ಮಳೆ ಬಂತೆಂದರೆ ಸಾಕು , ನಿಮ್ಮ ಹೊಲಕ್ಕೆ ಹೋಗುವ ದಾರಿಯಲ್ಲಿ ಕೆಸರು ತುಂಬಿ ಟ್ರಾಕ್ಟರ್ ಹೋಗುವುದಿರಲಿ,ನಡೆದಾಡುವುದು ಕಷ್ಟವಾಗುತ್ತದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲು ರೈತರು ಪಡುವ ಪಾಡು ದೇವರಿಗೆ ಪ್ರತಿ . ಆದರೆ ಈಗ ಕರ್ನಾಟಕ ಸರ್ಕಾರ ರೈತರ ಈ ದಶಕಗಳ ಸಮಸ್ಯೆಗೆ ನಮ್ಮ ಹೊಲ ನಮ್ಮ ದಾರಿ ‘ ಯೋಜನೆ ಮೂಲಕ ಬಿಗ್ ರಿಲೀಫ್ ನೀಡಿದೆ . ನಿಮ್ಮ ಜಮೀನಿಗೂ ಪಕ್ಕಾ ರಸ್ತೆ ಬೇಕೆಂದರೆ ಈ ಮಾಹಿತಿಯನ್ನು ತಪ್ಪದೆ ಓದಿ ಇಲ್ಲಿದೆ ಸಂಪೂರ್ಣ ವಿವರ.
ಏನಿದು ‘ ನಮ್ಮ ಹೊಲ ನಮ್ಮ ದಾರಿ ‘ ಯೋಜನೆ ?

ಗ್ರಾಮೀಣ ಭಾಗದ ರೈತರ ಜಮೀನಿನವರೆಗೆ ಸುಗಮವಾಗಿ ವಾಹನಗಳು ಹೋಗುವಂತೆ ಮಾಡುವುದೇ ಈ ಯೋಜನೆಯ ಮುಖ್ಯ ಗುರಿ . ಇದು ಕೇವಲ ಕಾಟಾಚಾರದ ಮಣ್ಣಿನ ರಸ್ತೆಯಲ್ಲ ; ಟ್ರಾಕ್ಟರ್, ಜಿಪ್, ಅಥವಾ ಲಾರಿಗಳು ನೇರವಾಗಿ ನಿಮ್ಮ ಹೊಲದ ಬದುವಿನವರೆಗೆ ತಲುಪುವಂತೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ
ಈ ಯೋಜನೆಯಡಿ ಪ್ರತಿ 1 ಕಿಲೊಮೀಟರ್ ರಸ್ತೆ ನಿರ್ಮಾಣಕ್ಕೆ ಒಟ್ಟು ₹12,50 ಲಕ್ಷ ಭಾರಿ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ
ರೈತರಿಗೆ ಸಿಗುವ ಲಾಭಗಳೇನು ?
* ವಾಹನ ಸಂಚಾರ ಸುಲಭ : ಗೊಬ್ಬರ ತರಲು ಅಥವಾ ಬೆಲೆ ಸಾಗಿಸಲು ಇನ್ನೂ ಮುಂದೆ ತಲೆ ಮೇಲೆ ಹೊರೆ ಹೊರುವ ಅವಶ್ಯಕತೆ ಇಲ್ಲ. ವಾಹನಗಳು ನೇರವಾಗಿ ಜಮೀನಿಗೆ ಬರುತ್ತವೆ
* ಸಾಗಾಣಿಕೆ ವೆಚ್ಚ ಉಳಿತಾಯ : ರಸ್ತೆ ಚೆನ್ನಾಗಿದ್ದರೆ ಬಾಡಿಗೆ ವಾಹನಗಳು ಕಡಿಮೆ ದರದಲ್ಲಿ ಬರುತ್ತವೆ , ಇದರಿಂದ ರೈತನ ಜೇಬಿಗೆ ಹೊರೆ ಕಡಿಮೆಯಾಗುತ್ತದೆ .
* ಮಳೆಗಾಲದ ಚಿಂತೆಯಿಲ್ಲ : ಎಷ್ಟೇ ಮಳೆಯಾದರೂ ಕೆಸರಿನಲ್ಲಿ ಸಿಲುಕುವ ಭಯವಿಲ್ಲದೆ ರೈತರು ಹೊಲಕ್ಕೆ ಹೋಗಿ ಬರಬಹುದು
* ಸಮಯ ಉಳಿತಾಯ : ಕೃಷಿ ಕೆಲಸಗಳು ವೇಗವಾಗಿ ನಡೆಯಲು ಈ ರಸ್ತೆ ಸಂಪರ್ಕ ದೊಡ್ಡ ಶಕ್ತಿಯಾಗಲಿದೆ
ಹಣದ ಹಂಚಿಕೆ ಹೇಗೆ ನಡೆಯುತ್ತದೆ ?
ಒಂದು ಕಿಲೊಮೀಟರ್ ರಸ್ತೆಗೆ ನಿಗದಿಯಾಗಿರುವ ₹12,50 ಲಕ್ಷ ಮೊತ್ತವನ್ನು ಎರಡು ಮೂಲಗಳಿಂದ ಭರಿಸಲಾಗುತ್ತದೆ
1.₹9.00 ಲಕ್ಷ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ
2. ₹ 3.50 ಲಕ್ಷ : ರಾಜ್ಯ ಸರ್ಕಾರದ ವಿಶೇಷ ಅನುದಾನ ( ಯಂತ್ರೋಪಕರಣಗಳ ಬಳಕೆಗಾಗಿ)
ರಸ್ತೆ ಮಂಜೂರು ಆಗಬೇಕೆಂದರೆ ಈ ಮೂರು ನಿಯಮಗಳು ಮುಖ್ಯ :
ನಿಮ್ಮ ಜಮೀನಿಗೆ ರಸ್ತೆ ಬೇಕೆಂದರೆ ಈ ಕೆಳಗಿದೆ ಷರತ್ತುಗಳು ಅನ್ವಯಿಸುತ್ತವೆ
* ದಾಖಲೆಯಲ್ಲಿ ದಾರಿ ಇರಬೇಕು : ಗ್ರಾಮದ ನಕಾಶೆಯಲ್ಲಿ ಬಂಡಿ ದಾರಿ , ಕಾಲುವೆ ದಾರಿ ಅಥವಾ ಸರ್ಕಾರಿ ದಾರಿ ಎಂದು ಗುರುತಿಸಲ್ಪಟ್ಟಿರಬೇಕು
*ಸಾರ್ವಜನಿಕ ಹಿತಾಸಕ್ತಿ: ರಸ್ತೆಯಿಂದ ಕನಿಷ್ಠ 5 ರಿಂದ 10 ರೈತರಿಗದರು ಅನುಕೂಲವಾಗುವಂತಿರಬೇಕು. ಒಬ್ಬರೇ ರೈತರಿಗಾಗಿ ರಸ್ತೆ ನಿರ್ಮಿಸಲು ಅವಕಾಶವಿರುವುದಿಲ್ಲ
* ಜಾಗ ಬಿಟ್ಟು ಕೊಡುವುದು : ರಸ್ತೆ ಅಗಲ ಮಾಡುವಾಗ ಅಕ್ಕಪಕ್ಕದ ರೈತರು ತಮ್ಮ ಜಮೀನನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಡಬೇಕು (ಇದಕ್ಕೆ ಪರಿಹಾರ ಹಣ ಸಿಗುವುದಿಲ್ಲ )
ಅರ್ಜಿ ಸಲ್ಲಿಸಿ ರಸ್ತೆ ಪಡೆಯುವುದು ಹೇಗೆ ?
ರಸ್ತೆ ಬೇಕೆಂದು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ ,ರೈತರು ಒಗ್ಗಟ್ಟಾಗಿ ಈ ಕ್ರಮಗಳನ್ನು ಅನುಸರಿಸಬೇಕು
1. ಮನವಿಪತ್ರ : ನಿಮ್ಮ ಭಾಗದ ರೈತರೆಲ್ಲರೂ ಸೇರಿ , ರಸ್ತೆ ಇಲ್ಲದೆ ಅನುಭವಿಸುತ್ತಿರುವ ತೊಂದರೆಯನ್ನು ವಿವರಿಸಿ ಒಂದು ಅರ್ಜಿಯನ್ನು ಸಿದ್ಧಪಡಿಸಿ
2. ಗ್ರಾಮ ಪಂಚಾಯತಿ ಭೇಟಿ : ನಿಮ್ಮ ಗ್ರಾಮ ಪಂಚಾಯಿತಿಯ PDO ಅವರನ್ನು ಭೇಟಿ ನೀಡಿ ಅರ್ಜಿ ಸಲ್ಲಿಸಿ . ನಮ್ಮ ಹೊಲ ನಮ್ಮ ದಾರಿ ‘ ಯೋಜನೆಯಡಿ ಈ ರಸ್ತೆಯನ್ನು ಸೇರಿಸಲು ಒತ್ತಾಯಿಸಿ .
3.ಗ್ರಾಮ ಸಭೆಯಲ್ಲಿ ಚರ್ಚಿಸಿ : ಗ್ರಾಮ ಸಭೆ ನಡೆದಾಗ ಈ ವಿಷಯವನ್ನು ಮಂಡಿಸಿ , ಕ್ರಿಯಾ ಯೋಜನೆಯಲ್ಲಿ (Action plan )nimma ರಸ್ತೆಯ ಹೆಸರನ್ನು ಸೇರಿಸುವಂತೆ ನೋಡಿಕೊಳ್ಳಿ
4. ಶಾಸಕರ ಶಿಫಾರಸ್ಸು :ಸಾದ್ಯವಾದರೆ ನಿಮ್ಮ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಒಂದು ಶಿಫಾರಸ್ಸು ಪತ್ರ ಪಡೆದರೆ ಕೆಲಸ ಇನ್ನೂ ವೇಗವಾಗಿ ಆಗುತ್ತದೆ
ಸಲಹೆ :
ರೈತನ ಶ್ರಮಕ್ಕೆ ಬೆಲೆ ಸಿಗಬೇಕೆಂದರೆ ಮೂಲಭೂತ ಸೌಕರ್ಯಗಳು ಅತ್ಯಗತ್ಯ . ರಸ್ತೆ ಇದ್ದರೆ ಮಾತ್ರ ಕೃಷಿ ಲಾಭದಾಯಕವಾಗಲು ಸಾಧ್ಯ . ಒಂದು ವೇಳೆ ನಿಮ್ಮ ಗ್ರಾಮದ ಹೊಲಗಳಿಗೆ ಹೋಗಲು ದಾರಿ ಸರಿಯಿಲ್ಲದಿದ್ದರೆ, ಈ ಕೊಡಲೇ ನಿಮ್ಮ ಪಂಚಾಯಿತಿ ಗೆ ಭೇಟಿ ನೀಡಿ ಈ ‘ ನಮ್ಮ ಹೊಲ ನಮ್ಮ ದಾರಿ ‘ ಯೋಜನೆಯ ರೂಪಾಯಿ ₹12.50 ಲಕ್ಷ ಲಾಭ ಪಡೆಯಿರಿ