Telegram Join My Telegram WhatsApp Join My WhatsApp

ವಿಶ್ವಕರ್ಮ ಸಮುದಾಯದ ಏಳಿಗೆಗೆ ಕೇಂದ್ರ ಸರ್ಕಾರದಿಂದ ಅನುದಾನ ಮೀಸಲು

ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ವಿಶ್ವಕರ್ಮ ಯೋಜನೆಗೆ 13 ಸಾವಿರ ಕೋಟಿ ರೂಪಾಯಿ ಮೀಸಲಿರಿಸಿದೆ. ಯೋಜನೆಗೆ ಆಯ್ಕೆ ಯಾದವರು ಸ್ವಂತ ಉದ್ಯೋಗ ಕೈಗೊಳ್ಳಲು ಶೇಖಡಾ 5% ರ ಬಡ್ಡಿ ದರದಲ್ಲಿ 3,00,000 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ ನಿರುದ್ಯೋಗಿಗಳು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಲೋಕ ಸಭೆ ಸದಸ್ಯ  ಬೈ ರಾಘವೇಂದ್ರ ಮಾಧ್ಯಮಗಳ ಮುಂದೆ ಹೇಳಿದರು

MSME. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ನಡೆದ Dr. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ PM ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಸಿದ್ಧ ಪಡಿಸಿದ ವಿವಿಧ ವಸ್ತುಗಳು ಮೂರು ದಿನಗಳ ವ್ಯಾಪಾರ ಮತ್ತು ಪ್ರದರ್ಶನ ಮೇಳ ಉದ್ಘಾಟಿಸಿ ಮಾತನಾಡಿದರು

ಯೋಜನೆಯಡಿ  ರಾಜ್ಯದಲ್ಲಿ 22.5 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದು 5.4 ಲಕ್ಷ ಅರ್ಜಿಗಳು ಪರಿಶೀಲನೆ ಪೂರ್ಣಗೊಂಡು 1.25 ಲಕ್ಷ ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಈ ಯೋಜನೆಯಿಂದ SC-ST ರೈತ ಕುಟುಂಬಗಳ ಕುಶಲ ಕರ್ಮಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಬೀದಿ ಬದಿ ವ್ಯಾಪಾರಸ್ಥರಿಗೂ 50,000 ರೂಪಾಯಿ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ

ಯುವಕರು ಕುಶಲ ಕರ್ಮಿಗಳು ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ವಿಶ್ವಕರ್ಮ ಯೋಜನೆಯನ್ನು ರೂಪಿಸಿದ್ದಾರೆ. ಯೋಜನೆಯಲ್ಲಿ ಕೆಲಸ ಮಾಡುವವರಿಗೆ ಗುರುತಿನ ಚೀಟಿ ಹಾಗೂ ಸುಮಾರು 50,000 ಮೌಲ್ಯದ ಸಲಕರಣೆಗಳ ಕಿಟ್ ನೀಡಲಾಗುತ್ತದೆ

MSME ನಿರ್ದೇಶಕ ಕೆ ದೇವರಾಜ ಸಹಾಯ ನಿರ್ದೇಶಕ ಶಿವಕುಮಾರ್ , ಜಿಲ್ಲಾ ಕೇಂದ್ರದ ಉಪ ನಿರ್ದೇಶಕ H ಸುರೇಶ್ MSME ತರಬೇತಿ ಅಧಿಕಾರಿ ಗೀತಾ ಇವರಿಂದ ಮದ್ಯಮ ಪ್ರಕಟಣೆ ಗೊಳಿಸಲಾಗಿದೆ

ವಿವಿಧ ಉತ್ಪನ್ನಗಳು

ವಿಶ್ವಕರ್ಮ ಯೋಜನೆಯಡಿ ಪ್ರಯೋಜನ ಪಡೆದು ಸ್ವಯಂ ಉದ್ಯೋಗ ಆರಂಭಿಸಿ ಅನೇಕರು ತಾವು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟಕ್ಕೂ ಅವಕಾಶ ಕಲ್ಪಿಸಿದರು 50 ಕ್ಕೂ ಹೆಚ್ಚು ಸ್ಟಾಲ್ ಗಳನ್ನು  ಆವರಣದಲ್ಲಿ ಇದಕ್ಕಾಗಿ ಸಿದ್ಧ ಪಡಿಸಲಾಗಿತ್ತು ವಿವಿಧ ಕರಕುಶಲ ವಸ್ತುಗಳು , ಹಾಸೆ ಚಿತ್ತಾರ, ಮಣ್ಣಿನ ಮಡಕೆ , ಕೈಮೊಗ್ಗು ಉತ್ಪನ್ನಗಳು, ಗೃಹ ಉಪಯೋಗಿ ವಸ್ತುಗಳು , ಇತ್ಯಾದಿಗಳಿದ್ದವು

ಉತ್ತೇಜನಕ್ಕಾಗಿ ಮೇಳ

ಸಣ್ಣ ಉದ್ಯಮಿಗಳನ್ನು ಉತ್ತೇಜಿಸುವ ಈ ಮೇಳ ಮಾರ್ಚ್ 26 ರ ವರೆಗೂ ನಡೆಯಲಿದೆ ಸಣ್ಣ ಉದ್ಯಮಿಗಳಿಗೆ ವಿಶ್ವಕರ್ಮ ಯೋಜನೆಯಡಿ ತರಬೇತಿ ಆರ್ಥಿಕ ನೆರವು ನೀಡಲಾಗಿದೆ ಅವರಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಈ ಮೇಳ ಅಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಸುಮಾರು 6500 ಸಾವಿರ ಮಂದಿಗೆ ಈ ಯೋಜನೆಯ ಪ್ರಯೋಜನ ಸಿಕ್ಕಿದೆ

ತರಬೇತಿ ಮತ್ತು ಸಾಲ ಸೌಲಭ್ಯಕ್ಕೆ. ಹೆಚ್ಚಿನ ಹೊತ್ತು?

ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತದೆ ಇದರಿಂದ ಅವರ ಕೆಲಸದ ಗುಣಮಟ್ಟ ಮತ್ತು ಉತ್ಪಾದನೆಯ ಮಟ್ಟ ಹೆಚ್ಚಾಗುತ್ತದೆ ಜೊತೆಗೆ ಸರ್ಕಾರ ಕಡಿಮೆ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ ಮೊದಲನೆಯ ಹಂತದಲ್ಲಿ 1 ಲಕ್ಷ ಹಾಗೂ ಎರಡನೇ ಹಂತದಲ್ಲಿ 2 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ

ಟೋಲ್ ಕಿಟ್ ಮತ್ತು ಡಿಜಿಟಲ್ ಪ್ರೋತ್ಸಾಹ?

ಕಾರ್ಮಿಕರಿಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲು ಟೂಲ್ ಕಿಟ್ ಸಹಾಯ ನೀಡಲಾಗುತ್ತದೆ ಇದರಿಂದ  ಕೆಲಸದ ವೇಗ ಮತ್ತು ಗುಣಮಟ್ಟ ಎರಡು ಹೆಚ್ಚಾಗುತ್ತದೆ, ಡಿಜಿಟಲ್ ಪಾವತಿಯನ್ನು ಉತ್ತೇಜಿಸಲು ವಿಷೇಶ ಪ್ರೋತ್ಸಾಹ  ನೀಡಲಾಗಿದ್ದು ಇದು ಆಧುನಿಕ ವ್ಯಾಪಾರ ವಿಧಾನಗಳಿಗೆ ಕೈಗಾರಿಗರನ್ನು ಹೊಂದಿಸಿಕೊಳ್ಳಲು ನೆರವಾಗುತ್ತದೆ

ಗ್ರಾಮೀಣ ಆರ್ಥಿಕತೆಗೆ ಬಲ!

ಈ ಯೋಜನೆ ಗ್ರಾಮೀಣ ಆರ್ಥಿಕತೆಯನ್ನು ಬಾಲ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಸ್ವಯಂ ಉದ್ಯೋಗವನ್ನು ಉತ್ತೇಜಿಸುವುದರ ಮೂಲಕ ನಿರುದ್ಯೋಗಿ ಸಮಸ್ಯೆಯನ್ನು ಕಡಿಮೆ ಮಾಡುವ ದೆಸೆಯಲ್ಲಿ ಸರ್ಕಾರದ ಪ್ರಯತ್ನವಾಗಿ ಕಾಣುತ್ತದೆ

ಜಾಗೃತಿ ಕೊರತೆ ಇನ್ನೂ ಸವಾಲು?

ಆದರೆ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯ ಕೊರತೆ ಕಾಣುತ್ತಿದೆ, ಡಿಜಿಟಲ್ ಜ್ಞಾನಭಾವ ಮತ್ತು ಮಾರುಕಟ್ಟೆಯ ಸಂಪರ್ಕಗಳು ಇನ್ನೂ ಕೆಲವು ಕೈಗಾರಿಕೆಗೆ ಅಡೆತಡೆಯಾಗಿದೆ ಈ ಹಿನ್ನಲೆ ಸರ್ಕಾರದ ಜಾಗ್ರತೆ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ

ಅರ್ಜಿ ಪ್ರಕ್ರಿಯೆ ಸರಳ

ಫಲಾನುಭವಿಗಳು ಸಮೀಪದ ಕಾಮನ್ ಸರ್ವಿಸ್ ಸೆಂಟರ್ ಮೂಲಕ ಅರ್ಜಿ ಸಲ್ಲಿಸಬಹುದು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮತ್ತು ಮೊಬೈಲ್ ಸಂಖ್ಯೆ ಯೊಂದಿಗೆ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ

ಸಮಾರೋಪ

ಒಟ್ಟಿನಲ್ಲಿ PM ವಿಶ್ವಕರ್ಮ ಯೋಜನೆಯ ಪರಂಪರೆಯ ಕೈಗಾರಿಕರಿಗೆ ಹೊಸ ಜೀವನ ತುಂಬುವ ಪ್ರಯತ್ನವಾಗಿದೆ ಆರ್ಥಿಕ ಸಹಾಯ, ತರಬೇತಿ ಮತ್ತು ಮಾರುಕಟ್ಟೆಯ ಬೆಂಬಲದ ಮೂಲಕ ಈ ಯೋಜನೆ ಲಕ್ಷಾಂತರ ಕುಟುಂಬಗಳ ಬದುಕಿನಲ್ಲಿ ಬದಲಾವಣೆ ತರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ ಈ ಯೋಜನೆ 2023 ರಲ್ಲಿ ಪ್ರಾರಂಭಗೊಂಡಿದ್ದು ವಿಶೇಷವಾಗಿ ಪರಂಪರೆಯ ವೃತ್ತಿಗಳನ್ನು ನಡೆಸುತ್ತಿರುವ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ . ಕಮ್ಮಾರರು , ಬಡಗಿಗಳು, ಕುಂಬಾರರು, ಚರ್ಮಗಾರರು, ಬಾರ್ಬರ್ ಗಳು ಸೇರಿದಂತೆ ಹಲವು ವರ್ಗದ ಕೈಗಾರಿಕರು ಈ ಯೋಜನೆಯ ಪ್ರಮುಖ ಲಾಭಾರ್ಥಿಗಳಾಗಿದ್ದಾರೆ

ನೆನಪಿರಲಿ

Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

Leave a Comment