ಕೇಂದ್ರ ಸರ್ಕಾರ ಮಹಿಳಾ ಉದ್ಯಮಿಗಳಿಗಾಗಿ ಶಿ – ಮಾರ್ಟ್ ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸಲಿದೆ. ಇದು ಮಹಿಳೆಯರ ಸ್ವಾವಲಂಬನೆ ಮತ್ತು ಆದಾಯ ಹೆಚ್ಚಳಕ್ಕೆ ನೆರವಾಗಲಿದೆ ಸ್ವ ಸಹಾಯಕ ಗುಂಪುಗಳ ಮೂಲಕ ಸಮುದಾಯ ಮಾಲೀಕತ್ವದ ಮಳಿಗೆಗಳು ಕಾರ್ಯನಿರ್ವಹಿಸಲಿದೆ ಈ ಮಳಿಗೆಗಳು ಮಹಿಳಾ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶ , ಬ್ರ್ಯಾಂಡಿಂಗ್ ಮತ್ತು ಸುಸ್ಥಿರ ಆದಾಯವನ್ನು ಒದಗಿಸಲಿದೆ ತಂತ್ರಜ್ಞಾನದ ಸಹಾಯದಿಂದ ಮಧ್ಯವರ್ತಿಗಳಿಲ್ಲದೆ ನೇರ ಮಾರಾಟಕ್ಕೆ ಒತ್ತು ನೀಡಲಾಗುವುದು
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ವಿಷೇಶ ಯೋಜನೆಯನ್ನು ಘೋಷಿಸಿದೆ ಲಕ್ಷದೀಪತಿ ದೀದಿ ಯೋಜನೆಯ ಯಶಸ್ಸಿನ ಬಳಿಕ ಮಹಿಳೆಯರನ್ನು ಉದ್ಯಮದಾರರನ್ನಾಗಿಸಲು ಉದ್ದೇಶದೊಂದಿಗೆ ಶಿ ಮಾರ್ಟ್ ಅಥವಾ ಸ್ವ ಸಹಾಯಕ ವಾಣಿಜ್ಯೋದ್ಯಮಿ ಶಿ (ಮಾರ್ಟ್). ಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸುವ ಮೂಲಕ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಗ್ರಾಮೀಣ ಭಾಗದ ಮಹಿಳೆಯರು ಕ್ಲಸ್ಟರ್ ಮಟ್ಟದಲ್ಲಿ ಶಿ ಮಾರ್ಟ್ ಆರಂಭಿಸಲು ಸರ್ಕಾರ ನೆರವು ನೀಡಲಿದೆ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಪ್ರೋತ್ಸಾಹದ ಜೊತೆಗೆ ಅವರ ಆದಾಯ ಹೆಚ್ಚಿಸುವುದು ಯೋಜನೆಯ ಗುರಿಯಾಗಿದೆ ಈ ಹಿನ್ನಲೆಯಲ್ಲಿ ಏನಿದು ಶಿ ಮಾರ್ಟ್ ಯೋಜನೆ ? ಇದನ್ನು ಆರಂಭಿಸುವುದು ಹೇಗೆ ? ಹೇಗೆ ಕಾರ್ಯ ನಿರ್ವಹಿಸಲಿದೆ ? ಇತ್ಯಾದಿ ಮಾಹಿತಿಗಳನ್ನು ತಿಳಿಯೋಣ
ಏನಿದು ಶಿ ಮಾರ್ಟ್ ಯೋಜನೆ. ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ ಗ್ರಾಮೀಣ ಮಹಿಳಾ ನೇತೃತ್ವದ ಉದ್ಯಮಿಗಳಿಗಾಗಿ ಶಿ ಮಾರ್ಟ್ ಸ್ಥಾಪಿಸುವ ಪ್ರಸ್ತಾವನ್ನು ಘೋಷಿಸಿದ್ದಾರೆ ಅದರಂತೆ ಶಿ ಮಾರ್ಟ್ ಹೆಸರಿನಲ್ಲಿ ಸಮುದಾಯ ಮಾಲೀಕತ್ವದ ಚಿಲ್ಲರೆ ಮಳಿಗೆಗಳನ್ನು ಸ್ಥಾಪಿಸಲು ಸರ್ಕಾರ ನೆರವು ನೀಡಲಿದೆ ಶಿ ಮಾರ್ಟ್ ನಲ್ಲಿರುವ ‘ ಶಿ ‘ ಎಂದರೆ ಸ್ವ ಸಹಾಯಕ ಉದ್ಯಮಿ ಈ ಉಪಕ್ರಮವು ಮಹಿಳಾ ಉದ್ಯಮಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶ, ಬ್ರ್ಯಾಂಡಿಂಗ್ ಅವಕಾಶಗಳು ಮತ್ತು ಸುಸ್ಥಿರ ಆದಾಯದ ಮಾರ್ಗಗಳನ್ನು ಒದಗಿಸುವುದರ ಜೊತೆಗೆ ಸ್ವ ಸಹಾಯಕ ಗುಂಪುಗಳಂತಹ ತಳಮಟ್ಟದ ಸಂಸ್ಥೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ವ್ಯಾಪಕ ವ್ಯಾಪ್ತಿಯನ್ನು ಖಚಿತ ಪಡಿಸಿಕೊಳ್ಳಲು ಪ್ರತಿ ಜಿಲ್ಲೆಯಲ್ಲೂ ಶಿ ಮಾರ್ಟ್ ಸ್ಥಾಪನೆಯನ್ನು ಯೋಜಿಸಲಾಗಿದೆ
ಯೋಜನೆಯ ಪ್ರಮುಖ ಅಂಶಗಳು
* ಸ್ವ ಸಹಾಯಕ ಉದ್ಯಮಿ ಮಾರ್ಟ್ ಗಳನ್ನು ಕ್ಲಸ್ಟರ್ ಮಟ್ಟದ ಒಕ್ಕೂಟಗಳೊಳಗೆ ಸಮುದಾಯ ಸ್ವಾಮ್ಯದ ಚಿಲ್ಲರೆ ಮಾರಾಟದ ಮಳಿಗೆಗಳಾಗಿ ಸ್ಥಾಪಿಸಲಾಗುವುದು
* ಈ ಉಪಕ್ರಮವು ಗ್ರಾಮೀಣ ಮಹಿಳಾ ನೇತೃತ್ವದ ಉದ್ಯಮಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶವನ್ನು ಸೃಷ್ಟಿಸುವ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚು ಪ್ರಚಾರವನ್ನು ನೀಡುವ ಗುರಿಯನ್ನು ಹೊಂದಿದೆ
* ಈ ಯೋಜನೆಯು ಮಹಿಳಾ ವ್ಯಾಪಾರ ಮಾಲೀಕರು ದೊಡ್ಡ ಮಾರುಕಟ್ಟೆಗಳನನ್ನು ತಲುಪಲು ತಮ್ಮ ಬ್ರ್ಯಾಂಡ್ ಗಳನ್ನು ನಿರ್ಮಿಸಲು ಮತ್ತು ಸ್ಥಿರವಾದ ಆದಾಯದ ಮೂಲಗಳನ್ನು ರಚಿಸಲು ನೆರವಾಗಲಿದೆ
* ಅದೇ ಸಮಯದಲ್ಲಿ ಸ್ವ ಸಹಾಯಕ ಗುಂಪುಗಳಂತಹ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುತ್ತದೆ ಈಗಾಗಲೇ ಲಕ್ಷದೀಪತಿ ದೀದಿ ಅಥವಾ ಲಖಪತಿ ದೀದಿ ಯೋಜನೆಯಡಿ 1.5 ಕೋಟಿ ಮಹಿಳೆಯರು ಲಕ್ಷಡಿಪತಿಗಳಾಗಿದ್ದು 2027 ಮಾರ್ಚ್ ವೇಳೆಗೆ 3 ಕೋಟಿ ಹೆಚ್ಚಿಸುವ ಗುರಿಯನ್ನು kedra ಸರ್ಕಾರ ಹೊಂದಿದೆ
ಶಿ ಮಾರ್ಟ್ ಯೋಜನೆಯ ಪ್ರಮುಖ ಪ್ರಯೋಜನಗಳು
* ಮಾರುಕಟ್ಟೆ ಪ್ರವೇಶ.ಮತ್ತು ಬ್ರ್ಯಾಂಡಿಂಗ್
ಗ್ರಾಮೀಣ ಮತ್ತು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಉತ್ತೇಜಿಸಲು ಅವುಗಳ ಪ್ರಚಾರ ಮತ್ತು ಬ್ರ್ಯಾಂಡಿಂಗ್ ಅನ್ನು ಸುಧಾರಿಸಲು ಮಹಿಳಾ ಸ್ವ ಸಹಾಯಕ ಗುಂಪುಗಳಿಗೆ ಈ ಮಾರುಕಟ್ಟೆಗಳು ಮಿಲಸದ ವೇದಿಕೆಯನ್ನು ಒದಗಿಸುತ್ತವೆ
* ಸಮುದಾಯದ ಮಾಲೀಕತ್ವ
ಈ ಚಿಲ್ಲರೆ ಮಾರಾಟದ ಮಳಿಗೆಗಳು ಸಮುದಾಯದ ಒಡೆತನದಲ್ಲಿರುತ್ತವೆ ಮತ್ತು ಕ್ಲಸ್ಟರ್ ಮಟ್ಟದ ಒಕ್ಕೂಟಗಳೊಳಗೆ ಕಾರ್ಯನಿರ್ವಹಿಸುತ್ತವೆ ಲಾಭ ಮತ್ತು ನಿರ್ವಹಣೆಯು ಸ್ಥಳೀಯ ಸಮುದಾಯಗಳೊಳಗೆ ಉಳಿಯುವುದನ್ನು ಖಾತ್ರಿಪಡಿಸುತ್ತದೆ
* ಹೆಚ್ಚುವರಿ ಹಣಕಾಸು ಸೌಲಭ್ಯ
ಈ ಯೋಜನೆಯು ಮಹಿಳೆಯರು ತಮ್ಮ ವ್ಯವಹಾರಗನ್ನು ಜೀವನಾಧಾರದ ಮಟ್ಟವನ್ನು ಮೀರಿ ಹೆಚ್ಚಿಸಲು ಸಹಾಯ ಮಾಡಲು ನವೀನ ಮತ್ತು ವರ್ಧಿತ ಹಣಕಾಸು ಸೌಲಭ್ಯಗಳನ್ನು ಬಳಸುತ್ತದೆ
* ತಾಂತ್ರಿಕ ಬೆಂಬಲ :
ಗ್ರಾಮೀಣ ಉದ್ಯಮಗಳಿಗೆ ನೈಜ್ಯ ಸಮುದಾಯದ ಮಾರುಕಟ್ಟೆ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪೂರೈಕೆ ಸರಪಳಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಲು ಕೃತಕ ಬುದ್ಧಿಮತ್ತೆ ಯಂತ್ರ ಕಲಿಕೆ ಮತ್ತು ಬ್ಲ್ಯಾಕ್ ಚೈನ್ ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಗುರಿಯನ್ನು ಶಿ ಮಾರ್ಟ್ ಹೊಂದಿದೆ
* ಮಧ್ಯವರ್ತಿ ಅವಲಂಬನೆ ಇಲ್ಲ
ನೇರ ಚಿಲ್ಲರೆ ಮಾರಾಟ ಜಲ ಸ್ಥಾಪಿಸುವ ಮೂಲಕ ಈ ಉಪಕ್ರಮವು ಮಹಿಳಾ ನಿರ್ಮಾಪಕರಿಗೆ ಮಧ್ಯವರ್ತಿಗಳನ್ನು ಕಡೆಗಣಿಸಲು ಸಹಾಯ ಮಾಡುತ್ತದೆ ಇದು ಅವರ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ
*. ಸುಸ್ಥಿರ ಆದಾಯ
ಸುಸ್ಥಿರ ದೀರ್ಘಾವಧಿಯ ಅಡ್ಯದ ಮಾರ್ಗಗಳನ್ನು ಸೃಷ್ಟಿಸುವುದು ಲಕ್ಷಾಂತರ ಮಹಿಳೆಯರಿಗೆ 1 ಲಕ್ಷ ರೂಪಾಯಿ ವಾರ್ಷಿಕ ಮನೆಯ ಆದಾಯದ ಮಿತಿಯನ್ನು ಸಾಧಿಸಲು ಮತ್ತು ಮೀರಿಸಲು ಸಹಾಯ ಮಾಡುವುದು ಯೋಜನೆಯ ಪ್ರಾಥಮಿಕ ಗುರಿಯಾಗಿದೆ
ಶಿ ಮಾರ್ಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ?
* ಈ ಮಳಿಗೆಗಳು ಯಾವುದೇ ಒಬ್ಬ ಮಹಿಳೆಯ ಹೆಸರಿನಲ್ಲಿ ಅಥವಾ ವೈಯಕ್ತಿಕವಾಗಿ ಸ್ಥಾಪನೆ ಮಾಡಲು ಅವಕಾಶ ಇರುವುದಿಲ್ಲ
* ಬದಲಾಗಿ ಇವು ಸಮುದಾಯದ ಆಧಾರಿತವಾಗಿವೆ. ಶಿ ಮಾರ್ಟ್ ಗಳ ಸಮೂಹ ಮಟ್ಟದಲ್ಲಿ ಮಹಿಳೆಯರು ನಿರ್ವಹಿಸುವ ಸಮುದಾಯದ ಮಾಲೀಕತ್ವದ ಚಿಲ್ಲರೆ ಮಾರಾಟದ ಮಳಿಗೆಗಳಾಗಿ ತೆರೆಯಲಾಗುತ್ತದೆ
* ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಶಿ ಮಾರ್ಟ್ ಗಳು ತಮ್ಮದೇ ಆದ ಮಾರಾಟದ ಜಾಲವನ್ನು ಹೊಂದಿದೆ
* ಶಿ ಮಾರ್ಟ್ ಗಳು ಮಹಿಳಾ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು (ಕರಕುಶಲ ವಸ್ತುಗಳು ಹಾಗೂ ಸಾವಯವ ಉತ್ಪನ್ನಗಳಂತಹ ) ನೇರವಾಗಿ ಗ್ರಾಹಕರಿಕೆ ಮಾರಾಟ ಮಾಡಲು ಸಂಘಟಿತ ವಿಶ್ವಾಸಾರ್ಹ ವೇದಿಕೆಯನ್ನು ಒದಗಿಸುತ್ತದೆ
* ರಚನಾತ್ಮಕ ಪೂರೈಕೆ ಸರಪಳಿಯನ್ನು ರಚಿಸಲು ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟೀಯ ಗ್ರಾಮೀಣ ಜೀವನೋಪಾಯ ಮಿಷನ್ ಮತ್ತು ಲಿಕ್ಪತಿ ದೀದಿ ಉಪಕ್ರಮದಂತಹ ಅಸ್ತಿತ್ವದಲ್ಲಿರುವ ಜಾಲಗಳನ್ನು ಮಾರುಕಟ್ಟೆಗಳು ಬಳಸಿಕೊಳ್ಳುತ್ತವೆ
* ಈ ಯೋಜನೆಯು ನೈಜ್ಯ ಸಮುದಾಯದ ಮಾರುಕಟ್ಟೆ ಬೇಡಿಕೆಯನ್ನು ಪತ್ತೆಹಚ್ಚಲು ಕೃತಕ ಬುದ್ಧಿಮತ್ತೆಯ ಯಂತ್ರ ಕಲಿಕೆ ಮತ್ತು ಬ್ಲ್ಯಾಕ್ ಚೈನ್ ಅನ್ನು ಬಳಸಲು ಯೋಜಿಸಲಾಗಿದೆ ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆಯ ಅಡೆತಡೆಗಳಿಗೆ ಸಿದ್ಧರಾಗಲು ಮತ್ತು ಪ್ರಸ್ತುತ ಪ್ರವೃತ್ತಿಗಳ ಆಧಾರದ ಮೇಲೆ ತಮ್ಮ ದಾಸ್ತಾನುಗಳನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ
ಶಿ ಮಾರ್ಟ್ ಆರಂಭಿಸುವುದು ಹೇಗೆ ?
ಶಿ ಮಾರ್ಟ್ ಅರ್ಜಿಗಳಿಗಾಗಿ ನಿರ್ದಿಷ್ಟ ಆನ್ಲೈನ್ ಪೋರ್ಟಲ್ ಇನ್ನೂ ಆರಂಭಿಸಲಾಗಿಲ್ಲ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿ ಇದ್ದು ಕೇಂದ್ರ ಸರ್ಕಾರದಿಂದ ಮಾರ್ಗಸೂಚಿಗಳು ಪ್ರಕಟಗೊಳ್ಳಬೇಕಿದೆ. ಇವು ಸಮುದಾಯದ ಆಧಾರಿತ ಮಳಿಗೆಗಳಾಗಿರುವ ಕಾರಣ ಯೋಜನೆಗೆ ಸೇರಲು ನೀವು ರಾಷ್ಟೀಯ ಗ್ರಾಮೀಣ ಜೀವನೋಪಾಯ ಮಿಷನ್ ಉದ್ಯಮ ಮಾಲೀಕರಾಗಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಸೌಭಾಗ್ಯ ದೀದಿಗಳನ್ನು ಗುರುತಿಸುತ್ತದೆ ಆಯ್ದ ಸದಸ್ಯರು ತಮ್ಮ ವ್ಯವಹಾರ ಚಟುವಟಿಕೆಗಳನ್ನು ನಿವಾರಿಸುವ ಲಖ್ಪತಿ ಯೋಜನೆಯನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ ಅರ್ಜಿಗಳು ಮತ್ತು ನಿವಾರಣೆಯ ಪ್ರಾಥಮಿಕವಾಗಿ ಕ್ಲಸ್ಟರ್ ಲೆವೆಲ್ ಫೇಡರೆಷನ್ಸ್ ಮೂಲಕ ನಡೆಯುತ್ತದೆ ಇದು ಹೊಸ ಚಿಲ್ಲರೆ ಮಾರುಕಟ್ಟೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ
ನೆನಪಿರಲಿ:
Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು