Telegram Join My Telegram WhatsApp Join My WhatsApp

ಪಿಎಂ ವಿಶ್ವಕರ್ಮ ಯೋಜನೆ ಎರಡನೇ ಹಂತದಲ್ಲಿ ಬಂಪರ್ ಕೊಡುಗೆ ಪೂರ್ತಿ ಓದಿ

ಪಿಎಂ ವಿಶ್ವಕರ್ಮಯೋಜನೆ ಫಲಾನುಭವಿಗಳಿಗೆ ಎರಡನೇ ಹಂತದಲ್ಲಿ ಬಂಪರ್ ಕೊಡುಗೆ 

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪಿಎಂ ವಿಶ್ವಕರ್ಮ ಯೋಜನೆ ಮೊದಲನೇ ಹಂತದಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಆದೇಶ ಹೊರಡಿಸಿದೆ ಎಂಬುದು ನಿಮಗೆ ಗೊತ್ತಿದೆ ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೆಲವರ ಅರ್ಜಿಗಳು ಇನ್ನೂ ನೊಂದಣಿ ಆಗಿಲ್ಲ

ಏನದು ಬಂಪರ್ ಕೊಡುಗೆ ಇದರಿಂದ ಯಾರಿಗೆ ಲಾಭ 

ಮಧ್ಯಮ ವರ್ಗದ ಪಾಲಿಗೆ ಈ ಯೋಜನೆ ಒಂದು ಬಂಪರ್ ಗಿಫ್ಟ್ ಆಗಿದೆ. ಸಬ್ಸಿಡಿ ಮೂಲಕ ಕನಿಷ್ಠ 50000ರಿಂದ ಸುಮಾರು 3ಲಕ್ಷ ವರೆಗೆ ಸಾಲ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಎಲ್ಲಿ 

೧ ಅರ್ಜಿ ಸಲ್ಲಿಸಲು ಹತ್ತಿರದ ಆನ್ಲೈನ್ ಸೆಂಟರ್ (online centre) ಗೆ ಹೋಗಿ ನಿಮ್ಮ ಅರ್ಜಿ ಸಲ್ಲಿಸಬಹುದು

E.g ಗ್ರಾಮ ಒನ್.ಬಾಪೂಜಿ ಸೇವಾ ಕೇಂದ್ರ. ಬೆಂಗಳೂರು ಒನ್. ಸೆಂಟರ್ಸ್ ಅಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳು 

ಆಧಾರ್ ಕಾರ್ಡ್ (aadhar card

ಪಡಿತರ ಚೀಟಿ (ration card)

ಪಾನ್ ಕಾರ್ಡ್ (pan card)

ಬ್ಯಾಂಕ್ ಪಾಸ್ಬುಕ್ (passbook)

ಆಧಾರ್ ಸಂಖ್ಯೆಯಲ್ಲಿ ಲಿಂಕ್ ಇರುವ ಮೊಬೈಲ್ ಸಂಖ್ಯೆ

ಜೊತೆಗೆ ವೋಟರ್ ಐಡಿ . ಎಲ್ಲ ದಾಖಲೆ ಜೊತೆಗೆಆನ್ಲೈನ್ಅರ್ಜಿಸಲ್ಲಿಸಿ

ಪಿಎಂ ವಿಶ್ವಕರ್ಮ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ ನಂತರ.30 ಕೆಲಸದ ದಿನಗಳಲ್ಲಿ ನಿಮ್ಮ ಅರ್ಜಿ ನಿಮ್ಮ ಗ್ರಾಮ ಪಂಚಾಯತ್ ನಲ್ಲಿ ನಿಮ್ಮ ಅರ್ಜಿ ಹಸ್ತಾಂತರ ವಾಗುತ್ತದೆ

ಗ್ರಾಮಪಂಚಾಯತ್ ನಲ್ಲಿ ನಿಮ್ಮ ಅರ್ಜಿ ಪರಿಶೀಲನೆ ಮಾಡಿದ ನಂತರ ಮುಂದಿನ ಹಂತಕ್ಕೆ ವರ್ಗಾವಣೆ ಮಾಡಲಾಗುತ್ತದೆ  ಮೊದಲನೇ ಹಂತ ಮುಗಿಯುತ್ತದೆ

ಎರಡನೇ ಹಂತದಲ್ಲಿ ಜಿಲ್ಲಾ ಪಂಚಾಯತ್ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ ಜಿಲ್ಲಾ ಪಂಚಾಯತ್ ನಲ್ಲಿ ಅರ್ಜಿ ಪರಿಶೀಲನೆಯಾಗಲೂ ಸುಮಾರು 20ರಿಂದ 25ದಿನಗಳು ಸಮಯವಾಗುತ್ತದೆ . ನಂತರ ಜಿಲ್ಲಾ ಪಂಚಾಯತ್ ಹಂತದಲ್ಲಿ ಪರಿಶೀಲನೆ ಮುಗಿದ ನಂತರ ಮುಂದಿನ ಹಂತಕ್ಕೆ ವರ್ಗಾವಣೆ ಮಾಡಲಾಗುತ್ತದೆ

ರಾಜ್ಯ ಸರ್ಕಾರ ಹಂತದಲ್ಲಿ ಅರ್ಜಿ ಪರಿಶೀಲನೆ ನಡೆಸಿ ಪರಿಶೀಲನೆ ಮಾಡಿದ ನಂತರ ರಾಜ್ಯ ಸರ್ಕಾರ ರಿಂದ ಕೇಂದ್ರ ಸರ್ಕಾರ ಕ್ಕೆ ಅರ್ಜಿ ಹಸ್ತಾಂತರ ವಾಗುತ್ತದೆ ಕೇಂದ್ರ ಸರ್ಕಾರಕ್ಕೆ ಹಸ್ತಾಂತರವಾದ ನಂತರ 20ದಿನಗಳಲ್ಲಿ ನಿಮ್ಮ ಅರ್ಜಿ ಯಶಸ್ವಿಯಾಗಿ ನೊಂದಣಿ ಆಗುತ್ತದೆ

ನೊಂದಣಿ ನಂತರ ಯೋಜನೆಯ ಲಾಭಗಳು ಯಾವುವು 

ಮೊದಲಿಗೆ 15 ದಿನಗಳ ಬೇಸಿಕ್ ಟ್ರೈನಿಂಗ್ ಇರುತ್ತದೆ  ಪ್ರತಿ ದಿನ 500ರಂತೆ ದಿನಗೂಲಿ ಇರುತ್ತದೆ ಟ್ರೈನಿಂಗ್ ಮುಗಿದ ಬಳಿಕ ಸ್ಕಿಲ್ ಟ್ರೈನಿಂಗ್ ಸಾರ್ಕ್ಟಿಫಿಕೆ ನೀಡುತ್ತಾರೆ ಟ್ರೈನಿಂಗ್ ಮುಗಿದ ನಂತರ ಮುಂದಿನ 14 ದಿನಗಳಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ನಂತರ ನೀವು ನೋಂದಾಯಿತ ಬ್ಯಾಂಕ್ ನಲ್ಲಿ 1ಲಕ್ಷ ಸಾಲ ಸೌಲಭ್ಯವನ್ನು ಪಡೆಯಲು ಹರ್ಹತೇ ಪಡೆಯುತ್ತೀರಿ ನಿಮ್ಮ ಬ್ಯಾಂಕಿನ ಸಿಬ್ಬಂದಿ ನಿಮಗೆ ಕರೇ ಮಾಡಿ ಮಾಹಿತಿ ನೀಡಬೇಕು ಮಾಹಿತಿ ನೀಡಿದ ನಂತರ ನಿಮ್ಮ ಸಾಲ ಮಂಜೂರು ಮಾಡಲಾಗುತ್ತದೆ ಮಂಜೂರು ಮಾಡಿದನಂತರ 18ತಿಂಗಳು ಮರುಪಾವತಿ ಸಮಯ ನೀಡುತ್ತದೆ

ವಿಶೇಷವಾಗಿ 15000 toolkit ಸಹಾಯ ಧನ ಪಡೆಯಬಹುದು 

 

ನಿಮ್ಮ ಅರ್ಜಿ ಸಲ್ಲಿಸಿದ ಮತ್ತು ಅರ್ಜಿ ಯಶಸ್ವಿಯಾಗಿ ನೊಂದಣಿ ಆದ ನಂತರ toolkit ಪಡೆಯಲು ಹರ್ಹತೇ ಪಡೆಯುತ್ತೀರಿ

ಇಂಡಿಯನ್ ಪೋಸ್ಟ್ ಮೂಲಕ ನಿಮ್ಮ ನೋಂದಾಯಿತ ವಿಳಾಸಕ್ಕೆ toolkit ಅನ್ನು ಡೆಲಿವರಿ ಮಾಡ್ತಾರೆ

ಯೋಜನೆಯಲ್ಲಿ ಮೊದಲನೇ ಹಂತದಲ್ಲಿ ಪೂರ್ಣ ಗೊಳಿಸಿದ ನಂತರ ಮುಂದಿನ ಹಂತಕ್ಕೆ ಅಂದರೆ 2ನೇ ಹಂತಕ್ಕೆ ಅರ್ಹತೆ  ಪಡೆಯುತ್ತೀರಿ

2ನೇ ಹಂತದಲ್ಲಿ ಯೋಜನೆ ಲಾಭಗಳೇನು 

ಮೊದಲನೇ ಹಂತದಲ್ಲಿ ಸಾಲ ಸೌಲಭ್ಯವನ್ನು ಪೂರ್ತಿ ಮರುಪಾವತಿ ಮಾಡಿರಬೇಕಾಗುತ್ತದೆ  ಪೂರ್ತಿ ಮರುಪಾವತಿ ಮಾಡಿದ್ದೆ ಆದಲ್ಲಿ 2 ನೇ ಹಂತಕ್ಕೆ ಅರ್ಹತೆ ಪಡೆಯುತ್ತೀರಿ. ಎರಡನೇ ಹಂತದಲ್ಲಿ ಮೊದಲಿಗೆ 15 ದಿನದ ಅಡ್ವಾನ್ ಟ್ರೈನಿಂಗ್ ಪಡೆಯಬೇಕು ಅಡ್ವಾನ್ ಟ್ರೈನಿಂಗ್ ಗೇ ಪ್ರತಿದಿನ 700 ರಂತೆ ದಿನಗೂಲಿ ಇರುತ್ತದೆ 15 ದಿನದ ಅಡ್ವಾನ್ ಟ್ರೈನಿಂಗ್ ಮುಗಿದ ಬಳಿಕ ಯೋಜನೆಯಡಿ 2 ಲಕ್ಷ ರೂಪಾಯಿ ಸಾಲಕ್ಕೆ ನೀವು ಯಶಸ್ವಿಯಾಗಿ ಅರ್ಹತೆ ಪಡೆಯಬಹುದು

 

ವಿಶೇಷ ಸೂಚನೆ 

ನಿಮ್ಮ ಅರ್ಜಿ ಸಲ್ಲಿಸುವ ಮೊದಲು ನಿಮ್ಮ ದಾಖಲೆಗಳನ್ನ ಮೊದಲು ಪರಿಶೀಲನೆ ಮಾಡಿ ನಂತರ ಅರ್ಜಿ ಸಲ್ಲಿಸಿ ನಿಮ್ಮ ದಾಖಲೆಗಳಲ್ಲಿ ನಿಮ್ಮ ಹೆಸರು ಮತ್ತು ತಂದೆಯ ಹೆಸರು ಮತ್ತು ಜನ್ಮ ದಿನಾಂಕ ಸರಿಯಾಗಿರಬೇಕು ಒಂದುವೇಳೆ ದಾಖಲೆ ಯಲ್ಲಿ ಹೆಸರು ಮತ್ತು ತಂದೆಯ ಹೆಸರು ವ್ಯತ್ಯಾಸ ಇದ್ದರೆ ಮೊದಲ ತಿದ್ದುಪಡಿ ಮಾಡಿ ನಂತರ ನೀವು ಅರ್ಜಿ ಸಲ್ಲಿಸಬಹುದು

ನಿಮ್ಮ ಅರ್ಜಿ ಪರಿಶೀಲನೆ ವಿಳಂಬ ಆದರೆ ಏನುಮಾಡಬೇಕು 

ಮೇಲೆ ತಿಳಿಸಿರುವ ಹಂತಗಳಲ್ಲಿ ನಿಮ್ಮ ಅರ್ಜಿ ವಿಳಂಭವದಲ್ಲಿ ನಿಮ್ಮ ದಾಖಲೆ ಗಳು ಸರಿಯಾಗಿ ಇದೆಯೇ ಎಂದು ಪರಿಶೀಲನೆ ಮಾಡಿ ದಾಖಲೆಗಳು ಸರಿ ಇಧರೆ . ಕೆಲವಮ್ಮೆ ತಾಂತ್ರಿಕ ಸಮಸ್ಯೆ ಇರುತ್ತದೆ ಹಾಗಾಗಿ ಅರ್ಜಿ ಪರಿಶೀಲನೆ ತಡವಾಗಬಹುದು

ಟೂಲ್ಕಿಟ್ (TOOLKIT)ಪಡೆಯುವುದು ಹೇಗೆ

ಯಶಸ್ವಿಯಾಗಿ ನೊಂದಣಿ ಆದ ನಂತರ ಮುಂದಿನ ದಿನಗಳಲ್ಲಿ ನಿಮ್ಮ ಬೇಸಿಕ್ ಟ್ರೈನಿಂಗ್ ಮುಗಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ SMS ಮೂಲಕ ಸಂದೇಶ ಕಳುಹಿಸಲಾಗಿದೆ ಮತ್ತು ಲಿಂಕ್ ಅನ್ನು ಸಹ ನೀಡಲಾಗಿದೆ ನಾಲ್ಕು ತರಹದ ಕಿಟ್ಗಳು  ಮುಖ್ಯವಾಗಿ SET-A ಮತ್ತು SET-B ಆಯ್ಕೆಮಾಡಲು ನಿಮಗೆ ಅವಕಾಶ ಕಲ್ಪಿಸುತ್ತಾರೆ ಒಮ್ಮೆ ಆಯ್ಕೆ ಮಾಡಿದ ನಂತರ SMS ಮೂಲಕ ಸಂದೇಶ ಕಳುಹಿಸಲಾಗಿದೆ ನಂತರ ಪಿಎಂ ವಿಶ್ವಕರ್ಮ voucher ಮೂಲಕ 15000 ಗಳ ಯುನಿಕ್ ಕೋಡ್ ಬರುತ್ತೆ    ಸಂದೇಶ ಕಳಿಸಿದ ಬಳಿಕ 15ದಿನಗಳಲ್ಲಿ toolkit ಅನ್ನು ಇಂಡಿಯನ್ ಪೋಸ್ಟ್ ಮೂಲಕ ನಿಮ್ಮ ಅತ್ತಿರದ ಪೋಸ್ಟ್ ಆಫೀಸ್ ಗೆ ಡಿಸ್ಪ್ಯಾಚ್ ಮಾಡಲಾಗುತ್ತದೆ ಟೂಲ್ ಕಿಟ್ ಅತ್ತಿರದ ಪೋಸ್ಟ್ ಆಫೀಸ್ ತಲುಪಿದ ಬಳಿಕ ಪೋಸ್ಟ್ ಮ್ಯಾನ್ ಗೆ ಕರೆ ಮಾಡಿ ಕಚಿತಪಡಿಸಿಕೊಳ್ಳಿ. ನಂತರ ಪಿಎಂ ವಿಶ್ವಕರ್ಮ ಯೋಜನೆ ಮೂಲಕ ಸಂದೇಶ ಕಳಿಸಲಾಗಿದ್ದ ವೋಚಾರ್ ಕೋಡ್ ಅನ್ನು ಡೆಲಿವರಿ ಸಮಯದಲ್ಲಿ ಪೋಸ್ಟ್ ಮ್ಯಾನ್ ಗೆ ನೀಡಬೇಕು.. ಕೆಲವು ಹಳ್ಳಿಗಳಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣಕ್ಕೆ ಕೆಲ ದಿನಗಳ ತಡವಾಗಬಹುದು ಆದರೆ ಕಂಡಿತವಾಗಿ ಯೋಜನೆಯ ಮೂಲಕ ನೋಂದಾಯಿತ ಫಲಾನುಭವಿಗಳಿಗೆ ಟೂಲ್ಕಿಟ್ ನೀಡಲಾಗುತ್ತದೆ

ವಯಕ್ತಿವಾಗಿ ನೀವೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ ಆದರೆ ನಿಮ್ಮ ಬಳಿ ಒಂದು. ಸ್ಮಾರ್ಟ್ ಫೋನ್ ಇರುವುದು ಅವಶ್ಯಕತೆ ಇದೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ  PM Vishwakarma ವೆಬ್ಸೈಟ್ ಓಪನ್ ಮಾಡಿ ಮತ್ತು ನಿಮ್ಮ ಅರ್ಜಿ ಸಲ್ಲಿಸಿ.

 

ಇನ್ನು ಈ ತರಹದ ಮಾಹಿತಿಯನ್ನು ಪ್ರತಿದಿನ ಪಡೆಯಲು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಮ್ ಗ್ರೂಪ್ ನಲ್ಲಿ ಜಾನ್ ಅಗಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಷೇರ್ ಮಾಡಿ ಧನ್ಯವಾದಗಳು

Leave a Comment