Telegram Join My Telegram WhatsApp Join My WhatsApp

SSLC ಟಾಪರ್ ಗಳಿಗೆ ಲ್ಯಾಪ್ ಟಾಪ್ ಬದಲು ಸಿಗಲಿದೆ 50,000 ರೂ ನಗದು ಬಹುಮಾನ! ಷರತ್ತುಗಳು ಏನು ?

ಕರ್ನಾಟಕ ಸರ್ಕಾರವೂ  SSLC ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸರ್ಕಾರಿ ಶಾಲಾ  ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಬದಲಿಗೆ  50,000 ರೂಪಾಯಿ (toppers reward)  ನಗದು ಬಹುಮಾನ ನೀಡಲು ನಿರ್ಧರಿಸಿದೆ . ಜಿಲ್ಲಾ ಮಟ್ಟದಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ  ಈ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ತಾಂತ್ರಿಕ ಸಮಸ್ಯೆಗಳನ್ನು  ತಪ್ಪಿಸಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲು i ಬದಲಾವಣೆ  ಮಾಡಲಾಗಿದೆ . ಒಟ್ಟು 758 ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ

ರಾಜ್ಯದ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡಲು ಲ್ಯಾಪ್ ಟಾಪ್ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದ ಕರ್ನಾಟಕ ಸರ್ಕಾರವೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರೋತ್ಸಾಹ ದಾಯಕ  ಕ್ರಮಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ . ಪ್ರತಿ ವರ್ಷ  SSLC  ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್ ಟಾಪ್ ಬದಲಿಗೆ ಈಗ ನೇರವಾಗಿ 50,000 ನಗದು ಬಹುಮಾನ ನೀಡಲು ನಿರ್ಧರಿಸಲಾಗಿದೆ . ಈ ಹಿನ್ನಲೆಯ ಯೋಜನೆಯಲ್ಲಿ ಆಗಿರುವ ಬದಲಾವಣೆಗಳು ಏನು ? ಈ ಯೋಜನೆಗೆ ಯಾರೆಲ್ಲ ಅರ್ಹರು ? ಇತ್ಯಾದಿ ಮಾಹಿತಿಗಳು ಇಲ್ಲಿವೆ

ಲ್ಯಾಪ್ ಟಾಪ್ ಬದಲು ನಗದು ಬಹುಮಾನ ಯೋಜನೆ. ಜಾರಿ ಏಕೆ ?

ಕರ್ನಾಟಕ ಸರ್ಕಾರವೂ ಸರ್ಕಾರಿ ಪ್ರೌಢಶಾಲಾ  ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಲು ಮತ್ತು ತಂತ್ರಜ್ಞಾನದ ಅರಿವು ಮೂಡಿಸಲು  SSLC ಪರೀಕ್ಷೆಯಲ್ಲಿ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುವ ಮಹತ್ತರ ಯೋಜನೆಯನ್ನು ಜಾರಿಗೆ ತಂದಿತ್ತು . ಕರ್ನಾಟಕ ಸರ್ಕಾರವೂ ಸರ್ಕಾರಿ ಶಾಲಾ SSLC ಟಾಪರ್ ಗಳಿಗೆ ನೀಡುತ್ತಿದ್ದ ಪ್ರೋತ್ಸಾಹಕ ಯೋಜನೆಯಲ್ಲಿ  ಮಹತ್ವದ ಬದಲಾವಣೆ ಮಾಡಿದ್ದು

ಈ ಹಿಂದೆ ನೀಡಲಾಗುತ್ತಿದ್ದ ಲ್ಯಾಪ್ ಟಾಪ್ ಗಳ ಬದಲಿಗೆ ಈಗ 50,000 ನಗದು ಬಹುಮಾನವನ್ನು ನೀಡಲು ನಿರ್ಧರಿಸಿದೆ ಈ ಹೊಸ ನಿಯಮದಂತೆ ಪ್ರತಿ ಶೈಕ್ಷಣಿಕ ಜಿಲ್ಲೆ ಮೊದಲ ಮೂರು ಸ್ಥಾನ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಲ್ಯಾಪ್ ಟಾಪ್ ಗಳ ಖರೀದಿ ಮತ್ತು ವಿತರಣೆಯಲ್ಲಿನ ವಿಳಂಬ ಹಾಗುಂತಾಂತ್ರಿಕ ಸವಾಲುಗಳನ್ನು ನಿವಾರಿಸಲು ಈ ಕ್ರಮ ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳು ಈ ಹಣವನ್ನುತಮ್ಮ ಇಚ್ಚೆಯಂತೆ ಮುಂದಿನ ಶಿಕ್ಷಣದ ಶುಲ್ಕ, ಪುಸ್ತಕಗಳು ಅಥವಾ ಅವರಿಗೆ ಬೇಕಾದ ಕಂಪನಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಬಳಸುವ ಮೂಲಕ ಹೆಚ್ಚಿನ ಶೈಕ್ಷಣಿಕ ಸ್ವಾತಂತ್ರ್ಯ ವನ್ನು ಪಡೆಯಲಿದ್ದಾರೆ . ಈ ಸಂಬಂಧ  ಜ .22 ರಂದು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ

ಬದಲಾವಣೆಗೆ ಕಾರಣಗಳೇನು ?

* ಅರ್ಹತೆ ಪಡೆದ ಪ್ರತಿಯೊಬ್ಬ  ವಿದ್ಯಾರ್ಥಿಗೂ ತಲಾ 50,000 ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತದೆ

* ಜಿಲ್ಲಾ ಮಟ್ಟದಲ್ಲಿ SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೊದಲ ಮೂರು ಸ್ಥಾನಗಳನ್ನು ಪಡೆದ ಸರಕಾರಿ ಶಾಲಾ ವಿದ್ಯಾರ್ಥಿಗಳು ಮಾತ್ರ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗುತ್ತಾರೆ ಮತ್ತು ಈ ಸೌಲಭ್ಯ ಸರಕಾರಿ  ಅನುದಾನಿತ ಶಾಲೆಗಳಿಗೂ ಅನ್ವಯವಾಗುತ್ತದೆ

* ಈ ಯೋಜನೆಯಲ್ಲಿ ಪಾರದರ್ಶಕತೆ  ಕಾಪಾಡಲು ಬಹುಮಾನದ ಮೊತ್ತವನ್ನು ವಿದ್ಯಾರ್ಥಿಗಳ ಆಧಾರ್ ಸಂಖ್ಯೆಗಳಿಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡಲಾಗುತ್ತದೆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ ( adhar siding)

* ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ  ರಾಜ್ಯಾದ್ಯಂತ ಒಟ್ಟು 758 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಪ್ರಯೋಜನಕ್ಕಾಗಿ ಗುರುತಿಸಲಾಗಿದೆ

* ಲ್ಯಾಪ್ ಟಾಪ್ ಬದಲಿಗೆ ನಗದು ಹಣವನ್ನು ನೀಡುವ  ನಿರ್ಧಾರವನ್ನು ತಮ್ಮ ಉನ್ನತ ಶಿಕ್ಷಣದ ಅಗತ್ಯಗಳಿಗೆ ತಕ್ಕಂತೆ ಹಣವನ್ನು ಬಳಸಿಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ವನ್ನು ನೀಡಲಾಗುತ್ತದೆ

ಅರ್ಹತಾ ಮಾನದಂಡಗಳು ಯಾವವು?

ಈ ಯೋಜನೆಯು ಕೇವಲ ಸರ್ಕಾರಿ  ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ  ಮಾತ್ರ ಅನ್ವಯವಾಗುತ್ತದೆ  ಖಾಸಗಿ  ಅಥವಾ ಅನುದಾನಿತ ಶಾಲೆಗಳಲ್ಲಿ  ವಿಧ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ

  • * ಅಭ್ಯರ್ಥಿಯು ಜಿಲ್ಲಾ ಮಟ್ಟದಲ್ಲಿ SSLC ವಾರ್ಷಿಕ ಪರೀಕ್ಷೆಯಲ್ಲಿ  ಅತಿ ಹೆಚ್ಚು ಅಂಕ ಗಳಿಸಿದ ಮೊದಲ ಮೂರು ಸ್ಥಾನಗಳಲ್ಲಿ ಒಬ್ಬರಾಗಿರಬೇಕು
  • * ವಿದ್ಯಾರ್ಥಿಯ ಸಂಪೂರ್ಣ ಶೈಕ್ಷಣಿಕ ಮಾಹಿತಿಯು ರಾಜ್ಯ ವಿದ್ಯಾರ್ಥಿ ವೇತನ  ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಾಗಿರಬೇಕು
  • * ಅರ್ಹ ವಿದ್ಯಾರ್ಥಿಯ ಹೆಸರಿನಲ್ಲಿಯೇ ಬ್ಯಾಂಕ್ ಖಾತೆಯಿರಬೇಕು  ಮತ್ತು ಆ ಖಾತೆಯು ಕಡ್ಡಾಯವಾಗಿ ಆಧಾರ್ ಸಂಖ್ಯೆಯೊಂದಿಗೆ  ಜೋಡಣೆಯಾಗಿರಬೇಕು

ನಗದು  ಬಹುಮಾನ ನೀಡಿಕೆ ಹೇಗೆ ?

SSLC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅರ್ಹ ಫಲಾನುಭವಿಗಳಿಗೆನ್ನು  ಶಿಕ್ಷಣ ಇಲಾಖೆಯ ಖಚೇರಿಯಿಂದಲೇ ನೇರವಾಗಿ ಗುರುತಿಸಲಾಗುತ್ತದೆ  ಹೀಗೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳ ಮುಖಾಂತರ ಸೌಲಭ್ಯವನ್ನು ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು

ಇದರೊಂದಿಗೆ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸೌಲಭ್ಯಕ್ಕಾಗಿ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ . ಕರ್ನಾಟಕ ಸರ್ಕಾರವೂ ಈ ಯೋಜನೆಗಾಗಿ ಪ್ರತ್ಯೇಕ ಆನ್ ಲೈನ್ ಅರ್ಜಿ ನಮೂನೆಯನ್ನು ತನ್ನ ಅಧಿಕೃತ ವೆಬ್ ಸೈಟ್ dce.Karnataka.gov.in ನಲ್ಲಿ ಲಭ್ಯ ವಾಗುವಂತೆ ಮಾಡಿದೆ ಉನ್ನತ ಶಿಕ್ಷಣ ಉದ್ದೇಶಕ್ಕಾಗಿ ಈ ಸೌಲಭ್ಯವನ್ನು ಬಯಸುವ ಯಾವುದೇ ಅರ್ಹ ವಿದ್ಯಾರ್ಥಿಯು ಈ ಜಾಲತಾಣ ಮೂಲಕ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು

ನೆನಪಿರಲಿ :-

Vishwavanione.com. ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು…

 

Leave a Comment