ನಿಮ್ಮ ಮಗ ಅಥವಾ ಮಗಳು ದ್ವಿತೀಯ ಪಿಯುಸಿ ವಿಜ್ಞಾನ ಭಾಗದಲ್ಲಿ ಓದಿ ಈಗ ನೀಟ್ (NEET) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರ ಅಥವಾ ನೀಟ್ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿದೆ ಎಂದು ಮಗು ನಿರಾಶೆಯಾಗಿದೆಯೇ ? ಡಾಕ್ಟರ್ ಆಗದಿದ್ದರೆ ವೈದ್ಯಕೀಯ ಕ್ಷೇತ್ರದಲ್ಲಿ ಭವಿಷ್ಯವ ಇಲ್ಲ ಎಂಬ ತಪ್ಪು ಕಲ್ಪನೆ ಬೇಡ ಆಸ್ಪತ್ರೆಗಳಲ್ಲಿ ಕೇವಲ ವೈದ್ಯರು ಮಾತ್ರ ಕೆಲಸ ಮಾಡುವುದಿಲ್ಲ ರೋಗಿಗಳ ಪ್ರಾಣ ಉಳಿಸಲು ವೈದ್ಯರಷ್ಟೇ ಪ್ರಮುಖ ಪಾತ್ರ ವಹಿಸುವ ಪ್ಯಾರಾ ಮೆಡಿಕಲ್ ತಾಂತ್ರಿಕ ಸಿಬ್ಬಂದಿಗಳ ಬಾರಿ ಬೇಡಿಕೆ ಇದೆ ನೀಟ್ ಪರೀಕ್ಷೆಯ ಒತ್ತಡವಿಲ್ಲದೆ ನಿಮ್ಮ ಮಗು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇರುವ 10 ಅತ್ಯುತ್ತಮ ಕೋರ್ಸ್ ಗಳ ವಿವರ ಇಲ್ಲಿದೆ
10 ಅತ್ಯುತ್ತಮ ವೈದ್ಯಕೀಯ ಕೋರ್ಸ್ ಗಳು (ನೀಟ್ ಇಲ್ಲದೆಯೇ )
ನಿಮ್ಮ ಆಸಕ್ತಿ ಮತ್ತು ಗುರಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಮಾರ್ಗಗಳ ವಿವರ
- *ನರ್ಸಿಂಗ್ ಕೋರ್ಸ್ ಗಳು ( GNM/ ANM )
ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ನರ್ಸ್ ಗಳಿಗೆ. ಯಾವಾಗಲೂ ಹೆಚ್ಚಿನ ಬೇಡಿಕೆ ಇರುತ್ತದೆ. ರೋಗಿಗಳ ಆರೈಕೆಯಲ್ಲಿ ಆಸಕ್ತಿ ಇರುವವರು ಈ ಕೋರ್ಸ್ ಮಾಡಬಹುದು
- *BSC in ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (BMLT )
ರಕ್ತ ಪರೀಕ್ಷೆ ಮತ್ತು ಇತರೆ ರೋಗ ನಿರ್ಣಯ ಪರೀಕ್ಷೆಗಳನ್ನು ನಡೆಸುವ ತಂತ್ರಜ್ಞ ರಾಗಲು ಇದು ನಿಮಗೆ ಉತ್ತಮ ಅವಕಾಶ
- * ಬ್ಯಾಚುಲರ್ ಆಫ್ ಫಿಜಿಯುಥ್ಯಾರಿಪಿ (BPT )
ಸ್ನಾಯು ಮತ್ತು ಮೂಳೆ ಸಂಬಂಧಿತ ಸಮಸ್ಯೆಗಳಿಗೆ ಚಿಕಿನ್ಸೆ ನೀಡುವ ತಜ್ಞರಾಗಲು ಸಹಕಾರಿ
- * ಬ್ಯಾಚುಲರ್ ಆಫ್ ಅಕ್ಟುಫೆಶಿನಲ್ ಥೆರಪಿ (BOT)
ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸುತ್ತಿರುವವರಿಗೆ ದೈನಂದಿನ ಚಟುವಟಿಗಳನ್ನು ಮಾಡಲು ಸಹಾಯ ಮಾಡುವ ವೃತ್ತಿ ಇದಾಗಿದೆ
- *ಡಿಪ್ಲೊಮೊ ಇನ್ ಡಯಾಲಿಸಿಸ್ ಟೆಕ್ನಾಲಜಿ
ಕಿಡ್ನಿ ವೈಫಲ್ಯದ ರೋಗಿಗಳಿಗೆ ಡಯಾಲಿಸಿಸ್ ಮಾಡುವ ಪ್ರಕ್ರಿಯೆಯಲ್ಲಿ ಪರಿಣತಿ ಪಡೆಯಲು ಇದು ಉತ್ತಮ ಕೋರ್ಸ್
- *BSC ಇನ್ ರೇಡಿಯಾಲಜಿ / ಮೆಡಿಕಲ್ ಇಮೇಜಿಂಗ್
ಎಕ್ಸ್- ರೆ ಸಿಟಿ ಸ್ಕ್ಯಾನ್ ಮತ್ತು MRI ಸ್ಕ್ಯಾನ್ಗಳನ್ನು ಮಾಡುವ ತಂತ್ರಗ್ಜ ರಾಗಲು ಈ ಕೋರ್ಸ್ ಮಾಡಬಹುದು
- * ಬ್ಯಾಚುಲರ್ ಆಫ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ (BOTT)
ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ವೈದ್ಯರಿಗೆ ನೆರವು ನೀಡುವ ತಾಂತ್ರಿಕ ಸಿಬ್ಬಂದಿಯಾಗಿ ಕೆಲಸ ಮಾಡಲು ಇದು ಸಹಕಾರಿ
- * ಡಿಪ್ಲೊಮೊ ಇನ್ ಆಪ್ತಲ್ಮಿಕ್ ಟೆಕ್ನಾಲಜಿ
ಕಣ್ಣಿನ ತಪಾಸಣೆ ಮತ್ತು ದೃಷ್ಟಿ ದೋಷಗಳಿಗೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಇದು ವಿಶೇಷ ತರಬೇತಿ ನೀಡುತ್ತದೆ
- * BSC ಇನ್ ಕಾರ್ಡಿಯಾಕ್ ಪರ್ಫ್ಯೂಷನ್
ಟೆಕ್ನಾಲಜಿ. ಹೃದಯ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ರಕ್ತದ ಹರಿವನ್ನು ನಿರ್ವಹಿಸುವ ಯಂತ್ರಗಳ ಕಾರ್ಯಾಚರಣೆಯ ಬಗ್ಗೆ ಈ ಕೋರ್ಸ್ ತಿಳಿಸಿಕೊಡುತ್ತದೆ
- * ಪಬ್ಲಿಕ್ ಹೆಲ್ತ್ ಅಡ್ಮಿನಿಸ್ಟ್ರೇಷನ್:
ಆರೋಗ್ಯ ಸಂಸ್ಥೆಗಳ ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ಯೋಜನೆಗಳ ಅನುಷ್ಠಾನ ದಲ್ಲಿ ಆಸಕ್ತಿ ಇರುವವರಿಗೆ ಇದು ಉತ್ತಮ ಆಯ್ಕೆ
NEET ಇಲ್ಲದೆ ಪ್ರಮುಖ ವೈದ್ಯಕೀಯ ಕೋರ್ಸ್ ಗಳ ಮಾಹಿತಿ
ಒಟ್ಟು ಕೋರ್ಸ್ ಗಳು ಈ ಕೆಳಗಿನಂತಿವೆ
1. Nursing (GNM /ANM )
2. BMLT
3. BPT
4. BOTT
5. Radiology tech
ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ ?
ಹೆಚ್ಚಿನ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ಭಾಗದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಬಿಡಲಾಗುತ್ತದೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ತಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ಮಾಡಿಸಬಹುದು
ನಮ್ಮ ಸಲಹೆ :
ಈಗಾಗಲೇ ನಿಮ್ಮ ಪಿಯುಸಿ ಅಂಕ ಪಟ್ಟಿ ಆಧಾರ್ ಕಾರ್ಡ್ ಜ್ಯಾತಿ/ ಆದಾಯ ಪ್ರಮಾಣಪತ್ರ ( cast and income certificate) ಸಿದ್ಧವಾಗಿಟ್ಟುಕೊಳ್ಳಿ ಅರ್ಜಿ ಸಲ್ಲಿಸುವಾಗ ಇದು ಅತ್ಯಗತ್ಯ. ನೆನಪಿರಲಿ ನಿಮ್ಮ ಮಗುವಿನ ಅಂಕಗಳ ಆಧಾರದ ಮೇಲೆ ಮಾತ್ರಾ ಕೋರ್ಸ್ ಆಯ್ಕೆ ಮಾಡಬೇಡಿ ಉದಾಹರಣೆಗೆ ಮಗುವಿಗೆ ರಕ್ತ ಕಂಡರೆ ಹೆದರಿಕೆಯಾಗುತ್ತಿದ್ದರೆ ಕೇವಲ ಸ್ಕೋರ್ ಚನ್ನಾಗಿದೆ ಎಂದು ಲ್ಯಾಬ್ ಟೆಕ್ನಾಲಜಿ ಸೇರಿಸಬೇಡಿ ಮಗುವಿನ ಆಸಕ್ತಿ ತಿಳಿಯಲು ಸಾದ್ಯವಾದರೆ ವೃತ್ತಿಪರ ಆಪ್ತಸಮಾಲೋಚನೆ ಸಹಾಯ ಪಡೆಯಿರಿ ನಿಮ್ಮ ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಪ್ಯಾರಾ ಮೆಡಿಕಲ್ ಸಿಬ್ಬಂದಿಗಳೊಂದಿಗೆ ಮಾತನಾಡಿ ಅವರ ಕೆಲಸದ ಅನುಭವದ ಬಗ್ಗೆ ಮಾಹಿತಿ ಪಡೆಯಿರಿ
ಸೂಚನೆ :
ಗೊಂದಲ ಬೇಡ MBBS ಸೀಟು ಸಿಗದಿದ್ದರೆ ವೈದ್ಯಕೀಯ ಕ್ಷೇತ್ರ ಮುಗಿಯಿತು ಅಂದುಕೊಳ್ಳಬೇಡಿ ಬೇಡಿಯ ಕೋರ್ಸ್ ಗಳು : ನರ್ಸಿಂಗ್ ಲ್ಯಾಬ್ ಟೆಕ್ನಾಲಜಿ , ಪಿಜಿಯೊ ಥ್ಯಾರಿಪಿಸ್ ನಂತಹ ಕೋರ್ಸ್ ಗಳಿಗೆ ಆಸ್ಪತ್ರೆಗಳಲ್ಲಿ ವೈದ್ಯರಿಗಿಂತ ಹೆಚ್ಚಿನ ಬೇಡಿಕೆ ಇದೆ ನಿಮ್ಮ ಪಿಯುಸಿ ಅಂಕ ಪಟ್ಟಿ ಆಧಾರ್ ಕಾರ್ಡ್ ಜ್ಯಾತಿ/ಆದಾಯ ಪ್ರಮಾಣಪತ್ರ ಸಿದ್ಧವಾಗಿಟ್ಟುಕ್ಕೊಳ್ಳಿ
ಪ್ಯಾರಾ ಮೆಡಿಕಲ್. ಕೋರ್ಸ್ ಮುಗಿಸಿದ ನಂತರ ಸರಕಾರಿ ಕೆಲಸ ಸಿಗುತ್ತದೆಯೇ ?
ಹೌದು ಪ್ಯಾರಾ ಮೆಡಿಕಲ್ ಕೋರ್ಸ್ ಮುಗಿದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗ ನಿರ್ಣಯ ಕೇಂದ್ರಗಳು ಮತ್ತು ಆರೋಗ್ಯ ಸಂಸ್ಥೆಗಳಲ್ಲಿ ತಾಂತ್ರಿಕ ಉದ್ದೆಗಳಿಗೆ ಹೆಚ್ಚಿನ ಅವಕಾಶವಿದೆ
ನರ್ಸಿಂಗ್ ಕೋರ್ಸ್ ಮಾಡಲು ನೀಟ್ ಪರೀಕ್ಷೆ ಕಡ್ಡಾಯವೆ ?
ಇಲ್ಲ ನರ್ಸಿಂಗ್ ಕೋರ್ಸ್ ಮಾಡಲು ನೀಟ್ ಪರೀಕ್ಷೆ ಕಡ್ಡಾಯವಲ್ಲ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಗಳ ಮೂಲಕ ಪ್ರವೇಶ ಪಡೆಯಬಹುದು
ದಯವಿಟ್ಟು ಗಮನಿಸಿ :-
Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ. ಈ ಮಾಹಿತಿಯು MBBS ಸೀಟು ಸಿಗದೆ ಕೈ ಕಟ್ಟಿ ಕೂರುವ ಎಷ್ಟೋ ಪ್ರತಿಭಾವಂತ ಯುವಕ ಯುವತಿಯರಿಗೆ ತಮ್ಮ ವೃತ್ತಿ ಜೀವನ ಕಟ್ಟಿ ಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಅಂಶ ಹೊಂದಿದೆ