ಯೋಜನೆಯ ಪರಿಚಯ:ಕರ್ನಾಟಕ ಪ್ರಭುದ್ದ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯು ಕರ್ನಾಟಕ ಸರ್ಕಾರದ ಪ್ರಮುಖ ಶಿಕ್ಷಣ ಕಲ್ಯಾಣ ಯೋಜನೆಯಾಗಿದೆ. ವಿದೇಶಿ ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯ ಮಾಡುವುದು ಈ ಯೋಜನೆಯನ್ನು ಪ್ರಾರಂಭಿಸುವ ಮುಖ್ಯ ಉದ್ದೇಶವಾಗಿದೆ. ಕರ್ನಾಟಕ ಪ್ರಭುದ್ದ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯಡಿ ಕರ್ನಾಟಕ ಸರ್ಕಾರದಿಂದ ಪಡೆಯಬಹುದಾದ ಪ್ರಯೋಜನಗಳು ಈ ಕೆಳಗಿನಂತಿವೆ
ವಿದ್ಯಾರ್ಥಿಗಳ ಸಂಪೂರ್ಣ ಬೋಧನಾ ಶುಲ್ಕವನ್ನು ಕರ್ನಾಟಕ ಸರ್ಕಾರವೂ ಪಾವತಿಸುತ್ತದೆ
ವರ್ಷಕ್ಕೆ ರೂ 8 ಲಕ್ಷ ಅಥವಾ ವಾಸ್ತವಿಕ ವೆಚ್ಚದ 75% ವಿದ್ಯಾರ್ಥಿಗೆ ನಿರ್ವಹಣಾ ಭತ್ಯೆಯಾಗಿ ನೀಡಲಾಗುತ್ತದೆ
ವೈದ್ಯಕೀಯ ವಿಮೆಯ ವೆಚ್ಚವನ್ನು ಸರ್ಕಾರವೂ ಭರಿಸಲಿದೆ
ವರ್ಷಕ್ಕೆ ರೂ 1. ಲಕ್ಷವನ್ನು ಪುಸ್ತಕಗಳು ಮತ್ತು ಇತರ ವಿವಿಧ ಭತ್ಯಗಳಿಗಾಗಿ ಒದಗಿಸಲಾಗುವುದು
ಪೂರ್ಣ ವೀಸಾ ಶುಲ್ಕಗಳು ಮತ್ತು ಏರ್ ಪ್ಯಾಸೇಜ್ (ಏರ್ ಟಿಕೆಟ್) ಶುಲ್ಕವನ್ನು ಸರ್ಕಾರವೂ ಪಾವತಿಸುತ್ತದೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹರು
ವಿದೇಶಿ ವಿಶ್ವವಿದ್ಯಾನಿಲಯದಿಂದ ಪದವಿಪೂರ್ವ ಕೋರ್ಸ್ , ಸ್ನಾತಕೋತ್ತರ ಕೋರ್ಸ್ ಅಥವಾ ಡಾಕ್ಟರೇಟ್ ಕೋರ್ಸ್ ಅನ್ನು ಮುಂದುವರಿಸಲು ಬಯಸುವ ಯಾವುದೇ ವಿದ್ಯಾರ್ಥಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಈ ಯೋಜನೆಯಡಿ ವಿದ್ಯಾರ್ಥಿ ವೇತನವು ಈ ಕೆಳಗಿನ ಕೋರ್ಸ್ ಗಳಿಗೆ ಒದಗಿಸಲಾಗುವುದು
1. ಇಂಜಿನಿಯರಿಂಗ್
2.ನಿರ್ವಹಣೆ
3. ಶುದ್ಧ ವಿಜ್ಞಾನ
4. ಅನ್ವಯಿಕ ವಿಜ್ಞಾನ
5. ಕೃಷಿ ವಿಜ್ಞಾನ ಮತ್ತು ಔಷಧ
6.ಅಂತಾರಾಷ್ಟಿಯ ಮತ್ತು ವಾಣಿಜ್ಯ
7.ಅರ್ಥಶಾಸ್ತ್ರ
8. ಲೆಕ್ಕಪತ್ರ ಹಣಕಾಸು
9. ಮಾನವಿಕಗಳು
10. ಲಿಖಿತ ಕಲೆ
11. ಕಾನೂನು
* ಈ ಯೋಜನೆಯಡಿ 250 ಪದವಿಪೂರ್ವ ವಿದ್ಯಾರ್ಥಿಗಳಿಗೆ 150 ಸ್ನಾತಕೋತ್ತರ ಮತ್ತು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. ನೀಡಲಾಗುವುದು
* ಮಹಿಳಾ ವಿದ್ಯಾರ್ಥಿಗಳಿಗೆ 33% ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ 5% ಸೀಟುಗಳನ್ನು ಕಾಯ್ದಿರಿಸಲಾಗಿದೆ
* ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಪೋರ್ಟಲ್ ನಲ್ಲಿ ಲಭ್ಯವಿರುವ ಆನ್ ಲೈನ್ ಅರ್ಜಿ ನಮೂನೆಯ ಮೂಲಕ ಕರ್ನಾಟಕ ಪ್ರಭುದ್ದ ಸಾಗರೋತ್ತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು
ಕೆಳಗೆ ತಿಳಿಸಿದಂತೆ ವಿದ್ಯಾರ್ಥಿಗಳಿಗೆ ಅವರ ಆದಾಯದ ವರ್ಗಕ್ಕೆ ಅನುಗುಣವಾಗಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ
ವಿದ್ಯಾರ್ಥಿಯ ವಾರ್ಷಿಕ ಆದಾಯ ರೂ 8 ಲಕ್ಷ ಇದ್ದಲ್ಲಿ ವಿದ್ಯಾರ್ಥಿಯ ವೇತನ 100 % ವಾಗಿರುತ್ತದೆ
ಹಾಗೆ. 8 ಲಕ್ಷ ರಿಂದ 15 ಲಕ್ಷ ಇದ್ದಲ್ಲಿ ವಿದ್ಯಾರ್ಥಿ ವೇತನದ 50% ವಾಗಿರುತ್ತದೆ
ಮತ್ತು 15 ಲಕ್ಷಕ್ಕಿಂತ ಹೆಚ್ಚು ಇದ್ದಲ್ಲಿ ವಿದ್ಯಾರ್ಥಿ ವೇತನ 33% ವಾಗಿರುತ್ತದೆ
ಅರ್ಹತೆ :
ಕರ್ನಾಟಕದ ನಿವಾಸಿಗಳಾಗಿರಬೇಕು
ಅರ್ಜಿ ದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿ ದವರಾಗಿರಬೇಕು
ಅರ್ಜಿ ದಾರರ ವಯಸ್ಸಿನ ಮಿತಿ ಈ ಕೆಳಗಿನಂತಿರಬೇಕು,ಪದವಿ ಪೂರ್ವ ಕೋರ್ಸ್ ಗೆ 21 ವರ್ಷಗಳು,ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್ ಗೆ 35 ವರ್ಷಗಳು,ಅರ್ಜಿದಾರರು ಕೆಳಗೆ ನಮೂದಿಸಿದ ಕನಿಷ್ಠ ಅಂಕಗಳನ್ನು ಪಡೆದಿರಬೇಕು,ಪದವಿ ಪೂರ್ವ ಕೋರ್ಸ್ ಗೆ ಹಿಂದಿನ ಪರೀಕ್ಷೆಯಲ್ಲಿ 80% ಅಂಕಗಳು,ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಕೋರ್ಸ್ ಗೆ ಹಿಂದಿನ ಪರೀಕ್ಷೆಯಲ್ಲಿ 55% ಅಂಕಗಳು
ಅಗತ್ಯವಾದ ದಾಖಲೆಗಳು
- *ಆಧಾರ್ ಕಾರ್ಡ್
- * ಜಾತಿ ಪ್ರಮಾಣ ಪತ್ರ
- * ಆದಾಯ ಪ್ರಮಾಣಪತ್ರ
- * ವಿದೇಶಿ ವಿಶ್ವ ವಿದ್ಯಾನಿಲಯದ ಆಫರ್ ಲೆಟರ್
- * ಪಾಸ್ಪೋರ್ಟ್
ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಪೋರ್ಟಲ್ ನಲ್ಲಿ ಲಭ್ಯವಿರುವ ಆನ್ ಲೈನ್ ಅರ್ಜಿ ನಮೂನೆಯ ಮೂಲಕ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಬಹುದು
* ಪೋರ್ಟಲ್ ನಲ್ಲಿ ಉಲ್ಲೇಖಿಸಲಾದ ಸಲ್ಲಿಸು ಬಟನ್ ಕ್ಲಿಕ್ ಮಾಡಿ
* ಈ ಕೆಳಗಿನ ವಿವರಗಳನ್ನು ಹಂತ ಹಂತವಾಗಿ ನಮೂದಿಸಿ :
* ವೈಯಕ್ತಿಕ ವಿವರಗಳು
* ಸಂಪರ್ಕ ವಿವರಗಳು
* ಶಿಕ್ಷಣದ ವಿವರಗಳು
* ಕಾಲೇಜು ಪ್ರವೇಶ ವಿವರಗಳು
* ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಿ
* ಸಬ್ಮಿಂಟ್ ಬಟನ್ ಅನ್ನು ಒತ್ತಿ
* ಸಲ್ಲಿಸಿರುವ ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಪರಿಶೀಲನೆಗಾಗಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ರವಾನಿಸಲಾಗುತ್ತದೆ
* ಇನ್ನಿತರ ಭತ್ಯೆಯನ್ನು ವಿದ್ಯಾರ್ಥಿಯು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ
ಸಂಪರ್ಕ ವಿವರಗಳು:
* ಕರ್ನಾಟಕ ಪ್ರಭುದ್ದ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯ ಸಹಾಯವಾಣಿ ಸಂಖ್ಯೆ
08022634300,08022340956,09008400078
* ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ಸಹಾಯವಾಣಿ ಸಂಖ್ಯೆ 09482300400
ನೆನಪಿರಲಿ
Vishwavanione.com ತನ್ನ ಓದುಗರರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು