Telegram Join My Telegram WhatsApp Join My WhatsApp

ನಿಮ್ಮ ಹೊಲಕ್ಕೆ ದಾರಿ ಇಲ್ವಾ? ಸರ್ಕಾರದಿಂದ ₹12.5 ಲಕ್ಷದ ರಸ್ತೆ ಭಾಗ್ಯರ್…! ಪಡೆಯುವುದು ಹೇಗೆ?

ಮಳೆ ಬಂತೆಂದರೆ ಸಾಕು , ನಿಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ಕೆಸರು ತುಂಬಿ ಟ್ರಾಕ್ಟರ್ ಹೋಗುವುದಿರಲಿ,ನಡೆದಾಡುವುದು ಕಷ್ಟವಾಗುತ್ತದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ  ಸಾಗಿಸಲು ರೈತರು ಪಡುವ ಪಾಡು ದೇವರಿಗೆ ಪ್ರತಿ . ಆದರೆ ಈಗ ಕರ್ನಾಟಕ ಸರ್ಕಾರ ರೈತರ ಈ ದಶಕಗಳ ಸಮಸ್ಯೆಗೆ ನಮ್ಮ ಹೊಲ ನಮ್ಮ ದಾರಿ ‘ ಯೋಜನೆ ಮೂಲಕ ಬಿಗ್ ರಿಲೀಫ್ ನೀಡಿದೆ . ನಿಮ್ಮ ಜಮೀನಿಗೂ ಪಕ್ಕಾ ರಸ್ತೆ ಬೇಕೆಂದರೆ ಈ ಮಾಹಿತಿಯನ್ನು ತಪ್ಪದೆ ಓದಿ ಇಲ್ಲಿದೆ ಸಂಪೂರ್ಣ ವಿವರ.

ಏನಿದು ‘ ನಮ್ಮ ಹೊಲ ನಮ್ಮ ದಾರಿ ‘ ಯೋಜನೆ ?

ಗ್ರಾಮೀಣ ಭಾಗದ ರೈತರ ಜಮೀನಿನವರೆಗೆ ಸುಗಮವಾಗಿ ವಾಹನಗಳು ಹೋಗುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಗುರಿ . ಇದು ಕೇವಲ ಕಾಟಾಚಾರದ ಮಣ್ಣಿನ ರಸ್ತೆಯಲ್ಲ ; ಟ್ರಾಕ್ಟರ್, ಜಿಪ್, ಅಥವಾ ಲಾರಿಗಳು ನೇರವಾಗಿ ನಿಮ್ಮ ಹೊಲದ ಬದುವಿನವರೆಗೆ ತಲುಪುವಂತೆ ರಸ್ತೆಯನ್ನು ಅಭಿವೃದ್ಧಿ  ಪಡಿಸಲಾಗುತ್ತದೆ

ಈ ಯೋಜನೆಯಡಿ ಪ್ರತಿ 1 ಕಿಲೊಮೀಟರ್ ರಸ್ತೆ ನಿರ್ಮಾಣಕ್ಕೆ ಒಟ್ಟು ₹12,50 ಲಕ್ಷ ಭಾರಿ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ

ರೈತರಿಗೆ ಸಿಗುವ ಲಾಭಗಳೇನು ?

* ವಾಹನ ಸಂಚಾರ ಸುಲಭ : ಗೊಬ್ಬರ ತರಲು ಅಥವಾ ಬೆಲೆ ಸಾಗಿಸಲು ಇನ್ನೂ ಮುಂದೆ ತಲೆ ಮೇಲೆ ಹೊರೆ ಹೊರುವ ಅವಶ್ಯಕತೆ ಇಲ್ಲ. ವಾಹನಗಳು ನೇರವಾಗಿ ಜಮೀನಿಗೆ ಬರುತ್ತವೆ

* ಸಾಗಾಣಿಕೆ ವೆಚ್ಚ ಉಳಿತಾಯ : ರಸ್ತೆ ಚೆನ್ನಾಗಿದ್ದರೆ ಬಾಡಿಗೆ ವಾಹನಗಳು ಕಡಿಮೆ ದರದಲ್ಲಿ ಬರುತ್ತವೆ , ಇದರಿಂದ ರೈತನ ಜೇಬಿಗೆ ಹೊರೆ ಕಡಿಮೆಯಾಗುತ್ತದೆ .

* ಮಳೆಗಾಲದ ಚಿಂತೆಯಿಲ್ಲ : ಎಷ್ಟೇ ಮಳೆಯಾದರೂ ಕೆಸರಿನಲ್ಲಿ ಸಿಲುಕುವ ಭಯವಿಲ್ಲದೆ ರೈತರು ಹೊಲಕ್ಕೆ ಹೋಗಿ ಬರಬಹುದು

* ಸಮಯ ಉಳಿತಾಯ  : ಕೃಷಿ ಕೆಲಸಗಳು ವೇಗವಾಗಿ ನಡೆಯಲು ಈ ರಸ್ತೆ ಸಂಪರ್ಕ ದೊಡ್ಡ ಶಕ್ತಿಯಾಗಲಿದೆ

ಹಣದ ಹಂಚಿಕೆ ಹೇಗೆ ನಡೆಯುತ್ತದೆ ?

ಒಂದು ಕಿಲೊಮೀಟರ್ ರಸ್ತೆಗೆ ನಿಗದಿಯಾಗಿರುವ ₹12,50 ಲಕ್ಷ ಮೊತ್ತವನ್ನು ಎರಡು ಮೂಲಗಳಿಂದ ಭರಿಸಲಾಗುತ್ತದೆ

1.₹9.00 ಲಕ್ಷ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ

2. ₹ 3.50 ಲಕ್ಷ  : ರಾಜ್ಯ ಸರ್ಕಾರದ ವಿಶೇಷ ಅನುದಾನ ( ಯಂತ್ರೋಪಕರಣಗಳ ಬಳಕೆಗಾಗಿ)

ರಸ್ತೆ ಮಂಜೂರು ಆಗಬೇಕೆಂದರೆ ಈ ಮೂರು ನಿಯಮಗಳು ಮುಖ್ಯ :

ನಿಮ್ಮ ಜಮೀನಿಗೆ ರಸ್ತೆ ಬೇಕೆಂದರೆ ಈ ಕೆಳಗಿದೆ ಷರತ್ತುಗಳು ಅನ್ವಯಿಸುತ್ತವೆ

* ದಾಖಲೆಯಲ್ಲಿ ದಾರಿ ಇರಬೇಕು : ಗ್ರಾಮದ ನಕಾಶೆಯಲ್ಲಿ  ಬಂಡಿ ದಾರಿ , ಕಾಲುವೆ ದಾರಿ ಅಥವಾ ಸರ್ಕಾರಿ ದಾರಿ ಎಂದು ಗುರುತಿಸಲ್ಪಟ್ಟಿರಬೇಕು

*ಸಾರ್ವಜನಿಕ ಹಿತಾಸಕ್ತಿ: ರಸ್ತೆಯಿಂದ ಕನಿಷ್ಠ 5 ರಿಂದ 10  ರೈತರಿಗದರು ಅನುಕೂಲವಾಗುವಂತಿರಬೇಕು. ಒಬ್ಬರೇ ರೈತರಿಗಾಗಿ ರಸ್ತೆ ನಿರ್ಮಿಸಲು ಅವಕಾಶವಿರುವುದಿಲ್ಲ

* ಜಾಗ ಬಿಟ್ಟು ಕೊಡುವುದು : ರಸ್ತೆ ಅಗಲ ಮಾಡುವಾಗ ಅಕ್ಕಪಕ್ಕದ ರೈತರು ತಮ್ಮ ಜಮೀನನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಬೇಕು (ಇದಕ್ಕೆ ಪರಿಹಾರ ಹಣ ಸಿಗುವುದಿಲ್ಲ )

ಅರ್ಜಿ ಸಲ್ಲಿಸಿ ರಸ್ತೆ ಪಡೆಯುವುದು ಹೇಗೆ ?

ರಸ್ತೆ ಬೇಕೆಂದು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ ,ರೈತರು ಒಗ್ಗಟ್ಟಾಗಿ ಈ ಕ್ರಮಗಳನ್ನು ಅನುಸರಿಸಬೇಕು

1. ಮನವಿಪತ್ರ : ನಿಮ್ಮ ಭಾಗದ ರೈತರೆಲ್ಲರೂ ಸೇರಿ , ರಸ್ತೆ ಇಲ್ಲದೆ ಅನುಭವಿಸುತ್ತಿರುವ ತೊಂದರೆಯನ್ನು ವಿವರಿಸಿ ಒಂದು ಅರ್ಜಿಯನ್ನು ಸಿದ್ಧಪಡಿಸಿ

2. ಗ್ರಾಮ ಪಂಚಾಯತಿ ಭೇಟಿ : ನಿಮ್ಮ ಗ್ರಾಮ ಪಂಚಾಯಿತಿಯ PDO  ಅವರನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಿ . ನಮ್ಮ ಹೊಲ ನಮ್ಮ ದಾರಿ ‘ ಯೋಜನೆಯಡಿ ಈ ರಸ್ತೆಯನ್ನು ಸೇರಿಸಲು ಒತ್ತಾಯಿಸಿ .

3.ಗ್ರಾಮ ಸಭೆಯಲ್ಲಿ ಚರ್ಚಿಸಿ : ಗ್ರಾಮ ಸಭೆ ನಡೆದಾಗ ಈ ವಿಷಯವನ್ನು ಮಂಡಿಸಿ , ಕ್ರಿಯಾ ಯೋಜನೆಯಲ್ಲಿ  (Action plan )nimma ರಸ್ತೆಯ ಹೆಸರನ್ನು ಸೇರಿಸುವಂತೆ ನೋಡಿಕೊಳ್ಳಿ

4. ಶಾಸಕರ ಶಿಫಾರಸ್ಸು :ಸಾದ್ಯವಾದರೆ ನಿಮ್ಮ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಒಂದು ಶಿಫಾರಸ್ಸು ಪತ್ರ ಪಡೆದರೆ ಕೆಲಸ ಇನ್ನೂ ವೇಗವಾಗಿ ಆಗುತ್ತದೆ

ಸಲಹೆ :

ರೈತನ ಶ್ರಮಕ್ಕೆ ಬೆಲೆ ಸಿಗಬೇಕೆಂದರೆ ಮೂಲಭೂತ ಸೌಕರ್ಯಗಳು ಅತ್ಯಗತ್ಯ . ರಸ್ತೆ ಇದ್ದರೆ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ .  ಒಂದು ವೇಳೆ ನಿಮ್ಮ ಗ್ರಾಮದ ಹೊಲಗಳಿಗೆ ಹೋಗಲು ದಾರಿ ಸರಿಯಿಲ್ಲದಿದ್ದರೆ, ಈ ಕೊಡಲೇ ನಿಮ್ಮ ಪಂಚಾಯಿತಿ ಗೆ ಭೇಟಿ ನೀಡಿ ಈ ‘ ನಮ್ಮ ಹೊಲ ನಮ್ಮ ದಾರಿ ‘ ಯೋಜನೆಯ  ರೂಪಾಯಿ ₹12.50 ಲಕ್ಷ ಲಾಭ ಪಡೆಯಿರಿ

Leave a Comment