ಭಾರತದಲ್ಲಿ ಪೊಲೀಸ್ ಇಲಾಖೆ ಸಮಾಜದ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿದೆ. ಯುವಕರಲ್ಲಿ ಹಲವರಿಗೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಆಸೆ ಇರುತ್ತದೆ. ಆದರೆ ಈ ಕ್ಷೇತ್ರಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ಅರ್ಹತೆಗಳು , ಪರೀಕ್ಷೆಗಳು, ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವುದು ಅತ್ಯಂತ ಮುಖ್ಯ. ಈ ಲೇಖನದಲ್ಲಿ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ ಯಾಗಲು ಬೇಕಾದ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ವಿವರಿಸಲಾಗಿದೆ
ಪೊಲೀಸ್ ಇಲಾಖೆಯ ಮಹತ್ವ!

ಪೊಲೀಸ್ ಇಲಾಖೆ ದೇಶದ ಒಳಾಂಗಣ ಭದ್ರತೆಯನ್ನು ನಿರ್ವಹಿಸುತ್ತದೆ. ಅಪರಾಧ ನಿಯಂತ್ರಣ, ಸಾರ್ವಜನಿ ಶಾಂತಿ ಕಾಪಾಡುವುದು, ಸಂಚಾರ ನಿಯಂತ್ರಣ, ತನಿಖೆ ನಡೆಸುವುದು ಮುಂತಾದ ಕೆಲಸಗಳನ್ನು ಪೊಲೀಸ್ ಅಧಿಕಾರಿಗಳು ನಿರ್ವಹಿಸುತ್ತಾರೆ . ಸಮಾಜದಲ್ಲಿ ನ್ಯಾಯ ಮತ್ತು ಭಧ್ರತೆ ಕಾಯ್ದುಕೊಳ್ಳಲು ಪೊಲೀಸ್ ಅಧಿಕಾರಿಗಳ ಪತ್ರ ಅತ್ಯಂತ ಮುಖ್ಯವಾಗಿದೆ ಮತ್ತು ಮಹತ್ವದಾಗಿದೆ
ಪೊಲೀಸ್ ಇಲಾಖೆಯಲ್ಲಿ ಹುದ್ದೆಗಳ ಪ್ರಕಾರಗಳು?
ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಇವೆ ಅವುಗಳಲ್ಲಿ ಪ್ರಮುಖವಾದವು
* ಕಾನ್ಸ್ಟೇಬಲ್ ( constable)
* ಸಬ್ ಇನ್ಸ್ಪೆಕ್ಟರ್ (SI)
* ಸರ್ಕಲ್ ಇನ್ಸ್ಪೆಕ್ಟರ್ ( CI )
* ಡಿ ಎಸ್ ಪಿ ( DSP )
* ಐ ಪಿ ಎಸ್ ( IPS ಅಧಿಕಾರಿ)
ಪ್ರತಿ ಹುದ್ದೆಗೆ ಬೇರೆ ಬೇರೆ ಅರ್ಹತೆಗಳು ಮತ್ತು ಪರೀಕ್ಷಾ ವಿಧಾನಗಳಿವೆ
* ಶೈಕ್ಷಣಿಕ ಅರ್ಹತೆ :
ಪೊಲೀಸ್ ಇಲಾಖೆಯಲ್ಲಿ ಸೇರಲು ಶೈಕ್ಷಣಿಕ ಅರ್ಹತೆ ಹುದ್ದೆಯ ಪ್ರಕಾರ ಬದಲಾಗುತ್ತದೆ
1. ಕಾನ್ಸ್ಟೇಬಲ್ ಹುದ್ದೆ : 10 ನೇ ತರಗತಿ ಅಥವಾ 12 ನೇ ತರಗತಿ ಉತ್ತೀರ್ಣರಾಗಿರಬೇಕು
2. ಸಬ್ ಇನ್ಸ್ಪೆಕ್ಟರ್ . ಯಾವುದೇ ಪದವಿ ಯನ್ನಾಗಲಿ ಪೂರ್ಣಗೊಳಿಸಿರಬೇಕು
3. ಡಿಎಸ್ಪಿ / ಐಪಿಎಸ್ : ಪದವಿ ಪೂರ್ಣಗೊಳಿಸಿ UPSC ಅಥವಾ ರಾಜ್ಯ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆ ಉತ್ತೀರ್ಣಗಾರಬೇಕು
ವಯೋಮಿತಿ .!
ವಯೋಮಿತಿ ಹುದ್ದೆಯ ಪ್ರಕಾರ ಬದಲಾಗುತ್ತದೆ
ಕಾನ್ಸ್ಟೇಬಲ್ : 18 ರಿಂದ 25 ವರ್ಷ
SI : 21 ರಿಂದ 28 ವರ್ಷ
IPS : 21 ರಿಂದ 32 ವರ್ಷ ( ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ )
ದೈಹಿಕ ಅರ್ಹತೆ :
ಪೊಲೀಸ್ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಅತ್ಯಂತ ಮುಖ್ಯ.
ಪುರುಷರಿಗೆ : ಎತ್ತರ : ಸುಮಾರು 168 ಸೆಂ ಮೀ ಮತ್ತು ಎದೆ : 86 ಸೆಂ ಮೀ. ( ವಿಸ್ತರಣೆ ಜೊತೆ )
ಮಹಿಳೆಯರಿಗೆ : ಎತ್ತರ : ಸುಮಾರು 157 ಸೆಂ ಮೀ , ಇವು ರಾಜ್ಯದ ನಿಯಮಾವಳಿಗಳ ಪ್ರಕಾರ ಸ್ಪಲ್ಪ ಬದಲಾಯಿಸಬಹುದು
ಆಯ್ಕೆ ಪ್ರಕ್ರಿಯೆ :
ಪೊಲೀಸ್ ಅಧಿಕಾರಿಗಳು ಆಯ್ಕೆ ಪ್ರಕ್ರಿಯೆ ಹಂತ ಹಂತವಾಗಿ ನಡೆಯುತ್ತದೆ
1. ಲಿಖಿತ ಪರೀಕ್ಷೆ (written exam) : ಸಾಮಾನ್ಯ ಜ್ಞಾನ, ಗಣಿತ, ತರ್ಕಶಕ್ತಿ, ಇಂಗ್ಲಿಷ್/ ಕನ್ನಡ ಭಾಷಾ ಪ್ರಶ್ನೆಗಳು ಇರುತ್ತವೆ
2. ದೈಹಿಕ ಪರೀಕ್ಷೆ: physical test ) : ಓಟ, ಉದ್ಧ ಜಿಗಿತ ,ಎತ್ತರ ಜಿಗಿತ ಮುಂತಾದ ದೈಹಿಕ ಪರೀಕ್ಷೆಗಳು ಇರುತ್ತವೆ
3. ವೈದ್ಯಕೀಯ ಪರೀಕ್ಷೆ ( medical test) : ಆರೋಗ್ಯದ ದೃಷ್ಟಿಯಿಂದ ಅಭ್ಯರ್ಥಿ ತಕ್ಕಮಟ್ಟಿಗೆ ಆರೋಗ್ಯವಾಗಿರಬೇಕು
4. ಸಂದರ್ಶನ ( interview ) : ಅಭ್ಯರ್ಥಿಯ ವ್ಯಕ್ತಿತ್ವ ಮತ್ತು ಆತ್ಮ ವಿಶ್ವಾಸವನ್ನು ಪರಿಶೀಲಿಸಲಾಗುವುದು
ಪರೀಕ್ಷೆಯ ವಿಷಯಗಳು :
ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೆಳಗಿನ ವಿಷಯಗಳನ್ನು ಒಳಗೊಂಡಿರುತ್ತದೆ
*. ಸಾಮಾನ್ಯ ಜ್ಞಾನ
*. ಭಾರತೀಯ ಸಂವಿಧಾನ
*. ಇತಿಹಾಸ
*. ಭೂಗೋಳಶಾಸ್ತ್ರ
*. ಗಣಿತ
*. ತಾರ್ಕಿಕ ಚಿಂತನೆ
*. ಪ್ರಸ್ತುತ ಘಟನೆಗಳು
ಐಪಿಎಸ್ ಅಧಿಕಾರಿ ಯಾಗಲು ನೆಡೆಯುವ ಪ್ರಕ್ರಿಯೆ
ಐಪಿಎಸ್ ಅಧಿಕಾರಿ ಅಗಳು UPSC ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಬೇಕು ಈ ಪರೀಕ್ಷೆಗಳಲ್ಲಿ ಮೂರು ಹಂತಗಳಿವೆ
1. ಪ್ರಿಲಿಮಿನರಿ ಪರೀಕ್ಷೆ
2. ಮೆನ್ಸ್ ಪರೀಕ್ಷೆ
3. ಸಂದರ್ಶನ
ಈ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ
ತರಬೇತಿ: – (training )
ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಈ ತರಬೇತಿಯಲ್ಲಿ , ಶಿಸ್ತಿನ ತರಬೇತಿ , ದೈಹಿಕ , ತರಬೇತಿ , ಕಾನೂನು ಜ್ಞಾನ , ಶಸ್ತ್ರಾಸ್ತ್ರ ಬಳಕೆ ಇವುಗಳನ್ನು ಕಲಿಸಲಾಗುತ್ತದೆ
ವೇತನ ಮತ್ತು ಸೌಲಭ್ಯ :
ಪೊಲೀಸ್ ಇಲಾಖೆಯಲ್ಲಿ ಉತ್ತಮ ವೇತನ ಮತ್ತು ಸೌಲಭ್ಯಗಳಿವೆ , ಸ್ಥಿರ ಸಂಬಳ , ಮನೆ ಭತ್ಯೆ , ವೈದ್ಯಕೀಯ ಸೌಲಭ್ಯ , ನಿವೃತ್ತಿ ಭತ್ಯೆ
ಸವಾಲುಗಳು :
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ತುಂಬ ಸವಾಲಿನ ಕೆಲಸ, ಧೀರ್ಘ ಸಮಯದ ಕೆಲಸ , ಒತ್ತಡದ ಪರಿಸ್ಥಿತಿ , ಅಪಾಯಕಾರಿಯಾದ ಕಾರ್ಯಗಳು , ಆದರೆ ದೇಶದ ಸೇವೆಯ ತೃಪ್ತಿ ದೊರೆಯುತ್ತದೆ
ಪರೀಕ್ಷೆ ಸಿದ್ಧತೆಗೆ ಸಲಹೆಗಳು :
ಪ್ರತಿ ದಿನ ಓದಿನ ಅಭ್ಯಾಸ ಮಾಡಬೇಕು , ಪ್ರಸ್ತುತ ಘಟನೆಗಳ ಕುರಿತು ತಿಳಿದುಕೊಳ್ಳಬೇಕು , ದೈಹಿಕ ವ್ಯಾಯಾಮ ಮಾಡಬೇಕು , ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು , 1 ರಿಂದ 10 ನೇ ತರಗತಿ ಪುಸ್ತಕಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕು ಇವುಗಳು ಪರೀಕ್ಷೆಗೆ ತುಂಬಾ ಸಹಾಯಕವಾಗಿವೆ
ಸಮಾರೋಪ :
ಪೊಲೀಸ್ ಇಲಾಖೆ ಯುವಕರಿಗೆ ಗೌರವಯುತ ಮತ್ತು ಸವಾಲಿನ ವೃತ್ತಿಯಾಗಿದೆ ಸರಿಯಾದ ಸಿದ್ಧತೆ , ಶ್ರಮ , ಮತ್ತು ದೃಢನಿಸ್ಚಯ ಇದ್ದರೆ ಯಾರಾದರೂ ಪೊಲೀಸ್ ಅಧಿಕಾರಿಯಾಗಬಹುದು. ದೇಶದ ಸೇವೆ ಮಾಡುವ ಆಸೆ ಇರುವ ಯುವಕರು ಈ ಕ್ಷೇತ್ರವನ್ನು ಆಯ್ಕೆ ಮಾಡಬಹುದು. ಇದು ಕೇವಲ ಉದ್ಯೋಗವಲ್ಲ ,ಸಮಾಜ ಸೇವೆಯ ಮಹತ್ವದ ಅವಕಾಶವಾಗಿದೆ
ನೆನಪಿರಲಿ :-
ನಿಮ್ಮ vishwavanione.com ತನ್ನ ಓದುಗರರಿಗೆ ನಿಖರವಾದ ಮಾಹಿತಿಯನ್ನು ಮಾತ್ರ ಪ್ರಕಟಿಸುತ್ತದೆ ಮತ್ತು ಯಾವುದೇ ಅನಧಿಕೃತ ಮಾಹಿತಿಗಳು ಅಥವಾ ಸುಳ್ಳು ಮಾಹಿತಿಯನ್ನು ಬಿತ್ತುವುದಿಲ್ಲ ಧನ್ಯವಾದಗಳು