Telegram Join My Telegram WhatsApp Join My WhatsApp

ಉಚಿತ ಶಿಕ್ಷಣ: ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ

ನಿಮ್ಮ ಮಗುವಿಗೆ ಗುಣಮಟ್ಟದ ಉಚಿತ ಶಿಕ್ಷಣ ಕೊಡಿಸಬೇಕು, ಆದರೆ ಖಾಸಗಿ ಶಾಲೆಗಳ ದುಬಾರಿ ಫೀಸ್ ಕಟ್ಟಲು ಸಾಧ್ಯವಾಗುತ್ತಿಲ್ಲವೇ ? Cinte ಬೇಡ, ಸರಕಾರವೇ ನಿಮ್ಮ ಮಗುವಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿ ಹೊರಲು ಸಿದ್ಧವಾಗಿದೆ. ಹೌದು,2026-27 ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಡಿಯ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಶುರುವಾಗಿದೆ.ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕೆ ಇದೊಂದು ಸುವರ್ಣಾವಕಾಶ

ಏನಿದು ಯೋಜನೆ?

ಹಿಂದುಳಿದ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಹೈಟೆಕ್ ಶಿಕ್ಷಣ ನೀಡುವ ಉದ್ಧೇಶದಿಂದ ಸರಕಾರ ಈ ವಸತಿ ಶಾಲೆಗಳನ್ನು( morarji desai residential school) ನೆಡೆಸುತ್ತಿದೆ. ಇಲ್ಲಿ ಕೇವಲ ಓದು ಮಾತ್ರ ಮುಖ್ಯವಲ್ಲ, ಊಟ, ವಸತಿ, ಎಲ್ಲವೂ ಸಂಪೂರ್ಣ ಉಚಿತ.

ಈ ಶಾಲೆಗಳ ವಿಶೇಷತೆಗಳೇನು?

ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಮುಗಿಬೀಳುಲು ಹಲವು ಕಾರಣಗಳಿವೆ :

* ಪಕ್ಕಾ ವಸತಿ ಶಾಲೆ : ಮಗು ಶಾಲೆಯಲ್ಲೇ ಇದ್ದುಕೊಂಡು ಓದಬಹುದು, ಸುರಕ್ಷಿತ ವಸತಿ ವ್ಯವಸ್ಥೆ ಇದೆ

* ಎಲ್ಲವೂ ಉಚಿತ :ವಸತಿ , ಪಠ್ಯ ಪುಸ್ತಕ, ಲೇಖನ, ಸಾಮಗ್ರಿ, ಸಮವಸ್ತ್ರ, ಶೂ ಮತ್ತು ಸಾಕ್ಸ್ ಎಲ್ಲವೂ ಸರಕಾರದಿಂದಲೇ ಉಚಿತ

* CBSE ಪಠ್ಯಕ್ರಮ: ಜಿಲ್ಲೆಗೊಂದರಂತೆ ಡಾ/ ಎ ಪಿ ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ CBSE ಪಠ್ಯಕ್ರಮ ಇರುತ್ತದೆ

* ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ : ಬರಿ ಶಾಲಾ ಶಿಕ್ಷಣವಲ್ಲ ಮುಂದೆ ಬರುವ JEE/ NEET, CLAT ನಂತಹ ಪ್ರವೇಶ ಪರೀಕ್ಷೆಗಳಿಗೆ ಶಾಲಾ ಹಂತದಲ್ಲೇ ತರಬೇತಿ  ನೀಡಲಾಗುತ್ತದೆ

* ಇತರೆ ಕೌಶಲ್ಯಗಳು : ಸ್ಪೋಕನ್ ಇಂಗ್ಲಿಷ್, ನಾಯಕತ್ವ ತರಬೇತಿ, ಮತ್ತು ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿ ಕೂಡ ನೀಡಲಾಗುತ್ತದೆ

ಸೀಟುಗಳ ಮೀಸಲಾತಿ ಹೀಗಿದೆ :

1. 75% ಸೀಟುಗಳು : ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್ ಮತ್ತು               ಪಾರ್ಸಿ ಸಮುದಾಯದ ವಿದ್ಯಾರ್ಥಿಗಳಿಗೆ

2. 25% ಸೀಟುಗಳು  : SC & ST  ಮತ್ತು ಇತರೆ ಹಿಂದುಳಿದ ವರ್ಗದ                   ವಿಧ್ಯಾರ್ಥಿಗಳಿಗೆ .

3. ವಿಶೇಷ ಸೂಚನೆ :ಒಟ್ಟು ಸೀಟುಗಳಲ್ಲಿ ಶೇಕಡಾ 50% ರಷ್ಟು ಹೆಣ್ಣು                   ಮಕ್ಕಳಿಗೆ ಮೀಸಲಿವೆ.

ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು ?

* ವಿದ್ಯಾರ್ಥಿಯು ಪ್ರಸ್ತುತ (2025-26 ನೇ ಸಾಲಿನಲ್ಲಿ )ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿರಬೇಕು .

* ಮಗು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

* ವಯಸ್ಸು 09 ರಿಂದ 13 ವರ್ಷದ ಒಳಗಿರಬೇಕು

* ಕುಟುಂಬದ ವಾರ್ಷಿಕ ಆದಾಯ 2.5  ಲಕ್ಷ ರೂಪಾಯಿ ಮೀರಿರಬಾರದು

ಪ್ರಮುಖ ದಿನಾಂಕಗಳು ( calendar of events )

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 07-01-2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  10-02-2026

ಲಿಖಿತ ಪರೀಕ್ಷೆ ನಡೆಯುವ ದಿನಾಂಕ 29-03-2026

ಫಲಿತಾಂಶ ಪ್ರಕಟಣೆ 20-04-2026

ಅರ್ಜಿ ಸಲ್ಲಿಸುವುದು ಹೇಗೆ ?

ಅರ್ಜಿ ಸಲ್ಲಿಸಲು ನೀವು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಬಹುದು, ಅಥವಾ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಅಧಿಕೃತ ಸೇವಾಸಿಂಧೂ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲೆಗಳು :

1. ವಿದ್ಯಾರ್ಥಿಯ SATS ID

2. ಆಧಾರ್ ಕಾರ್ಡ್ ಪ್ರತಿ

3. ಅಂಕಪಟ್ಟಿ (ಹಿಂದಿನ ತರಗತಿಯ )

4. ಜಾತಿ ಮತ್ತು ಆದಾಯ ಪ್ರಮಾಣಪತ್ರ

5. ಚಾಲ್ತಿಯಲ್ಲಿರುವ ಮೊಬೈಲ್ ನಂಬರ್

ಸೂಚನೆ :

ಇದು ನಿಮ್ಮ ಮಗುವಿನ ಓದಿಗೆ ಉತ್ತಮ ಬುನಾದಿ ಹಾಕುವ ಅವಕಾಶ.ಕೊನೆಯ ದಿನಾಂಕದವರೆಗೆ ಕಾಯಬೇಡಿ , ತಕ್ಷಣ ದಾಖಲೆಗಳನ್ನು ರೆಡಿ ಮಾಡಿಕೊಂಡು ಅರ್ಜಿ ಸಲ್ಲಿಸಿ . ಉಚಿತ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ಮಗುವನ್ನು ತಯಾರು ಮಾಡುವ ಈ ಅವಕಾಶವನ್ನು ಸದುಪಯೋಗಮಾಡಿಕೊಳ್ಳಿ.

Leave a Comment