿದೆ. ಈಗಾಗಲೇ 15ಕ್ಕೂ ಅಧಿಕ ಜಿಲ್ಲೆಯ ಮಹಿಳೆಯರಿಗೆ ಹಣ ಖಾತೆಗೆ ಜಮೆಯಾಗಿದೆ . ಬಾಕಿ ಉಳಿದವರಿಗೆ ಶೀಘ್ರ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ . ಇನ್ನು ಎಸ್ಟು ಕಂತಿನ ಹಣ ಬಾಕಿ ಇದೆ ? ಯಾವೆಲ್ಲಾ ಕಂತು ?ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ
ಬೆಂಗಳೂರು: ಗೃಹಲಕ್ಮಿ ಯೋಜನೆಯ 27 ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ .ಈಗಾಗಲೇ 15 ಕ್ಕೂ ಅಧಿಕ ಜಿಲ್ಲೆಯ ಫಲಾನುಭವಿ ಮಹಿಳೆಯರಿಗೆ ಖಾತೆಗೆ ಹಣ ಜಮೆಯಾಗಿದ್ದು ,ಇನ್ನೆರಡು ಮೂರು ದಿನಗಳಲ್ಲಿ ಬಾಕಿ ಉಳಿದ ಜಿಲ್ಲೆಗಳ ಮಹಿಳೆಯರಿಗೆ ಹಣ ತಲುಪಲಿದೆ
ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಯಲ್ಲಿ ಪ್ರಮುಖವಾದ ಗೃಹಲಕ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ 2000 ರುಪಾಯಿ ಸಹಾಯ ಧನ ನೀಡಲಾಗುತ್ತದೆ . 2023 ಆಗಸ್ಟ್ ನಿಂದ ಯೋಜನೆ ಜಾರಿಯಾಗಿದ್ದು ಸದ್ಯ 27 ನೇ ಕಂತಿನ ಹಣ ಬಿಡುಗಡೆಯಾಗಿದೆ
ಯಾವೆಲ್ಲಾ ಜಿಲ್ಲೆಗಳ ಮಹಿಳೆಯರಿಗೆ ಹಣ ಜಮೆಯಾಗುತ್ತಿದೆ :

ಬೆಂಗಳೂರು ಗ್ರಾಮಾಂತರ ,ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಚಿತ್ರದುರ್ಗ, ಬೆಳಗಾವಿ , ಗದಗ , ಬಾಗಲಕೋಟೆ , ದಾವಣಗೆರೆ , ಕಲಬುರಗಿ , ಹಾಸನ , ಮೈಸೂರು , ಕೊಡಗು , ಸೇರಿದಂತೆ 15 ಕ್ಕೂ ಅಧಿಕ ಜಿಲ್ಲೆಗಳ ಖಜಾನೆಯಿಂದ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ ಇನ್ನೂ ಮೂರು ದಿನಗಳೊಳಗೆ ಬಾಕಿ ಇರುವ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ
ಎರಡು ತಿಂಗಳಲ್ಲಿ ಮೂರನೇ ಬಾರಿ ಹಣ !
ಕಳೆದ ಎರಡು ತಿಂಗಳಲ್ಲಿ ಸತತ ಮೂರು ಗೃಹಲಕ್ಮಿ ಯೋಜನೆ ಕಂತುಗಳ ಹಣ ಜಮೆಯಾಗಿದೆ. ಫೆಬ್ರವರಿ 19-24 ಮಾರ್ಚ್ 09. ರಂದು ಹಣ ಖಾತೆಗೆ ಬಿತ್ತು ಎಂದು ದಾವಣಗೆರೆ ಜಿಲ್ಲೆ ಜಗಳೂರಿನ ಚಿಕ್ಕಮಲ್ಲನ ಹೊಳೆ. ಗ್ರಾಮದ ಫಲಾನುಭವಿ ಕೆಂಚಮ್ಮ ಮಧ್ಯಮ ಗಳಿಗೆ ತಿಳಿಸಿದ್ದಾರೆ
ಯುಗಾದಿ, ರಂಜಾನ್ ಹಬ್ಬಕ್ಕೆ ಅನುಕೂಲ .
27 ನೇ ಕಂತು ಬಿಡುಗಡೆಯಾಗುತ್ತಿರುವ ಮುಂಬರುವ ಯುಗಾದಿ, ರಂಜಾನ್ ಹಬ್ಬದ ಖರ್ಚಿಗೆ ಅನುಕೂಲವಾಗಲಿದೆ . ಅದರಲ್ಲೂ ಒಂದೇ ತಿಂಗಳ ಅಂತರೊಳಗೆ (30 ದಿನ ) ಮೂರು ಕಂತು ಜಮೆಯಾಗಿದ್ದು , 6 ಸಾವಿರ ರುಪಾಯಿ ಮಹಿಳೆಯರಿಗೆ ಸಿಕ್ಕಿವೆ ಇದು ಕೂಡ ಹಬ್ಬದ ಸಡಗರ ಹೆಚ್ಚಿಸಲಿದೆ ಎನ್ನುತ್ತಾರೆ ಜಗಳೂರಿನ ಗ್ರಾಮ್ ಒನ್ ಸಹಾಯಕ ಸಂದೀಪ್ .
ಎಸ್ಟು ಕಂತುಗಳು ಬಾಕಿ ?
ಆಗಸ್ಟ್ 2023 ರಿಂದ ಯೋಜನೆ ಜಾರಿಯಾಗಿದ್ದು , ಸದ್ಯ 31 ತಿಂಗಳಾಗಿವೆ ಈಗ 27 ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ . ತಾಂತ್ರಿಕ ಕಾರಣದಿಂದ ಕಳೆದ ವರ್ಷದ 3 ಕಂತಿನ ಹಣ ಬಾಕಿ ಇದೆ . ಸದ್ಯ 2026 ಜನವರಿ ಕಂತಿನ ಹಣ ಮಹಿಳೆಯರ ಖಾತೆಗೆ ಜಮೆಯಾಗುತ್ತಿದೆ ಎಂದು ಇಲಾಖೆ ಮೂಲಗಳು ಹೇಳಿವೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ಹೇನು
ಸದ್ಯ ಅಧಿಕೃತವಾಗಿ ಇಲಾಖೆ ಮೂಲಗಳು ಮಾಹಿತಿ ನೀಡಿದ್ದು ಸಚಿವೆ ಲಕ್ಮೀ ಹೆಬ್ಬಾಳ್ಕರ್ ರವರ ಗಮನಕ್ಕೆ ಬಂದಿದೆ ಕಳೆದ ವರ್ಷದ ಬಾಕಿ ಇರುವ ಎಲ್ಲ ಕಂತುಗಳನ್ನು ಶೀಘ್ರದಲ್ಲೇ ಪಾವತಿ ಮಾಡಲು ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ , ಯುಗಾದಿ ಮತ್ತು ರಂಜಾನ್ ಹಬ್ಬ ಇರುವ ಕಾರಣ ಸರ್ಕಾರಿ ಕಚೇರಿ ಗಳು ರಜೆ ಇರುವ ಕಾರಣ ಮುಂದಿನ ದಿನಗಳಲ್ಲಿ ಬಾಕಿ ಇರುವ ಗೃಹಲಕ್ಷ್ಮಿ ಯೋಜನೆ ಕಂತುಗಳನ್ನ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ
28ನೇ ಕಂತಿನ ಹಣ ಯಾವಾಗ ಬರುತ್ತದೆ
ಮಧ್ಯಮ ಗಳ ಪ್ರಕಾರ ಈ ಬಾರಿ ಬಜೆಟ್ ನಲ್ಲಿ ಗೃಹಲಕ್ಷೀ ಯೋಜನೆಗೆ ಎಂದೇ 50ಸಾವಿರ ಕೋಟಿ ರೂಪಾಯಿ ಹಣ ನೀಡಲಾಗಿದೆ ಅದರಿಂದ ಈ ತಿಂಗಳಾಂತ್ಯಕ್ಕೆ ಬಾಕಿ ಇರುವ ಕಂತುಗಳನ್ನು ಬಿಡುಗಡೆ ಮಾಡಿ ಏಪ್ರಿಲ್ ತಿಂಗಳಲ್ಲಿ ಮೊದಲ ವಾರದಲ್ಲಿ ಅಂತ ಅಂತವಾಗಿ 28 ಕಂತಿನ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ ಸದ್ಯಕ್ಕೆ ಯಾವುದೇ ಆತಂಕ ಬೇಡ ಎಂದು ಸಚಿವೆ ಲಕ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ
ನಮ್ಮ ಸಲಹೆ:-
ರೂಲ್ಸ್ ಫಾಲೋ ಮಾಡದಿದ್ರೆ ಮಾತ್ರ ಇನ್ಮುಂದೆ ಹಣ ನಿಮ್ಮ ಖಾತೆಗೆ ಜಮೆಯಾಗುತ್ತದೆ ಯಾವ್ಯಾವು ಆ ರೂಲ್ಸ್ ಗಳು,
ನಿಮ್ಮ ದಾಖಲೆಗಳನ್ನು ಟೈಮ್ ಟು ಟೈಮ್ ಅಪ್ಡೇಟ್ ಮಾಡಿಸುವುದು ಕಡ್ಡಾಯ ಒಂದು ವೇಳೆ ನಿಮ್ಮ ಅರ್ಜಿಯಲ್ಲಿ ನಿಮ್ಮ ಹೆಸರು ಆಧಾರ್ ಮತ್ತು ಪಡಿತರ ಚೀಟಿ (ರೇಷನ್ ಕಾರ್ಡ್)ನಲ್ಲಿ ವ್ಯತ್ಯಾಸ ಇದ್ದರೆ ತಕ್ಷಣದಿಂದಲೇ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ನಿಷ್ಕ್ರಿಯ ಗೊಳಿಸಬಹುದು ಅದರಿಂದ ನಿಮ್ಮ ದಾಖಲೆ ಗಳಲ್ಲಿ ನಿಮ್ಮ ಹೆಸರು ಮತ್ತು ಬ್ಯಾಂಕ್ ಖಾತೆಗೆ KYC ಹಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ,ಯಾಕೆಂದರೆ ಗೃಹಲಕ್ಷ್ಮೀ ಯೋಜನೆಯ ಹಣ ವನ್ನು ಸರ್ಕಾರ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (DBT) ಮೂಲಕ ವರ್ಗಾವಣೆ ಮಾಡುತ್ತದೆ ,ಅದರಿಂದ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಹಣ ಬಿಡುಗಡೆ ಆದರೂ ನಿಮಗೆ ಹಣ ಬರುವುದಿಲ್ಲ ಹಾಗಾಗಿ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ
ನೆನಪಿರಲಿ:
Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಅನಾದಿಕೃತವಾದ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು