ಟೋಲ್ ದರ ಏರಿಕೆಯಿಂದ ಕಂಗಾಲಾಗಿದ್ದೀರಾ?
ಪ್ರತಿದಿನ ಕೆಲಸದ ನಿಮಿತ್ತ ಅಥವಾ ಅನಿವಾರ್ಯ ಕಾರಣಗಳಿಂದ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೊಡ್ಡ ಮಟ್ಟದ ರಿಲೀಫ್ ನೀಡಿದೆ. ಪದೇ ಪದೇ ಟೋಲ್ ಶುಲ್ಕ ಪಾವತಿಸಿ ಕಿಸೆ ಖಾಲಿ ಮಾಡಿಕೊಳ್ಳುತ್ತಿದ್ದ ಸಾಮಾನ್ಯ ಜನರಿಗೆ ಈಗ ಅತ್ಯಂತ ಕಡಿಮೆ ದರದಲ್ಲಿ ಪ್ರಯಾಣಿಸುವ ಸುವರ್ಣ ಅವಕಾಶ ಲಭ್ಯವಿದೆ
ಕೇವಲ ₹340 ಪಾವತಿಸುವ ಮೂಲಕ ನೀವು ಇಡೀ ತಿಂಗಳು ಎಷ್ಟು ಬಾರಿಯಾದರೂ ಟೋಲ್ ದಾಟಬಹುದು! ಇದು ಯಾವುದೇ VIP ಪಾಸ್ ಅಲ್ಲ ಬದಲಾಗಿ ಸಾಮಾನ್ಯ ನಾಗರೀಕರಿಗಾಗಿ ಇರುವ ಲೋಕಲ್ ಮಾಸಿಕ ಪಾಸ್ (local monthly pass) ಸೌಲಭ್ಯ. ಟೋಲ್ ಪ್ಲಾಜಾ ದಿಂದ 20 ಕೀ ಮೀ ವ್ಯಾಪ್ತಿಯೇಲ್ಲಿ ವಾಸಿಸುವ ನಿವಾಸಿಗಳಿಗೆ ಈ ಬಂಪರ್ ಆಫರ್ ಅನ್ವಯವಾಗಿದೆ
ಏನಿದು ₹340 ಮಾಸಿಕ ಪಾಸ್ ಯೋಜನೆ?
ನಿಮ್ಮ ವಾಸಸ್ಥಳವು ಯಾವುದೇ ಟೋಲ್ ಪ್ಲಾಜಾ ದಿಂದ 20 ಕೀ ಮೀ ವ್ಯಾಪ್ತಿಯಲ್ಲಿ ಇದ್ದರೆ ನೀವು ಈ ವಿಶೇಷ ರಿಯಾಯಿತಿ ಪಾಸ್ ಪಡೆಯಲು ಅರ್ಹರು. ಒಮ್ಮೆ ಈ ಪಾಸ್ ಪಡೆದರೆ ನೀವು ಪ್ರತಿ ಬಾರಿ ಟೋಲ್ ಪ್ಲಾಜಾ ದಾಟುವಾಗ ಪೂರ್ಣ ಪ್ರಮಾಣದ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ತಿಂಗಳಿಗೆ ಒಮ್ಮೆ ಈ ಕೇವಲ ₹340 ಪಾವತಿಸಿದರೆ ಸಾಕು, ಆ ತಿಂಗಳು ಪೂರ್ತಿ ಅನ್ ಲಿಮಿಟೆಡ್ ಬಾರಿ ಸಂಚಾರಿಸಬಹುದು
ಮಾಸಿಕ ಪಾಸ್ ಪಡೆಯುವುದು ಹೇಗೆ? ( ಹಂತ ಹಂತದ ಮಾಹಿತಿ)
ನಿಮ್ಮ Fastag ಖಾತೆಯನ್ನು ಸ್ಥಳೀಯ ಮಾಸಿಕ ಪಾಸ್ ಆಗಿ ಅಪ್ಡೇಟ್ ಮಾಡಲು ಕೆಳಗಿನ 3 ವಿಧಾನಗಳನ್ನು ಅನುಸರಿಸಬೇಕು:-
ಆನ್ಲೈನ್ ಮೂಲಕ (IHMCL) ಪೋರ್ಟಲ್)
ಮೊದಲಿಗೆ Fastag ಅಧಿಕೃತ ವೆಬ್ ಸೈಟ್ imhcl. co. in ಅಥವಾ ನಿಮ್ಮ Fastag ಒದಗಿಸಿದ ಬ್ಯಾಂಕ್ ಪೋರ್ಟಲ್ ಗೆ ಭೇಟಿ ನೀಡಿ ಅಲ್ಲಿ local monthly pass ಎಂಬ ಆಯ್ಕೆಯನ್ನು ಆರಿಸಿ
ನಿಮ್ಮ Fastag ಐಡಿ ಮತ್ತು ವಾಹನದ ವಿವರ ದಾಖಲಿಸಿ ನಿಮ್ಮ ವಿಳಾಸದ ಪುರಾವೆ (adhar card/ voter ID) ಮತ್ತು ವಾಹನದ ಆರ್ ಸಿ (RC) ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಂತರ ₹340 ಶುಲ್ಕ ವನ್ನು ಆನ್ಲೈನ್ ಮೂಲಕ ಪಾವತಿಸಿ. ದಾಖಲೆಗಳ ಪರಿಶೀಲನೆ ಮುಗಿದ ನಂತರ ಪಾಸ್ ಆಕ್ಟೀವ್ ಆಗುತ್ತದೆ
ಪಾಸ್ ಪಡೆಯಲು ಇರುವ ಪ್ರಮುಖ ನಿಯಮಗಳು :-
Iಈ ಸೌಲಭ್ಯವನ್ನು ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆಲವು ನಿಯಮಗಳನ್ನು ರೋಪಿಸಿದೆ
ವ್ಯಾಪ್ತಿ:- ಅರ್ಜಿದಾರರ ನಿವಾಸವು ಸಂಭಂಧ ಪಟ್ಟ ಟೋಲ್ ಪ್ಲಾಜಾ ದಿಂದ 20 ಕೀ ಮೀ ಒಳಗಿರಬೇಕು
Vವಾಹನದ ಮಾದರಿ:- ಈ ರಿಯಾಯಿತಿ ಸೌಲಭ್ಯ ವೂ ಕೇವಲ ಖಾಸಗಿ ವಾಹನಗಳಿಗೆ ಮಾತ್ರ ಲಭ್ಯವಿದೆ. ಟ್ಯಾಕ್ಸಿ, ಕ್ಯಾಬ್, ಅಥವಾ ಯಾವುದೇ ವಾಣಿಜ್ಯ ಉದ್ದೇಶದ ವಾಹನಗಳಿಗೆ ಈ ವಿನಾಯಿತಿ ಸಿಗುವುದಿಲ್ಲ
Fastag ಕಡ್ಡಾಯ :- ನಿಮ್ಮ ವಾಹನಕ್ಕೆ ಸಕ್ರಿಯವಾಗಿರುವ fastag ಇರುವುದು ಅತ್ಯಗತ್ಯ.
ಟೋಲ್ ಪ್ಲಾಜಾ ಕೇಂದ್ರದಲ್ಲಿ ನೇರ ಅರ್ಜಿ:- ಇದು ಅತ್ಯಂತ ಸುಲಭ ವಿಧಾನ . ನಿಮ್ಮ ಹತ್ತಿರದ ಟೋಲ್ ಪ್ಲಾಜಾ ದಲ್ಲಿರುವ ‘point of sale ‘(POS) ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಆಧಾರ್ ಕಾರ್ಡ್ ಮತ್ತು ಆರ್ ಸಿ ಬುಕ್ ನಾನು ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಿ ಅಧಿಕಾರಿಗಳು ನಿಮ್ಮ ವಿಳಾಸವನ್ನು ದೃಢೀಕರಿಸಿದ ನಂತರ ₹340 ಶುಲ್ಕ ಪಡೆದು ನಿಮ್ಮ fastag ಅನ್ನು ಲೋಕಲ್ ಮಾಸಿಕ ಪಾಸ್ ಅಪ್ಡೇಟ್ ಮಾಡುತ್ತಾರೆ
ಮೊಬೈಲ್ ಆಫ್ ಮೂಲಕ( fastag app) ಆಫ್ ಡೌನ್ ಲೋಡ್ ಮಾಡಿ ಲಾಗ್ ಇನ್ ಆಗಿ. ಅಲ್ಲಿ ನಿಮ್ಮ ಬ್ಯಾಂಕ್ ಖಾತೆ ಅನ್ನು ಆಯ್ಕೆ ಮಾಡಿ buy monthly pass ವಿಭಾಗಕ್ಕೆ ಹೋಗಿ ಟೋಲ್ ಪ್ಲಾಜಾ ಹೆಸರು ಮತ್ತು ನಿಮ್ಮ ವಾಹನದ ಸಂಖ್ಯೆಯನ್ನು ನಮೋದಿಸಿ ಪ್ರಕ್ರಿಯೆ ಪೂರ್ಣಗೊಳಸಿ
ಟೋಲ್ ಪ್ಲಾಜಾಗಳಲ್ಲಿ ಸಾರ್ವಜನಿಕರಿಗೆ ಸಿಗುವ ಉಚಿತ ಸೇವೆಗಳು:-
ಟೋಲ್ ಪ್ಲಾಜಾಗಳು ಕೇವಲ ಹಣ ವಸೂಲಿ ಮಾಡುವ ಕೇಂದ್ರಗಳಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಅನೇಕ ಉಚಿತ ಸೌಲಭ್ಯ ಗಳನ್ನು ನೀಡಲಾಗಿದೆ
ಶೌಚಾಲಯ:- ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಾಗೂ ಸ್ವಚ್ಯ ಶೌಚಾಲಯ ವ್ಯವಸ್ಥೆ
ಪ್ರಥಮ ಚಿಕಿತ್ಸೆ:- ಪ್ರಯಾಣದ ವೇಳೆ ಆರೋಗ್ಯದಲ್ಲಿ ಏರು ಪೇರಾದರೆ ತುರ್ತು ವೈದ್ಯಕೀಯ ನೆರವು
ಉಚಿತ ಅಂಬುಲೆನ್ಸ್:- ಅಪಘಾತ ಅಥವಾ ಗಂಭೀರ ಆರೋಗ್ಯ ದ ಸಮಸ್ಯೆ ಎದುರಾದರೆ ಉಚಿತ ಅಂಬುಲೆನ್ಸ್ ಸೇವೆ
ಕ್ರೇನ್ ಸೇವೆ :- ವಾಹನ ಕೆಟ್ಟು ಹೋದರೆ ಅಥವಾ ಅಪಘಾತಕ್ಕೆ ಒಳಗಾದರೆ ಅಂತ ವಾಹನಗಳನ್ನು ಸರಿಸಲು ಕ್ರೇನ್ ಸೌಲಭ್ಯ
ಪಾರ್ಕಿಂಗ್:- ತುರ್ತು ವಿಶ್ರಾಂತಿಗಾಗಿ ಸಣ್ಣ ಪಾರ್ಕಿಂಗ್ ಪ್ರದೇಶಗಳ ಲಭ್ಯತೆ
ಸಹಾಯವಾಣಿ:- ಯಾವುದೇ ಸಮಸ್ಯೆ ಇದ್ದಲ್ಲಿ ಪ್ರತಿ ಟೋಲ್ ಪ್ಲಾಜಾ ದಲ್ಲಿ ನೀಡಲಾದ ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಬಹುದು
ಜನಸಾಮಾನ್ಯರ ಪ್ರಶ್ನೆಗಳು (FAQs)
ಪ್ರಶ್ನೆ 1. ನನ್ನ fastag ಬೇರೆ ಬ್ಯಾಂಕ್ ನದ್ದಾಗಿದ್ದರೂ, ಪಾಸ್ ಸಿಗುತ್ತದೆಯೇ?
ಉತ್ತರ. ಹೌದು ನಿಮ್ಮ fastag ಯಾವುದೇ ಬ್ಯಾಂಕ್ ನದ್ದಾಗಿದ್ದರೂ ನೀವು ಸಂಭಂಧ ಪಟ್ಟ ಟೋಲ್ ಕೇಂದ್ರಕ್ಕೆ ಹೋಗಿ ಅದನ್ನು ಮಾಸಿಕ ಪಾಸ್ ಗೆ ಲಿಂಕ್ ಮಾಡಿಸಬಹುದು
ಪ್ರಶ್ನೆ 2. ತಿಂಗಳು ಮುಗಿದ ಮೇಲೆ ಮತ್ತೆ ₹340 ಪಾವತಿಸಬೇಕ?
ಉತ್ತರ ಹೌದು ಇದು ಮಾಸಿಕ ಪಾಸ್ ಆಗಿರುವುದರಿಂದ ಪ್ರತಿ ತಿಂಗಳು ನೀವು ಈ ಮೊತ್ತವನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.
