Telegram Join My Telegram WhatsApp Join My WhatsApp

ಪ್ರಧಾನ ಮಂತ್ರಿ ಮುದ್ರಾ ಯೋಜನೆ! ಯೋಜನೆಯ ವಿಶೇಷತೆಗಳು ಏನು ? ಯಾರಿಗೆ ಲಾಭ ? ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಭಾರತ ಸರ್ಕಾರದ ಮಹತ್ವಂಕಾಶಿಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು  Government of India 2015 ಏಪ್ರಿಲ್ 15 ರಂದು ಪ್ರಾರಂಭಿಸಿತು. ದೇಶದ ಸಣ್ಣ ವ್ಯಾಪಾರಿಗಳು ಸ್ವಯಂ ಉದ್ಯೋಗಿಗಳು ಮತ್ತು ಯುವ ಉದ್ಯಮಿಗಳಿಗೆ ಆರ್ಥಿಕ ಸಹಾಯ ನೀಡುವುದು ಇದರ ಮುಖ್ಯ ಉದ್ದೇಶವಾಗಿ  ಬ್ಯಾಂಕ್ ಗಳಿಂದ ಸಾಲ ಪಡೆಯಲು ಕಷ್ಟಪಡುವ ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡಲು ಈ ಯೋಜನೆಯು ಜಾರಿಗೊಂಡಿದೆ

ಯೋಜನೆಯ ಮುಖ್ಯ ಉದ್ದೇಶ :

ಮುದ್ರಾ ಯೋಜನೆಯ ಮುಖ್ಯ ಗುರು ದೇಶದಲ್ಲಿ ಸ್ವ ಉದ್ಯೋಗವನ್ನು ಉತ್ತೇಜಿಸುವುದು ಮತ್ತು ಸಣ್ಣ ಉದ್ಯಮಗಳನ್ನು ಬೆಳೆಸುವುದು ಈ ಯೋಜನೆಯ ಮೂಲಕ ನಿರುದ್ಯೋಗವನ್ನು  ಕಡಿಮೆ ಮಾಡುವುದು , ಯುವಕರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು , ಸಣ್ಣ ಮತ್ತುಹ್ಮದ್ಯಂ ಉದ್ಯಮಗಳಿಗೆ ಬೆಂಬಲ ನೀಡುವುದು , ಗ್ರಾಮೀಣ ಮತ್ತು ನಗರ ಪ್ರದೇಶಗಳ ಆರ್ಥಿಕ  ಅಭಿವೃದ್ಧಿ ಮಾಡುವುದು

ಮುದ್ರಾ ಎಂದರೇನು ?

MUDRA ಎಂದರೆ micro  units development and refinance agency. ಇದು ಸಣ್ಣ ಉದ್ಯಮಗಳಿಗೆ ಸಾಲ ನೀಡುವ ಬ್ಯಾಂಕ್ ಗಳಿಗೆ ಆರ್ಥಿಕ ಬೆಂಬಲ ನೀಡುವ ಸಂಸ್ಥೆಯಾಗಿದೆ . ಇದರ ಮೂಲಕ ಬ್ಯಾಂಕ್ ಗಳು ಸುಲಭವಾಗಿ ಸಣ್ಣ ಉದ್ಯಮಿಗಳಿಗೆ ಸಾಲ ನೀಡಬಹುದು

ಸಾಲದ ವರ್ಗಗಳು :

1. ಶಿಶು : ₹50,000 ವರೆಗೆ ಸಾಲ , ಹೊಸ ಉದ್ಯಮ ಆರಂಭಿಸಲು ಸೂಕ್ತ , ಪ್ರಾರಂಭಿಕ ಹಂತದ ಉದ್ಯಮಿಗಳಿಗೆ ಸಹಕಾರಿ

2. ಕಿಶೋರ್ : ₹50,000. ರಿಂದ ₹ 5,00,000 ಲಕ್ಷದ  ವರೆಗೆ ,  ಈಗಾಗಲೇ ಆರಂಭಿಸಿದ ಉದ್ಯಮವನ್ನು ವಿಸ್ತರಿಸಲು

3. ತರುಣ್:  ₹5,00,000 ರಿಂದ 15 ಲಕ್ಷದ ವರೆಗೆ , ದೊಡ್ಡ ಮಟ್ಟದಲ್ಲಿ ವ್ಯವಹಾರ ವಿಸ್ತರಿಸಲು

ಅರ್ಹತೆ :  ( eligibility)

I ಯೋಜನೆಯಡಿ ಸಾಲ ಪಡೆಯಲು  : ಭಾರತೀಯ ನಾಗರಿಕರಾಗಿರಬೇಕು  ವಯಸ್ಸು 18 ವರ್ಷಕ್ಕಿಂತ ಹೆಚ್ಚು ಇರಬೇಕು , ಸಣ್ಣ ವ್ಯವಹಾರ ಅಥವಾ ಉದ್ಯಮ ಆರಂಭಿಸುವ ಉದ್ದೇಶ ಇರಬೇಕು , ಕೃಷಿ ಹೊರತುಪಡಿಸಿ ಇನ್ನಿತರೆ ಚಟುವಟಿಕೆಗಳಿಗೆ ಸಾಲ ನೀಡಲಾಗುತ್ತದೆ  ಉದಾ : ಅಂಗಡಿ , ಹೋಳಿಗೆ ಟ್ರಾನ್ಸ್ಪೋರ್ಟ್, ಸರ್ವಿಸ್ ಸೆಂಟರ್, ಫುಡ್ ಬಿಸಿನೆಸ್ ಮುಂತಾದವು

ಬೇಕಾಗುವ ದಾಖಲೆಗಳು !

ಮುದ್ರಾ ಸಾಲ ಪಡೆಯಲು ಕೆಳಗಿನ ದಾಖಲೆಗಳು ಅಗತ್ಯ

* ಆಧಾರ್ ಕಾರ್ಡ್

* ಪ್ಯಾನ್ ಕಾರ್ಡ್

* ವಿಳಾಸದ ಪುರಾವೆ

* ವ್ಯವಹಾರದ ಯೋಜನೆ

* ಬ್ಯಾಂಕ್ ಖಾತೆಯ ವಿವರ & ಕೆಲವೊಮ್ಮೆ ಹೆಚ್ಚುವರಿ ದಾಖಲೆಗಳನ್ನು ಕೇಳಬಹುದು

ಸಾಲ ಪಡೆಯುವ ವಿಧಾನ:-

1. ಸಮೀಪದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ  ಭೇಟಿ ನೀಡಬೇಕು ,

2. ಮುದ್ರಾ ಲೋನ್ ಅರ್ಜಿ ಫಾರ್ಮ್ ಫಿಲ್ ಆಫ್ ಮಾಡಬೇಕು

3. ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು

4. ಬ್ಯಾಂಕ್ ಪರಿಶೀಲನೆ ನಂತರ ಸಾಲ ಮಂಜೂರು ಮಾಡಲಾಗುತ್ತದೆ

ಈ ಯೋಜನೆಯಡಿ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್ ಗಳು NBFC ಗಳು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ನೀಡುತ್ತವೆ

ಬಡ್ಡಿದರ ಮತ್ತು ಷರತ್ತುಗಳು

ಬಡ್ಡಿದರ ಬ್ಯಾಂಕ್ ಗಳ ಅನುಗುಣವಾಗಿ ಬದಲಾಗುತ್ತವೆ , ಸಾಮಾನ್ಯವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ , ಯಾವುದೇ ಜಮೀನು ಅಗತ್ಯವಿಲ್ಲ , ಸರಳ ಷರತ್ತುಗಳು

MUDRA card !

ಮುದ್ರಾ ಯೋಜನೆಯಡಿ ಸಾಲ ಪಡೆದವರಿಗೆ  mudra card  ನೀಡಲಾಗುತ್ತದೆ  ಇದು ಡೆಬಿಟ್ ಕಾರ್ಡ್ ನಂತೆ ಕಾರ್ಯನಿರ್ವಹಿಸುತ್ತದೆ ಇದರಿಂದ ಹಣವನ್ನು ಸುಲಭವಾಗಿ ತೆಗೆಯಬಹುದು , ವ್ಯವಹಾರಕ್ಕೆ ಬೇಕಾದ ಖರ್ಚುಗಳನ್ನು ನಿರ್ವಹಿಸಬಹುದು

ಯೋಜನೆಯ ಪ್ರಯೋಜನ !

ಜಮೀನು ಇಲ್ಲದೆಯೇ ಸಾಲ , ಸಣ್ಣ ಉದ್ಯಮಗಳಿಗೆ ದೊಡ್ಡ ಬೆಂಬಲ , ಯುವಕರಿಗೆ ಉದ್ಯೋಗ ಅವಕಾಶ , ಮಹಿಳಾ ಉದ್ಯಮಿಗಳಿಗೆ ವಿಶೇಷ ಪ್ರೋತ್ಸಾಹ ,  ಆರ್ಥಿಕ ಸ್ವಾವಲಂಬನೆ

ಮಹಿಳೆಯರಿಗೆ ವಿಷೇಶ ಸೌಲಭ್ಯ :

ಮುದ್ರಾ ಯೋಜನೆಯಲ್ಲಿ ಮಹಿಳೆಯರಿಗೆ ವಿಷೇಶ ಪ್ರೋತ್ಸಾಹ ನೀಡಲಾಗುತ್ತದೆ ಕಡಿಮೆ ಬಡ್ಡಿ ದರ ಮತ್ತು ಸುಲಭ ಸಾಲ ಸೌಲಭ್ಯಗಳ ಮೂಲಕ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲಾಗುವುದು

ಯೋಜನೆಯ ಮಹತ್ವ :

ಈ ಯೋಜನೆ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಲಕ್ಷಾಂತರ ಯುವಕರು ತಮ್ಮ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಯೋಜನೆಯು ಬಹಳ ಪರಿಣಾಮಕಾರಿಯಾಗಿದೆ

ಸವಾಲುಗಳು ?

ಕೆಲವು ಸಂಧರ್ಭಗಳಲ್ಲಿ ಬ್ಯಾಂಕ್ ಗಳು ಸಾಲ ನೀಡಲು ವಿಳಂಬ ಮಾಡಬಹುದು , ವ್ಯವಹಾರ ಯೋಜನೆ ಸರಿಯಾಗಿರದ್ದಿದ್ದರೆ  ಸಾಲ ಸಿಗುವುದು ಕಷ್ಟ  , ಸಾಲವನ್ನು ಸರಿಯಾಗಿ ಬಳಸದೆ ಹೋದರೆ ನಷ್ಟ ಅನುಭವಿಸಬಹುದು

ಯಶಸ್ಸಿನ ಸಲಹೆಗಳು :

ಉತ್ತಮ ವ್ಯವಹಾರ ಯೋಜನೆಯನ್ನು ತಯಾರಿಸಿ , ಹಣವನ್ನು ಸರಿಯಾಗಿ ಬಳಸಿ , ಮಾರುಕಟ್ಟೆ ಅಧ್ಯಯನ ಮಾಡಿ , ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿ ,

ಸಮಾರೋಪ :

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಯುವಕರಿಗೆ ಸ್ವ ಉದ್ಯೋಗ ಮತ್ತು ಉದ್ಯಮಶೀಲತೆಯ ದಾರಿಯನ್ನು ತೆರೆದ ಮಹತ್ವದ ಯೋಜನೆಯಾಗಿದೆ , ಕಡಿಮೆ ಬಡ್ಡಿದರ , ಜಮೀನು ಇಲ್ಲದೆಯೇ ಸಾಲ , ಮತ್ತು ಸರಳ ಅರ್ಜಿ ಪ್ರಕ್ರಿಯೆ ಇಂದ ಈ ಯೋಜನೆ ಬಹಳ ಜನಪ್ರಾಯವಾಗಿದೆ . ಯುವಕರು ಈ ಯೋಜನೆಯನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹ  ಈ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ

ನೆನಪಿರಲಿ

ನಿಮ್ಮ vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು

 

 

Leave a Comment