Telegram Join My Telegram WhatsApp Join My WhatsApp

ಗರ್ಭಿಣಿಯರಿಗೆ ₹11,000 ಸರ್ಕಾರಿ ಹಣ ಬೇಕೇ ? ನಿಮ್ಮ ಬಳಿ ಈ ಮೂರು ದಾಖಲೆಗಳಿವೆಯ ಮೊದಲು ಚೆಕ್ ಮಾಡಿ !

ನಿಮ್ಮ ಮನೆಯಲ್ಲಿ ಯಾರಾದರೂ ಗರ್ಭಿಣಿಯರು ಇದ್ದಾರೆಯೇ ?  ಗರ್ಭಿಣಿಯರಿಗೆ ಆಸ್ಪತ್ರೆ ಖರ್ಚು,ತಾಯಿ ಮತ್ತು ಮಗುವಿನ ಪೌಷ್ಟಿಕ ಆಹಾರದ ಚಿಂತೆ ನಿಮ್ಮನ್ನು ಕಾಪಾಡುತ್ತದೆಯೇ ? ಹಾಗಾದರೆ ಈ ಮಹತ್ವದ ಮಾಹಿತಿ ನಿಮಗಾಗಿ.

ಗರ್ಭಿಣಿ ಮತ್ತು ಬಾಣಂತಿಯರ ಆರೈಕೆಗೆ ಹಣದ ತೊಂದರೆಯಾಗಲಿದೆ ಎಂದು ಕೇಂದ್ರ ಸರ್ಕಾರವೇ ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ಭರ್ಜರಿ ಹಣ ಜಮೆ ಮಾಡುತ್ತಿದೆ . ಆದರೆ ಸರಿಯಾದ ಮಾಹಿತಿ ಇಲ್ಲದ ಕಾರಣ ನಮ್ಮೂರಿನ ಬಹಳಷ್ಟು ಜನ ಈ ಹಣವನ್ನು ಪಡೆಯುತ್ತಲೇ ಇಲ್ಲ , ನೀವು ಈ ತಪ್ಪು ಮಾಡಬೇಡಿ.

ಯಾವ ಯೋಜನೆ ಇದು ?

ಇದುವೇ ಕೇಂದ್ರಸರ್ಕಾರದ ಮಹತ್ವಾಕಾಂಕ್ಷಿ  ‘ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ‘ (PMMVY). ಗರ್ಭಿಣಿ ಮಹಿಳೆಯರು ಹಾಗೂ ಹಾಲುಣಿಸುವ ತಾಯಂದಿರ ಆರೋಗ್ಯ ಮತ್ತು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಸರ್ಕಾರ ಈ ಆರ್ಥಿಕ ನೆರವು ನೀಡುತ್ತಿದೆ .

ಈ ಯೋಜನೆಯ ಪ್ರಮುಖ ಉದ್ದೇಶ ಏನು ?

ನಮ್ಮ ದೇಶವು ಜನಸಂಖ್ಯೆ ಯಲ್ಲಿ ಪ್ರಥಮ ಸ್ಥಾನದಲ್ಲಿದೆ ಆದ್ದರಿಂದ ನಮ್ಮ ದೇಶದಲ್ಲಿ ಬಡವರ ಸಂಖ್ಯೆಯು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ ಇದರಿಂದ ಬಡ ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ  ಬಾಣಂತಿ ಸಂಧರ್ಭದಲ್ಲಿ ಮತ್ತು ಹೆರಿಗೆ ಸಂಧರ್ಭದಲ್ಲಿ ಆರ್ಥಿಕ ಸ್ಥಿತಿ ಇರುವುದಿಲ್ಲ ಆದ ಕಾರಣ ಆರ್ಥಿಕವಾಗಿ ಬಡ ಮಹಿಳೆಯರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಈ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಮೂಲಕ ₹11,000 ಸಾವಿರ ರುಪಾಯಿ ಕೇಂದ್ರ ಸರ್ಕಾರ ನೀಡುತ್ತದೆ .

ಎಚ್ಚರಿಕೆ? ಹಣ ಪಡೆಯಲು ಇದು ಕಡ್ಡಾಯ !

ಯೋಜನೆಯ ವಿವರ ತಿಳಿಯುವ ಮುನ್ನ ಈ ಪ್ರಮುಖ ವಿಷಯ ಗಮನಿಸಿ. ಅರ್ಜಿದಾರರ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು . ನಿಮ್ಮ  ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ ಸರ್ಕಾರದಿಂದ ಹಣ ಬಿಡುಗಡೆಯಾದರೂ , ನಿಮ್ಮ ಅಕೌಂಟಿಗೆ ಬಂದು ಬೀಳುವುದಿಲ್ಲ , ತಕ್ಷಣ ಬ್ಯಾಂಕಿಗೆ ಹೋಗಿ ಇದನ್ನು ಖಚಿತಪಡಿಸಿಕೊಳ್ಳಿ.

ಹಣ ಹೇಗೆ ಮತ್ತು ಯಾವಾಗ ಸಿಗುತ್ತದೆ ?

ಈ ಯೋಜನೆಯಡಿ ಅರ್ಹ ಮಹಿಳೆಯರಿಗೆ ಎರಡು ಹಂತಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲಾಗುತ್ತದೆ

1. ಮೊದಲ ಮಗುವಿಗೆ : ಒಟ್ಟು ₹5,000

* 1 ನೇ ಕಂತು ₹1,000 : ಗರ್ಭಧಾರಣೆ ನೋಂದಣಿ ಮಾಡಿದ ತಕ್ಷಣ

* 2 ನೇ ಕಂತು ₹2,000 :ಗರ್ಭಧಾರಣೆಯ 6 ನೇ ತಿಂಗಳ ನಂತರ (ಕನಿಷ್ಠ ಒಂದು ಪ್ರಸವಪೂರ್ವ ತಪಾಸಣೆ ಆಗಿರಬೇಕು )

* 3 ನೇ ಕಂತು ₹2,000 : ಮಗು ಜನಿಸಿ , ಜನನ ನೋಂದಣಿ ಮತ್ತು ಮೊದಲ ಹಂತದ ಲಸಿಕೆ ಮುಗಿದ ಮೇಲೆ .

2. ಎರಡನೇ ಮಗು ( ಹೆಣ್ಣು ಮಗುವಾಗಿದ್ದರೆ )ಒಟ್ಟು ₹6,000

* ಎರಡನೇ ಮಗು ಹೆಣ್ಣಾಗಿದ್ದರೆ , ಪ್ರಸವದ ನಂತರ ಒಂದೇ ಕಂತಿನಲ್ಲಿ ₹6,000 ಸಿಗುತ್ತದೆ (ಇದಕ್ಕಾಗಿ ಮಗು ಜನಿಸಿ ಆರೋಗ್ಯ ತಪಾಸಣೆ ಪೂರ್ಣಗೊಂಡಿರಬೇಕು )

ಈ ರೀತಿ ಮೊದಲ ಮತ್ತು ಎರಡನೇ ಮಗುವಿಗೆ ಸೇರಿ ಒಟ್ಟು ₹11,000 ವರೆಗೆ ನೆರವು ಪಡೆಯಬಹುದು .

ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ದಾಖಲೆಗಳು :

1.ತಾಯಿಯ ಆಧಾರ್ ಕಾರ್ಡ್.

2. ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಪಾಸ್ ಬುಕ್

3. ‘ ತಾಯಿ-ಮಗು  ರಕ್ಷಣಾ ಕಾರ್ಡ್ ‘ (MCP card )

*ಅರ್ಜಿ ಸಲ್ಲಿಕೆ ಎಲ್ಲಿ?

ನೀವು PMMVY ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು, ಆದರೆ ಆನ್ ಲೈನ್ ನಲ್ಲಿ ನೀವೇ ಅರ್ಜಿ ಸಲ್ಲಿಸುವ ಗೋಜಿಗೆ ಹೋಗುವ ಬದಲು , ನೇರವಾಗಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಆಶಾ ಕಾರ್ಯಕರ್ತೆಯರ ಸಂಪರ್ಕಿಸುವುದು ಅತ್ಯುತ್ತಮ.

ಅವರು ಆಸ್ಪತ್ರೆಯಲ್ಲಿ ತಾಯಿ-ಮಗು ರಕ್ಷಣಾ ಕಾರ್ಡ್ (MCP card) ಮಾಡಿಸುವುದರ ಜೊತೆಗೆ , ನಿಮ್ಮ ಅರ್ಜಿಯನ್ನು ಯಾವುದೇ ತಪ್ಪಿಲ್ಲದೆ ಸಿಸ್ಟಂನಲ್ಲಿ  ಅಪ್ ಲೋಡ್ ಮಾಡಲು ಸಹಾಯ ಮಾಡುತ್ತಾರೆ . ವಿಳಂಬ ಮಾಡಬೇಡಿ , ತಕ್ಷಣ ಮಾಹಿತಿ ಪಡೆದು i ಯೋಜನೆಯ ಲಾಭ ಪಡೆಯಿರಿ .

ನಮ್ಮ ದೇಶದಲ್ಲಿ ಬಡತನದಿಂದ ಬಹಳಷ್ಟು ಕುಟುಂಬಗಳು ಬೀದಿಯಲ್ಲಿ ಆದ್ದರಿಂದ ಪ್ರದಾನ ಆದ್ದರಿಂದ ಬಡ ಕುಟುಂಬಗಳ ಹಿತದೃಷ್ಟಿಯಿಂದ ಈ ಯೋಜನೆಯ ಮೂಲಕ ಬಡ ಕುಟುಂಬದ ಗರ್ಭಿಣಿ ಮಹಿಳೆಯರಿಗೆ ಹಣವನ್ನು  ಈ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಯನ್ನು ರೂಪಿಸಿ ಜಾರಿಗೆ ತಂದು ಇದರ ಮೂಲಕ ₹11,000  ಸಾವಿರದಷ್ಟು ಹಣ ವನ್ನು ಕೇಂದ್ರ ಸರ್ಕಾರ ನೀಡುತ್ತದೆ ಇದರಿಂದ ಬಡಕುಟುಂಬದ ಮಹಿಳೆಯರು ಆರ್ಥಿಕವಾಗಿ ಬಹಳಷ್ಟು ಸಹಾಯವಾಗುತ್ತದೆ ಎಂಬ ಉದ್ಧೇಶ ಹೊಂದಿದೆ

Leave a Comment